ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ನಾವು ಗಾಂಧಿಯವರಿಗೆಕೊಡುವ ನಿಜವಾದಗೌರವ:ಸಮಾಜಸೇವಕ ಹಬೀಬ್


ಯುವಜನತೆ ಸ್ವಕೇಂದ್ರಿತ ಚಿಂತನೆಗಳಿಂದ ಹೊರಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಸಮಾಜದ ಆಗುಹೋಗುಗಳನ್ನು ಗಮನಿಸುತ್ತಿರಬೇಕು.ಇವುಗಳಿಗೆ ತಮ್ಮ ಮಿತಿಯಲ್ಲಿ ಸ್ಪಂದಿಸುತ್ತಿರಬೇಕು. ಕೇವಲ ಗಾಂಧಿಅಥವಾ ಲಾಲಬಹದ್ದೂರ ಶಾಸ್ತಿç ಜಯಂತಿಆಚರಿಸುವುದರಿಂದ, ಅವರಗುಣಗಾನ ಮಾಡುವುದರಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಸ್ವಚ್ಛತೆ, ಆರೋಗ್ಯ, ಮೂಢನಂಬಿಕೆ ನಿವಾರಣೆ, ಜಾತ್ಯತೀತ ತತ್ವಗಳ ಅನುಸರಣೆ ಮತ್ತು ಪ್ರಚಾರಇಂತಹ ಸಾಮಾಜಜಾಗೃತಿಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದೇ ನಾವು ಗಾಂಧಿಗೆಕೊಡುವ ನಿಜವಾದಗೌರವಎಂದುಸಮಾಜಸೇವಕರೂ, ಕಲಾವಿದರೂಆದ ಹಬೀಬ್.ಎ ಅಭಿಪ್ರಾಯಪಟ್ಟರು.


ಹರಳಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿಕಾರ್ಯಕ್ರಮದಲ್ಲಿಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿಅವರು ಮಾತನಾಡುತ್ತಿದ್ದರು.ರಂಗಕರ್ಮಿ ಮ್ಯಾಥ್ಯೂ ಸುರಾನಿ ಮಾತನಾಡಿಗಾಂಧಿಯಎಲ್ಲಾ ತತ್ವಗಳನ್ನು ಎಲ್ಲರಿಗೂ ಪಾಲಿಸುವುದು ಕಷ್ಟವಾಗಬಹುದು. ಆದರೆ ಸರಳತೆ, ಅಹಿಂಸೆ, ಪ್ರಾಮಾಣಿಕತೆಗಳನ್ನು ಅಲವಡಿಸಿಕೊಳ್ಳುವುದು ನಮಗೆ ಕಷ್ಟವೇನೂ ಆಗುವುದಿಲ್ಲ ಎಂದು ತಿಳಿಸಿದರು.


ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಕೈಗಾರಿಖಾರಸಾಯನಶಾಸ್ತç ವಿಭಾಗದಲ್ಲಿ ಪ್ರಥರ‍್ಯಾಂಕ್ ನೊಂದಿಗೆ ಮೂರುಚಿನ್ನದ ಪದಕಗಳನ್ನು ಪಡೆದ ಕು.ಅಂಕಿತ ಮತ್ತು ವಾಲಿಬಾಲ್ ಪಂದ್ಯದರಾಷ್ಟçಮಟ್ಟದ ಪಂದ್ಯಾವಳಿಗೆ ಕರ್ನಾಟಕತಂಡಕ್ಕೆಆಯ್ಕೆಯಾದ ಕು.ಸಮಿತ್‌ರನ್ನು ಸನ್ಮಾನಿಸಲಾಯಿತು.ನೀನಾಸಂ ರಂಗಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು.ಶಾಲಾವಿದ್ಯಾರ್ಥಿಗಳು ನೃತ್ಯ ಮತ್ತುಗಾಯನಕಾರ್ಯಕ್ರಮ ನಡೆಸಿಕೊಟ್ಟರು.


ಡಾ. ಸರ್ಜಾಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಲಾಭಿವೃದ್ಧಿ ಸಮಿತಿಅಧ್ಯಕ್ಷರಾದಪ್ರಕಾಶ್‌ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಪ್ರತಿಮಾ, ಸಮಿತಿ ಸದಸ್ಯರಾದ ಸೌಮ್ಯ, ಶಾಹಿಯಾ ಬಾನು, ಜಲೀಲ್,ಗ್ರಾಮ ಪಂಚಾಯತಿಅಧ್ಯಕ್ಷರಾದಭಾರತಿ ಮೋಹನೇಶ್, ಸದಸ್ಯರಾದಇಂದಿರಮ್ಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದಎಚ್.ಬಿ.ಪದ್ಮನಾಭ್, ಸಹಕಾರಿಧುರೀಣರಾದ ಪ್ರಹ್ಲಾದ್, ರಮೇಶ್,ಊರ ಪ್ರಮುಖರಾದ ಹೊನ್ನಾನಿ ದೇವರಾಜ್, ಇಮ್ರಾನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಮುಖ್ಯೋಪಾಧ್ಯಾಯರಾದರಮೇಶ್‌ಸ್ವಾಗತಿಸಿದರು.ಹೊನ್ನಾನಿ ದೇವರಾಜ್ ನಿರೂಪಿಸಿದರು. ಶಿಕ್ಷಕರಾದ ಜಯಪ್ಪವಂದಿಸಿದರು.ಗ್ರಾಮದ ಮುಖಂಡರಾದ ಮುನೀರ್ ಸನ್ಮಾನಿತರಿಗೆ, ಬಹುಮಾನಿತ ಮಕ್ಕಳಿಗೆ ಅಪರೂಪದ ಹಣ್ಣಿನ ಗಿಡಗಳನ್ನು ಉಡುಗೋರೆಯಾಗಿ ನೀಡಿದರು.ಗ್ರಾಮದಯುವಕರುಗ್ರಾಮಸ್ಥರೆಲ್ಲರಿಗೆ ಮಧ್ಯಾಹ್ನದ ಸಾಮೂಹಿಕ ಊಟದ ವ್ಯವಸ್ಥೆ ಮಾಡಿದ್ದರು.
೫ನೇ ತರಗತಿಯಲ್ಲಿಆಯಿಷಾ ಫಾತಿಮಾ, ಮಾನ್ಯಕೆ.ಆರ್, ಆಕಾಶ ಪಿ,೧೦ನೇ ತರಗತಿಯಲ್ಲಿಪನ್ನಗಕೆ.ಯು ಮತ್ತು ಪ್ರಜ್ವಲ್‌ಕೆ.ಟಿ ೩೦ನೇ ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *