

ಸಿದ್ದಾಪುರ
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರವಿ ಡಿ ಚೆನ್ನಣ್ಣವರ್ ಐಪಿಎಸ್ ಅಭಿಮಾನಿ ಬಳಗ (ರಿ) ಮನಮನೆ ವತಿಯಿಂದ ಮನಮನೆ ಪ್ರೌಢಶಾಲೆ ಯಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಮನಮನೆ ಊರಿನ ಮಕ್ಕಳಲ್ಲಿ ಈ ವರ್ಷದ ಪಿ ಯು ಸಿ ಪರೀಕ್ಷೆಯಲ್ಲಿ ಶೇಕಡಾ 80% ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅವರ ಮನೆಗಳಿಗೆ ತೆರಳಿ ಅವರ ಪಾಲಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆ ಎಲ್ಲಾ ಮಕ್ಕಳಿಗೂ ಅವರ ಮುಂದಿನ ಶಿಕ್ಷಣದ ದಾರಿಗೆ ಶುಭ ಹಾರೈಸಲಾಯಿತು.
ಮನಮನೆ ಊರಿನ ಯುವ ಸಮೂಹವು ಕರ್ನಾಟಕ ದಕ್ಷ ಹಾಗೂ ಸಿಂಗಂ ಖ್ಯಾತಿಯ ರವಿ ಡಿ ಚೆನ್ನಣ್ಣವರ್ ಅವರ ಅಭಿಮಾನದಿಂದ ಅವರ ಅಭಿಮಾನ ಬಳಗವನ್ನು ಸ್ಥಾಪಿಸಿದ್ದಾರೆ. ಜ್ಞಾನ ಜಗತ್ತನ್ನ ಅಳುತ್ತದೆ ಎಂಬ ಘೋಷವಾಕ್ಯವನ್ನು ಹೊಂದಿದ ಈ ಅಭಿಮಾನಿ ಬಳಗವು ಹತ್ತು ಹಲವಾರು ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಉತ್ತಮವಾದ ಕೆಲಸಕಾರ್ಯಗಳನ್ನು ಮಾಡುತ್ತಿದ್ದು ರವಿ ಡಿ ಚೆನ್ನಣ್ಣನವರ್ ಐಪಿಎಸ್ ( ಪ್ರಸ್ತುತ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರು )ಹಾಗೂ ಇನ್ನಿತರ ಜನರ ಪ್ರಸಂಶೆಗೆ ಪಾತ್ರವಾಗಿದೆ.

ಬೆಳೆ ಹಾನಿ-ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ತೆಂಗಿನಮನೆಯ ದ್ಯಾವಾ ಕನ್ನಾ ನಾಯ್ಕ ಅವರ ಅಡಕೆ ತೋಟಕ್ಕೆ ಕಾಡುಹಂದಿಗಳು ದಾಳಿ ನಡೆಸಿ 25ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೈ ರಿಗೆ ಸನ್ಮಾನ- ಸಿದ್ಧಾಪುರ
ತಾ ಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಡಾ.ನಂದಕುಮಾರ ಪೈ ಮುಂಬಡ್ತಿ ಪಡೆದು ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ಅವರನ್ನು ಸಿದ್ದಾಪುರ ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ರಾಜ್,ಡಾ.ರಮೇಶಬಾಬು ಕವಂಚೂರು ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.


ಸೇವಾ ನಿವೃತ್ತಿ- ಬೀಳ್ಕೊಡುಗೆ-
ಸಿದ್ದಾಪುರ.
ಭಾರತ ಸಂಚಾರ ನಿಗಮದಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಮುಕುಂದ ಐ.ನಾಯ್ಕ ಅವರಿಗೆ ಬಿ.ಎಸ್.ಎನ್.ಎಲ್. ಸಿಬ್ಬಂದಿಗಳು ಹಾಗೂ ಆತ್ಮೀಯರು ಸನ್ಮಾನಿಸಿ, ಬೀಳ್ಕೊಡುಗೆ ನೀಡಿದ ಕಾರ್ಯಕ್ರಮ ಇತ್ತೀಚೆಗೆ ಪಟ್ಟಣದ ಲಯನ್ ಬಾಲಭವನದಲ್ಲಿ ನಡೆಯಿತು.
ಕಾರ್ಯಕ್ರಮದಸ ಅಧ್ಯಕ್ಷತೆವಹಿಸಿದ್ದ ಬಿ.ಎಸ್.ಎನ್.ಎಲ್.ನ ನಿವೃತ್ತ ಅಧಿಕಾರಿ ವಿ.ಎಸ್.ಭಟ್ಟ ಮಾತನಾಡಿ ಮುಕುಂದ ನಾಯ್ಕರ ಪ್ರಾಮಾಣಿಕವಾದ ಸೇವೆ ಮತ್ತು ನೇರವಾದ,ದಿಟ್ಟವಾದ ನಡವಳಿಕೆಯ ವ್ಯಕ್ತಿತ್ವವನ್ನು ಶಾಘ್ಲಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಿ.ಎಸ್.ಎನ್.ಎಲ್.ಅಧಿಕಾರಿ ಜಿ.ಎಚ್.ಪಾಲೇಕರ ಮಾತನಾಡಿ ಮುಕುಂದ ನಾಯ್ಕ ಅವರು ಬಿ.ಎಸ್.ಎನ್.ಎಲ್.ನಲ್ಲಿ ಅತ್ಯುತ್ತಮ ಸೇವೆ ನೀಡಿದ್ದಾರೆ. ತಮ್ಮ ಸೇವೆಯ ವಿಶೇಷವಾಗಿ ಹಾರ್ಸಿಕಟ್ಟಾ ಭಾಗದ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು. ಜೆ.ತಿ.ಒ. ಶಿವಪ್ರಸಾದ ಉಪಸ್ಥಿತರಿದ್ದರು.
ಬಿ.ಎಸ್.ಎನ್.ಎಲ್.ನ ನಿವೃತ್ತ ಸಿಬ್ಬಂದಿಗಳು, ಹಂಗಾಮಿ ನೌಕರರು, ಗ್ರಾಹಕರು, ಆತ್ಮೀಯರು ಮುಕುಂದ ನಾಯ್ಕ ದಂಪತಿಗಳನ್ನು ಸನ್ಮಾನಿಸಿದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






