ಮಾನವ ಕಳ್ಳ ಸಾಗಾಣಿಕೆ,ವೆಶ್ಯಾವಾಟಿಕೆ ಆರೋಪದ ಮೇಲೆ ಕನ್ನಡಪರ ಹೋರಾಟಗಾರ ಆಕಾಶ್ ಕೊಂಡ್ಲಿ ಮತ್ತು ಇತರ ಇಬ್ಬರನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರ ಕೊಂಡ್ಲಿಯ ಸಂಗೀತಾ ಮಡಿವಾಳ ಎನ್ನುವ ಯುವತಿ ತನ್ನನ್ನು ವೆಶ್ಯಾವಾಟಿಕೆಗೆ ಒತ್ತಾಯಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಣ್ಣಪ್ಪ ಯಾನೆ ಆಕಾಶ್ ಕೊಂಡ್ಲಿ ಕಡಕೇರಿ. ಮಹೇಶ್ ನಾರಾಯಣ ಮಡಿವಾಳ ಹಾಗೂ ಪಾರ್ವತಿ ಎನ್ನುವ ಮೂವರು ಪುಸಲಾಯಿಸಿದ್ದಲ್ಲದೆ ಹಣಕ್ಕಾಗಿ ವೆಶ್ಯಾವಾಟಿಕೆ ದಂಧೆಗೆ ಇಳಿಯದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಸಿದ್ದಾರೆ ಎಂದು ದೂರಿದ್ದಾರೆ.
ಪ್ರಕರಣದ ವಿವರ- ಕನ್ನಡ ಪರ ಹೋರಾಟಗಾರ ಎಂದುಕೊಳ್ಳುವ ಕನ್ನಡದ ಶಾಲು ಹೊದ್ದುಕೊಂಡು ವೇದಿಕೆಮೇಲೆ ಮಿಂಚುವ ಆಕಾಶ್ ಕೊಂಡ್ಲಿ ಯಾನೆ ಅಣ್ಣಪ್ಪ ಮಡಿವಾಳ ಗುರುವಾರ ಮಧ್ಯಾಹ್ನದ ವೇಳೆಗೆ ತನ್ನ ಪರಿಚಯದ ಪಾರ್ವತಿ ಯಾನೆ ಪಾರ್ವತಮ್ಮ ಎನ್ನುವ ಹೆಂಗಸಿನ ಜೊತೆ ಸೇರಿ ಮಹೇಶ್ ಮಡಿವಾಳ ಎನ್ನುವವನ ಸಹಕಾರದಿಂದ ಸಂಗೀತಾ ಮಡಿವಾಳರನ್ನು ಸಿದ್ಧಾಪುರ ಪ್ರವಾಸಿ ಬಂಗಲೆಗೆ ಕರೆಸಿದ್ದಾರೆ.
ಸುಂದರಿಯಾದ ಯುವತಿಗೆ ನೀನು ನಾವು ಹೇಳಿದಂತೆ ಕೇಳಿದರೆ ಕೈತುಂಬಾ ಹಣ ಕೊಡುವುದಾಗಿ ಪುಸಲಾಯಿಸಿದ್ದಾರೆ. ಯಾವುದೋ ಕಾರಣಕ್ಕೆ ಈ ಧನದಾಹಿಗಳ ಹಿಡಿಕೆಗೆ ಸಿಕ್ಕಿದ್ದ ಸಂಗೀತಾ ಗಾಬರಿಯಾಗಿದ್ದಾಳೆ. ಕೆಲವು ದಿವಸಗಳಿಂದ ತಮ್ಮದೇ ಊರಿನ ಸ್ವಜಾತಿಯ ಯುವಕರು ತನ್ನನ್ನು ಹಿಂಬಾಲಿಸುತಿದ್ದುದು ಈ ಕಾರಣಕ್ಕೆ ಎಂದು ಸಿಟ್ಟಾದ ಸಂಗೀತಾ ತನ್ನ ಪರಿಚಯಸ್ಥರಿಗೆ ಕರೆಸಿ ವಿಚಾರಿಸಿದ್ದಾಳೆ. ಈ ವೇಳೆಗೆ ಆಕಾಶ್ ಕೊಂಡ್ಲಿ ಮತ್ತು ಮಹೇಶ್ ಮೇಲೆ ಏರಿಹೋದ ಜನರು ಐ.ಬಿ.ಯಿಂದ ಪೋಲಿಸ್ ಠಾಣೆಗೆ ಪೊಲೀಸ್ ಠಾಣೆಯಿಂದ ಐಬಿ.ಗೆ ಎರಡ್ಮೂರು ಬಾರಿ ಏಳೆದಾಡಿ ಹಿಡಿದಿದ್ದಾರೆ. ಸ್ವಲ್ಪದರಲ್ಲಿ ಜಾಗೃತರಾದ ಮೂವರೂ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಠಾಣೆ ಎದುರು ಸೇರಿದ ಜನರು ಈ ಮೂವರನ್ನೂ ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.