ಸಿದ್ಧಾಪುರದ ವೇಶ್ಯಾವಾಟಿಕೆ & ಮಾನವ ಕಳ್ಳ ಸಾಗಾಣಿಕೆ ಪ್ರಕರಣದ ಫುಲ್ ಡಿಟೇಲ್ಸ್………
ರಾಷ್ಟ್ರೀಯ ಶಿಕ್ಷಣ ನೀತಿ ಬದಲು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಹೊಸ ಶಿಕ್ಷಣ ನೀತಿ ಪರವಾಗಿ ಜನಾಭಿಪ್ರಾಯ ರೂಪಿಸಲು ಸಹಿಸಂಗ್ರಹ ಅಭಿಯಾನ ನಡೆಸುತ್ತಿರುವುದಾಗಿ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
visit-samajamukhi.net facebook page & samajamukhi news youtube channel
ಸಿದ್ಧಾಪುರದ ವಿನಾಯಕ ಫಾರೆಸ್ಟರ್ ವರ್ಗಾವಣೆ ಮಾಡುವುದು ಮತ್ತು ಜನಸಾಮಾನ್ಯರ ಮೇಲೆ ಅರಣ್ಯ ಇಲಾಖೆ ಕಿರುಕುಳ ತಪ್ಪಿಸಲು ಆಗ್ರಹಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ ನೇತೃತ್ವದಲ್ಲಿ ಇಂದು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಮತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
visit-samaajamukhi & samajamukhinews youtube channels
ಕನ್ನಡ ಪರ ಸಂಘಟನೆಗಳ ಹೆಸರು, ಪತ್ರ ಬಳಸಿ ಅಡ್ಡ ಕಸುಬು ಮಾಡುವ ಕೆಲವು ಕನ್ನಡ ಶಾಲು, ಕೋಟುಧಾರಿಗಳ ವಿರುದ್ಧ ಸಿದ್ಧಾಪುರದಲ್ಲಿ ಆಕ್ಷೇಪಗಳು ಕೇಳಿ ಬಂದಿವೆ. ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಇರುವ ಕನ್ನಡ ಪರ ಸಂಘಟನೆಗಳ ಹೆಸರು ಹೇಳಿಕೊಂಡು ಅನುಚಿತ ಕೆಲಸಮಾಡುವ ಆಕಾಶ್ ಕೊಂಡ್ಲಿ ಯನ್ನು ಪೊಲೀಸರು ಬಂಧಿಸುತ್ತಲೇ ಅವರ ಮೂಲಗ್ರಾಮವಾದ ಕಡಕೇರಿಯ ಜನರು ಆಕಾಶ ಕಡಕೇರಿ ಎಂದು ಬಳಸಬೇಡಿ ಎಂದು ಆಕ್ಷೇಪಿಸಿದರೆ ಕೊಂಡ್ಲಿಯವನಲ್ಲದ ಅಣ್ಣಪ್ಪ ಯಾನೆ ಆಕಾಶ್ ಹೆಸರಿನ ಜೊತೆ ಕೊಂಡ್ಲಿ ಬಳಸಬೇಡಿ ಎನ್ನುವ ಆಕ್ಷೇಪ ಕೇಳಿ ಬಂದಿದೆ.
visit- samajamukhi.net -web news
ಈ ಆರೋಪಿ ಆಕಾಶ್ ಆತ್ಮಸ್ನೇಹಿತನಾದ ಇನ್ನೊಬ್ಬ ಕೋಡಂಗಿ ಕೂಡಾ ಕನ್ನಡ ಸಂಘಟನೆಗಳ ಹೆಸರು ಹೇಳಿಕೊಂಡು ಮಾಡಬಾರದ ಕೆಲಸ ಮಾಡುತ್ತಾನೆ. ಶಿರಸಿ ರಸ್ತೆಯಲ್ಲಿ ಆಂಟಿ ಪ್ರೀತ್ಸೆ ಎಂದು ವಿವಾಹಿತೆಯೊಂದಿಗೆ ಓಡಾಡುವ ಈ ಕನ್ನಡಪರ ವ್ಯಕ್ತಿ ಕೂಡಾ ಇಂಥದ್ದೇ ವ್ಯವಹಾರದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಇವರೊಂದಿಗೆ ಇನ್ನೂ ಎರಡ್ಮೂರು ಜನರು ಕಳೆದ ಒಂದು ವಾರದಿಂದ ಬಂಗ್ಲೆಗುಡ್ಡದ ಬಳಿ ಅಡ್ಡಾಡುತಿದ್ದರು. ಈ ದುಷ್ಟಕೂಟದ ಮೂವರು ಪೊಲೀಸರಿಗೆ ಸಿಕ್ಕರೆ ಇನ್ನೂ ಮೂರ್ನಾಲ್ಕು ಜನ ಈವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.