ಸಿದ್ದಾಪುರ:ನಾಡೆದೇವಿ ಹೋರಾಟ ವೇದಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡಹಬ್ಬ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪಟ್ಟಣದ ಎಸ್ ವಿ ಹೈಸ್ಕೂಲ್ ನ ಆವರಣದಲ್ಲಿನ ರಾಮಕೃಷ್ಣ ಹೆಗಡೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲ ಜಿ ಟಿ ನಾಯ್ಕ ಮಾತನಾಡಿ ನಮ್ಮ ಭಾಷೆ ನಮಗೆ ಹೆಮ್ಮೆ, ಭಾಷೆ ಬಳಸಿ ಬೆಳೆಸಬೇಕು ಎಂದರು.
ಕಾರ್ಯ ಕ್ರಮ ಉದ್ಘಾಟಿಸಿದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಮಾತನಾಡಿ ಕನ್ನಡ ನಾಡಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ನಾಡು ನುಡಿ ನೆಲ ರಕ್ಷಣೆ ನಮ್ಮ ಕರ್ತವ್ಯ, ನಾವೆಲ್ಲ ನಾಡಿನ ಋುಣ ತೋರಿಸಬೇಕಾಗಿದೆ, ಸಿಕ್ಕಿರುವ ಅವಕಾಶ ಉಪಯೋಗಿಸಿಕೊಂಡು ಜನರಿಗೆ ಅನುಕೂಲ ಮಾಡಬೇಕು ಎಂದರು.
ರೈತ ಮುಖಂಡ ವೀರಭದ್ರ ನಾಯ್ಕ, ಸಾಮಾಜಿಕ ಕಾರ್ಯಕರ್ತ ಕ್ರಷ್ಣಮೂರ್ತಿ ಐನೂರು, ನಾಡೆದೇವಿ ಹೋರಾಟ ವೇದಿಕೆಯ ಅಧ್ಯಕ್ಷ ಅನಿಲ್ ಕೊಠಾರಿ ಮಾತನಾಡಿದರು.
ಯೋಧ ಜಯರಾಮ ನಾಯ್ಕ ಹಲಗೇರಿ, ಯಕ್ಷಗಾನ ಕಲಾವಿದ ಲಕ್ಷ್ಮಣ ನಾಯ್ಕ ಬೇಡ್ಕಣಿ, ನಾಟಿ ವೈದ್ಯರಾದ ಕ್ರಷ್ಣ ಗೌಡ ಮಾದ್ಲಮನೆ, ಗಣಪತಿ ಕನ್ನಾ ನಾಯ್ಕ, 108 ಸಿಬ್ಬಂದಿ ಗಳಾದ ಲೊಕೇಶ, ರೀತೇಶ , ಧರ್ಮ ಹಾಗೂ ಯಕ್ಷಗಾನ ಬಾಲ ಪ್ರತಿಭೆ ನಿಶಾ ನಾಯ್ಕ,,ರನ್ನು ಸನ್ಮಾನಿಸಲಾಯಿತು.
, ಪಾಂಡುರಂಗ ಚೆನ್ಮಾವ್, ರಾಜೇಶ ಕತ್ತಿ,ವಿನಾಯಕ ನಾಯ್ಕ ದೊಡ್ಡ ಗದ್ದೆ, ರಾಘವೇಂದ್ರ ಕಾವಚೂರ,ನಂದನ ಹಾರ್ಸಿಕಟ್ಟಾ, ವಿಶ್ವ ಗೌಡ ಇಟಗಿ, ಉಪಸ್ಥಿತರಿದ್ದರು.
ದಿವಾಕರ ನಾಯ್ಕ ಸ್ವಾಗತಿಸಿದರು. ಕು ನಿಶಾ ಹೊನ್ನೇಬಿಡಾರ ಯಕ್ಷನ್ರತ್ಯ ಮೂಲಕ ಗಮನ ಸೆಳೆದರು