ಲೋಕ ಅದಾಲತ್‌: ಸಂಧಾನ ಮೂಲಕ 64.13 ಲಕ್ಷ ಪ್ರಕರಣಗಳು ಇತ್ಯರ್ಥ, ಸಾರ್ವಕಾಲಿಕ ದಾಖಲೆ

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಫೆಬ್ರವರಿ 11, 2023 ರಂದು ನಡೆಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 64.13 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಫೆಬ್ರವರಿ 11, 2023 ರಂದು ನಡೆಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 64.13 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಕೆಎಸ್‌ಎಲ್‌ಎಸ್‌ಎ ಅಧ್ಯಕ್ಷ ನ್ಯಾಯಮೂರ್ತಿ ಬಿ ವೀರಪ್ಪ ಅವರು, 62.26 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು, 4.14 ಕಂದಾಯ ಇಲಾಖೆ ಪ್ರಕರಣಗಳು, 670 ಮ್ಯಾಟ್ರಿಮೋನಿಯಲ್ ಪ್ರಕರಣಗಳು ಮತ್ತು 2,724 ಆಸ್ತಿ ವಿಭಜನೆ ದಾವೆ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಹಿಂದಿನ ಲೋಕ ಅದಾಲತ್‌ಗಳಿಗೆ ಹೋಲಿಸಿದರೆ ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು.

ನವೆಂಬರ್ 12, 2022 ರಂದು ನಡೆದ ಲೋಕ ಅದಾಲತ್‌ನಲ್ಲಿ 14.77 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಕೆಎಸ್‌ಎಲ್‌ಎಸ್‌ಎ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ ಎಂದು ತಿಳಿಸಿದರು.

ಮೋಟಾರು ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಒಟ್ಟು 4,050 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 179 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. ಹಾಸನದ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟ್‌ನಲ್ಲಿದ್ದ ಪ್ರಕರಣವೊಂದರಲ್ಲಿ 1.25 ಕೋಟಿ ರೂಪಾಯಿ ಪರಿಹಾರವನ್ನು ವಿಮಾ ಸಂಸ್ಥೆಯ ಮೂಲಕ ಕೊಡಿಸಲಾಗಿದೆ.

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇದ್ದ 23 ವರ್ಷ ಹಳೆಯ ಆಸ್ತಿ ಪಾಲಿನ ಕುರಿತಾದ ದಾವೆ ಹಾಗೂ ಬಳ್ಳಾರಿಯ ಹೊಸಪೇಟೆ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇದ್ದ 22 ವರ್ಷ ಹಳೆಯ ಆಸ್ತಿ ವಿಭಜನೆಯ ದಾವೆಯನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ.


_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು...

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

ಕೆ.ಜಿ. ಬಣದ ಪ್ರತಿಪಾದನೆಗೆ ಕೋರ್ಟ್ ಅಸ್ತು.. ನಾಮಧಾರಿ ಅಭಿವೃದ್ಧಿ ಸಂಘ ನಿರಾಳ

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ...

ವಿಪತ್ತು ನಿರ್ವಹಣೆಯಲ್ಲಿ ಶೌರ್ಯ ತಂಡಗಳ ಪಾತ್ರ ಮಹತ್ವದ್ದು:- ತಹಸೀಲ್ದಾರ್ ಮಂಜುಳ ನಾಯಕ್

ಸಿದ್ದಾಪುರ ಸಿದ್ದಾಪುರ, ಅ. 26: ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸುವಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡಗಳ ಪಾತ್ರ ಮಹತ್ವದ್ದಾಗಿದೆ....

ಅಂತರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಕಂಚು ಪಡೆದ ಶ್ಯಾಮಸುಂದರ ಜಿ.

ಸಿದ್ದಾಪುರ: ಬೆಂಗಳೂರಿನಲ್ಲಿ ನಡೆದ Masters Asian Aquatic Swimming Championship – 2026 ಅಂತಾರಾಷ್ಟ್ರೀಯ ಈಜು ಕ್ರೀಡಾಕೂಟದಲ್ಲಿ ಸಿದ್ದಾಪುರದ ನಿವಾಸಿ ಹಾಗೂ ಸಾಗರ ತಾಲ್ಲೂಕಿನಲ್ಲಿ...

Latest Posts

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ನಡೆದ ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆಯಲ್ಲಿ ವ್ಯಕ್ತವಾಯಿತು. ಸಿದ್ದಾಪುರ ಲಯನ್ಸ್ ಬಾಲಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು ಸಂಘದ ಸಮುದಾಯ ಭವನಕ್ಕೆ ಸಂಘದ ಅಭಿವೃದ್ಧಿ ಗೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *