ಹಳಿ ತಪ್ಪಿದ ಬೆಂಗಳೂರು-ತಾಳಗುಪ್ಪ ಇಂಟರ್ಸಿಟಿ ರೈಲು + ‘ನೀಲಕಂತ್’ ಎಂಬ ಈ ನೀಲಿ-ಆಲೂಗಡ್ಡೆ ಪ್ರಯೋಜನಗಳು

:ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಸವಾಪುರ ಬಳಿ ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. 

Representative image

ಹೃದಯ, ಕ್ಯಾನ್ಸರ್, ಮಧುಮೇಹ ಸಮಸ್ಯೆಗಳಿಗೆ ಈ ‘ನೀಲಿ ಆಲೂಗಡ್ಡೆ’ ರಾಮಬಾಣ!

ಹೃದಯ, ಕ್ಯಾನ್ಸರ್, ಮಧುಮೇಹ ರೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾದ ನೀಲಿ ಆಲೂಗಡ್ಡೆ ಈ ಮೂರು ರೋಗಗಳಿಗೆ ರಾಮಬಾಣವಾಗಬಲ್ಲದು ಎಂದು ಹೇಳಲಾಗಿದೆ.

blue herbal potato

ಪಾಟ್ನಾ: ಹೃದಯ, ಕ್ಯಾನ್ಸರ್, ಮಧುಮೇಹ ರೋಗಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾದ ನೀಲಿ ಆಲೂಗಡ್ಡೆ ಈ ಮೂರು ರೋಗಗಳಿಗೆ ರಾಮಬಾಣವಾಗಬಲ್ಲದು ಎಂದು ಹೇಳಲಾಗಿದೆ.

ಪಾಟ್ನಾದ ಕೇಂದ್ರ ಆಲೂಗಡ್ಡೆ ಸಂಶೋಧನಾ ಕೇಂದ್ರದಲ್ಲಿ ಹೊಸ ಬಗೆಯ ಆಲೂಗಡ್ಡೆ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಬೆಳೆಸಲಾಗುತ್ತಿದೆ. ‘ನೀಲಿ ಗಿಡಮೂಲಿಕೆ ಆಲೂಗಡ್ಡೆ’ ಎಂದು ಕರೆಯಲ್ಪಡುವ ಈ ತಳಿಯು ಕ್ಯಾನ್ಸರ್, ಮಧುಮೇಹ ಮತ್ತು  ಹೃದಯ ರೋಗಿಗಳಿಗೆ ಪ್ರಯೋಜನಕಾರಿಯಾದ ಗಿಡಮೂಲಿಕಾ ಗುಣಗಳನ್ನು ಹೊಂದಿದೆ ಎನ್ನಲಾಗಿದೆ. ಈ ಕುರಿತಂತೆ ಕೇಂದ್ರ ಆಲೂಗಡ್ಡೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಂಭು ಕುಮಾರ್ ಅವರು ಮಾಹಿತಿ ನೀಡಿದ್ದು, ಇತರೆ ಆಲೂಗೆಡ್ಡೆಗಳಿಗೆ ಹೋಲಿಕೆ ಮಾಡಿದರೆ  ‘ನೀಲಕಂತ್’ ಎಂಬ ಈ ನೀಲಿ-ಆಲೂಗಡ್ಡೆ  ವೈವಿಧ್ಯಮಯ ಗುಣಗಳನ್ನು ಹೊಂದಿದೆ. ಇತರ ವಿಧದ ಆಲೂಗಡ್ಡೆಗಳಿಗಿಂತ ಹೆಚ್ಚು ಪ್ರಯೋಜನಕಾರಿ ಗಿಡಮೂಲಿಕೆ ಗುಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ವೈಶಾಲಿ ಜಿಲ್ಲೆಯ ನಮೀಡಿಹ್‌ನ ಪ್ರಗತಿಪರ ರೈತ ಜಿತೇಂದ್ರ ಕುಮಾರ್ ಸಿಂಗ್ ಈ ತಳಿ ಆಲೂಗಡ್ಡೆಯನ್ನು ಬೆಳೆಸುತ್ತಿದ್ದು, ಈ ಹೊಸ ಆಲೂಗಡ್ಡೆಯ ವಿಶೇಷ ವಿಷಯವೆಂದರೆ ಅದರ ಒಳ ಮತ್ತು ಹೊರ ಭಾಗಗಳ ಸೇವನೆಯು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು  ಸಹಾಯ ಮಾಡುತ್ತದೆ. ಅಲ್ಲದೆ ಆಲೂಗಡ್ಡೆ ಆಂಟಿ-ಆಕ್ಸಿಡೆಂಟ್ ಫೈಬರ್, ಮೆಗ್ನೀಸಿಯಮ್ ಮತ್ತು ತಾಮ್ರದಿಂದ ಸಮೃದ್ಧವಾಗಿದೆ. ಆಲೂಗೆಡ್ಡೆಯ ಈ ಗುಣಗಳೇ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ರೋಗಿಗಳಿಗೆ ವರದಾನವಾಗಬಲ್ಲದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ ನ ಹೆಚ್ಚಿನ ಸೇವನೆಯು ಆರೋಗ್ಯಕರ  ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ದೃಷ್ಟಿ ಸಾಮರ್ಥ್ಯವನ್ನು ಮತ್ತು ಕಣ್ಣಿನ ಆರೋಗ್ಯ ವೃದ್ಧಿ ಸೇರಿದಂತೆ ಹಲವಾರು ಪ್ರಯೋಜನಗಳಿಗೆ ಸಂಬಂಧಿಸಿದ ಗುಣಲಕ್ಷಣಗಳನ್ನು ಹೊಂದಿದೆ. ಅಂತೆಯೇ ಹೃದ್ರೋಗ, ಕೆಲವು ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಿಂಗ್ ಹೇಳಿದರು.

