


ಸಿದ್ದಾಪುರ ತಾಲೂಕಿನ ತ್ಯಾಗ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರೀಶಿ ರಸ್ತೆಯ ಕಲಗದ್ದೆಯಿಂದ ನಾಣಿಕಟ್ಟಾವರೆಗೆ ಗ್ರಾಪಂ ಉಪಾಧ್ಯಕ್ಷ ವೆಂಕಟೇಶ ಹೆಗಡೆ ಕಲಗದ್ದೆ ಅವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳನ್ನು ಭಾನುವಾರ ತೆರವು ಮಾಡಲಾಯಿತು. ರವೀಂದ್ರ ಹೆಗಡೆ, ಮಂಜುನಾಥ ಹೆಗಡೆ, ವಿಶ್ವೇಶ್ವರ ಹೆಗಡೆ, ರಮಾಕಾಂತ ಹೆಗಡೆ,ಚಂದ್ರಶೇಖರ ಭಟ್ಟ, ರಾಜೇಶ ಹಸ್ಲರ್, ಸುರೇಶ ಶೇಟ್,ವಿನಾಯಕ ಶೇಟ್,ಸಂತೋಷ ಕುರ್ದೇಕರ್, ಮಹೇಶ ಎನ್, ಪ್ರಜ್ವಲ ಪಿ, ಪ್ರಕಾಶ ಜಿ, ವಿಶಾಲ್ ಎ, ನಂದನ ಎಸ್, ಗಜಾನನ ಜಿ, ಲಕ್ಷö್ಮಣ ಎನ್, ಶ್ರೀಕಾಂತ ಎನ್, ರವಿ ಎಂ, ಆನಂದ ಇತರರಿದ್ದರು.



ಸಿದ್ದಾಪುರ
ತಾಲೂಕಿನ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೂರು ಹೆಗ್ಗೆರೆ ಕೆರೆ ಅಂಗಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಹಾಗೂ ಹುಸೂರು ಊರ ಕಮಿಟಿ ಆಶ್ರಯದಲ್ಲಿ ಗಿಡ ನಾಟಿ ಕಾರ್ಯಕ್ರಮ ಭಾನುವಾರ ನಡೆಯಿತು.
ಹಲಗೇರಿ ಗ್ರಾಪಂ ಅಧ್ಯಕ್ಷೆ ಮೋಹಿನಿ ನಾಯ್ಕ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರಮೇಶ ಹೆಗಡೆ ಹಾರ್ಸಿಮನೆ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕೆರಯಲ್ಲಿನ ಹೂಳನ್ನು ತೆಗೆದಿದ್ದರಿಂದ ಇಂದು ಕೆರೆಯಲ್ಲಿ ನೀರು ನಿಂತಿದೆ. ಕೆರೆಯ ಶುಚಿತ್ವ ಹಾಗೂ ನೀರಿನ ಬಳಕೆಯನ್ನು ಗ್ರಾಮಸ್ಥರು ಸರಿಯಾಗಿ ನಿರ್ವಹಿಸಬೇಕು. ಕೆರೆ ಏರಿಯ ಮೇಲೆ ನೆಟ್ಟ ಗಿಡದ ರಕ್ಷಣೆ ಮಾಡುವುದು ಮುಖ್ಯ ಎಂದರು.
ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ ಅವರು ಗಿಡ ನೆಡುವ ಉದ್ದೇಶವನ್ನು ವಿವರಿಸಿದರು. ಗ್ರಾಪಂ ಉಪಾಧ್ಯಕ್ಷ ಪರಮೇಶ್ವರ ಗೌಡ,ಸದಸ್ಯೆ ಸುಶೀಲಾ ನಾಯ್ಕ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ಊರ ಕಮೀಟಿ ಅಧ್ಯಕ್ಷ ವಸಂತ ನಾಯ್ಕ, ಗಣಪತಿ ನಾಯ್ಕ, ಊರಿನ ಹಿರಿಯರಾದ ಮಂಜುನಾಥ ನಾಯ್ಕ, ಕೆರೆ ಸಮಿತಿ ಕಾರ್ಯದರ್ಶಿ ಪ್ರಕಾಶ ನಾಯ್ಕ , ಶೌರ್ಯ ತಂಡದ ಸಂಯೋಜನ ಚಂದ್ರಶೇಖರ ಹಾಗೂ ಗ್ರಾಮಸ್ಥರಿದ್ದರು.
ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿವಿಧ ಜಾತಿಯ ಹಣ್ಣಿನ ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಮಹಾದೇವ ಬಿ, ಮೇಲ್ವಿಚಾರಕಿ ಪೂರ್ಣಿಮಾ, ಸೇವಾಪ್ರತಿನಿಧಿಗಳಾದ ಮಧುಮತಿ, ಭಾರತಿ, ಪಲ್ಲವಿ ಇತರರಿದ್ದರು. (kpc)

