


ಸಿದ್ದಾಪುರ,
ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಸೆ. ೮ರಂದು ಮಧ್ಯಾಹ್ನ ೪ರಿಂದ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಭಾಭವದನಲ್ಲಿ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಪರಮೇಶ್ವರ ಹೆಗಡೆ ಐನಬೈಲ್, ಮದ್ದಳೆಯಲ್ಲಿ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆಯಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ ಸಹಕರಿಸುವರು. ಅರ್ಥಧಾರಿಗಳಾಗಿ ವಿಶ್ವೇಶ್ವರ ಭಟ್ಟ ಸುಣಂಬಳ್ಳ, ವಾಸುದೇವ ರಂಗ ಭಟ್ಟ ಮಧೂರು ಹಾಗೂ ಸೀತಾರಾಮ ಚಂದು ಶಿರಸಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸ್ಫೈಸಸ್ ಪ್ರೊಡ್ಯೂಸರ್ ಕಂಪನಿಯ ವ್ಯಾಪಾರಿ ಅಂಗಳ ಉದ್ಘಾಟನೆ ಮತ್ತು ವಸುಂಧರಾ ಗಾರ್ಡನ್ ಸ್ಪೇಶಲ್ ಸಾವಯವ ಗೊಬ್ಬರ ಬಿಡುಗಡೆ ಕಾರ್ಯಕ್ರಮ ಸೆ.೯ರಂದು ಸಂಜೆ ೪ಕ್ಕೆ ಕಂಪನಿಯ ಆವರಣದಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್.ವೈದ್ಯ ಉದ್ಘಾಟಿಸುವರು. ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆವಹಿಸುವರು. ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಗೌಡರ್ ಮುಠ್ಠಳ್ಳಿ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೆಂ.ವೈದ್ಯ, ನಿರ್ದೇಶಕರಾದ ರವೀಂದ್ರ ಹೆಗಡೆ ಹಿರೇಕೈ, ವಸುಮತಿ ಬಾಲಚಂದ್ರ ಭಟ್ಟ, ಅಶೋಕ ಹೆಗಡೆ ಅಬ್ಬಿಗದ್ದೆ ಉಪಸ್ಥಿತರಿರುತ್ತಾರೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ ತಿಳಿಸಿದ್ದಾರೆ.
ಗೋದಾಮು ಉದ್ಘಾಟನೆ: ಹಾರ್ಸಿಕಟ್ಟಾ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಾರ್ಸಿಕಟ್ಟಾ ದ ನೂತನ ಗೋದಾಮಿನ ಉದ್ಘಾಟನೆ ಸೆ.೯ರಂದು ಮಧ್ಯಾಹ್ನ ೩ಕ್ಕೆ ನಡೆಯಲಿದೆ.
ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆವಹಿಸುವರು. ಸಚಿವ ಮಂಕಾಳ ಎಸ್ ವೈದ್ಯ ಉದ್ಘಾಟಿಸುವರು. ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೆಂ ವೈದ್ಯ, ಮಹಾಬಲೇಶ್ವರ ಭಟ್ಟ ಅಗ್ಗೇರೆ, ಇಂದಿರಾ ಹೆಗಡೆ ಹಾರ್ಸಿಕಟ್ಟಾ, ರವೀಂದ್ರ ಹೆಗಡೆ ಹಿರೇಕೈ, ಸಿದ್ದಾರ್ಥ ಡಿ.ಗೌಡರ್ ಇತರರು ಉಪಸ್ಥಿತರಿರುತ್ತಾರೆ.