ವರ್ಷಗಳ ಪ್ರಯೋಗದ ನಂತರ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ವಿಧದ ಒಂದು ಆಲೂಗಡ್ಡೆ ಸುಮಾರು 60 ರಿಂದ 80 ಗ್ರಾಂ ತೂಗುತ್ತದೆ. ನೀಲಿ ಗಿಡಮೂಲಿಕಾ ಆಲೂಗಡ್ಡೆಯನ್ನು ಬೇಯಿಸಿದ ನಂತರ ಸೇವಿಸಬಹುದು. ನಾವು ನಿತ್ಯ ಸೇವಿಸುವ ಸಾಲಾಡ್ನ ಭಾಗವಾಗಿಯೂ ಈ ಆಲೂಗೆಡ್ಡೆಯನ್ನು ಸೇವಿಸಬಹುದು.  ಇದರ ಹೆಚ್ಚಿನ ಇಳುವರಿ ನೀಡುವ ಗುಣವು ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಗಳಿಕೆಯ ಅವಕಾಶವನ್ನು ನೀಡುತ್ತದೆ. ಈ ಹೊಸ ಬಗೆಯ ಆಲೂಗೆಡ್ಡೆಗೆ ಇನ್ನೂ ವಿಜ್ಞಾನಿಗಳು ಹೆಸರು ನೀಡಿಲ್ಲ. ಕೃಷಿ ವಿಜ್ಞಾನಿಗಳು, ಕೃಷಿ ಪ್ರಯೋಗ ಉದ್ದೇಶಗಳಿಗಾಗಿ ಕೋಡ್ ನೀಡಿದ್ದಾರೆ ಎಂದು  ಕೃಷಿ ಮಾಡುತ್ತಿರುವ ರೈತ  ಜಿತೇಂದ್ರ ಕುಮಾರ್ ಸಿಂಗ್ ಹೇಳಿದರು.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಸವಾಪುರ ಬಳಿ ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. 

ರೈಲ್ವೇ ಟ್ರಾಕ್ ಮಧ್ಯೆ ರಾತ್ರಿ 8.24 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಇಂಟರ್ ಸಿಟಿ ಟ್ರೇನ್ ತೆರಳುತ್ತಿತ್ತು. ಈ ವೇಳೆ ರೈಲಿನ‌ ಇಂಜಿನ್​ನ ಗಾಲಿ ರೈಲ್ವೆ ಟ್ರಾಕ್ ಬಿಟ್ಟು ಕೆಳಗೆ ಇಳಿದಿದೆ. ಇದರ ಪರಿಣಾಮದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಗಾಯಗಳು ಸಂಭವಿಸಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಪ್ರಯಾಣಿಕರೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆಂದು ವರದಿಗಳು ತಿಳಿಸಿವೆ. 

ಶಿವಮೊಗ್ಗದಿಂದ ರಾತ್ರಿಯೇ ಇಂಜಿನಿಯರಿಂಗ್ ಸ್ಟಾಫ್ ಸ್ಥಳಕ್ಕೆ ತೆರಳಿ ಇಂಜಿನ್‍ನಿಂದ ಬೋಗಿಗಳನ್ನು ಬೇರ್ಪಡಿಸಿ ಶಿವಮೊಗ್ಗಕ್ಕೆ ಕಳುಹಿಸಿ ಇಂದು ಬೆಳಿಗ್ಗೆ ಪುನಃ ಬೆಂಗಳೂರಿಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.

ಸದರಿ ರೈಲ್ವೆ ಇಂಜಿನ್‍ಅನ್ನು ದುರಸ್ತಿಗಾಗಿ ಆನಂದಪುರ ರೈಲು ನಿಲ್ದಾಣಕ್ಕೆ ಕೊಂಡೊಯ್ಯಲಾಗಿದೆ. ಇಂದು ಈ ಮಾರ್ಗದ ಎಲ್ಲಾ ರೈಲು ಸಂಚಾರ ಎಂದಿನಂತೆ ಮುಂದುವರಿದಿದೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *