


ಉತ್ತರ ಕನ್ನಡ ಜಿಲ್ಲೆಯಾದ್ಯಂತ ದೊಡ್ಡ ಸುದ್ದಿ ಮಾಡಿದ್ದ ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಿಯಾಗಿದ್ದು ಇನ್ನೊಂದು ಪ್ರಕರಣದ ಮೂವರು ಆರೋಪಿಗಳಿಗೆ ಜೈಲಿನ ಊಟ ಖಾತ್ರಿಯಾಗಿದೆ.
ಒಂದು ವಾರದ ಈಚೆಗೆ ಕನ್ನಡ ಪರ ಹೋರಾಟಗಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕಿಯೆಂದು ಅನುಮಾನಾಸ್ಪದವಾಗಿ ವ್ಯವಹರಿಸುತಿದ್ದ ಇಬ್ಬರೊಂದಿಗೆ ಒಬ್ಬ ಮಹಿಳೆ ಸೇರಿ ಒಟ್ಟೂ ಮೂವರನ್ನು ಬಂಧಿಸಲಾಗಿತ್ತು.
ಈ ಮೂವರಲ್ಲಿ ಒಬ್ಬ ಹೊಸ ಆರೋಪಿಯಾಗಿದ್ದರೆ ಇಬ್ಬರು ಆರೋಪ, ಅಪರಾಧಗಳ ಹಿನ್ನೆಲೆಯವರು ಎನ್ನಲಾಗಿತ್ತು. ಈ ಮೂವರಿಗೆ ಒಂದು ವಾರ ಕಳೆದರೂ ನ್ಯಾಯಾಲಯ ಜಾಮೀನು ನೀಡಿಲ್ಲ ಎನ್ನಲಾಗಿದೆ.

ಈ ಪ್ರಕರಣದ ನಂತರ ಮತ್ತೊಂದು ಅನುಮಾನಾಸ್ಫದ ಘಟನೆಯಲ್ಲಿ ಬಯಲುಸೀಮೆಯ ಮೂವರನ್ನು ಬಂಧಿಸಲಾಗಿತ್ತು. ಇದರಲ್ಲಿ ಚತುರ ವ್ಯಕ್ತಿಯೊಬ್ಬ ಇಬ್ಬರು ವ್ಯಕ್ತಿಗಳಿಗೆ ಸೇನೆಯ ಸಮವಸ್ತ್ರ ಹಾಕಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಸಿದ್ಧಾಪುರ ಪೊಲೀಸರಿಗೆ ಸೆರೆಯಾಗಿದ್ದರು. ಈ ಪ್ರಕರಣ ಕುತೂಹಲಕರವಾಗಿದ್ದು ಮೃತ ಸೈನಿಕನ ಮನೆಗೆ ಹೋಗಿ ಅವರ ಸ್ಮಾರಕದ ಚಿತ್ರ ತೆಗೆದು ಸೇನೆಯವರಂತೆ ನಟಿಸಿದ ವ್ಯಕ್ತಿ ಓರ್ವ ಮಹಿಳೆ ಸೇರಿ ಇಬ್ಬರನ್ನು ಸೇನೆಯ ಸಮವಸ್ತ್ರದಲ್ಲಿ ಕರೆತಂದಿದ್ದ!
ಮೊದಲ ಪ್ರಕರಣದಲ್ಲಿ ವೇಷಧಾರಿಗಳು ಮಾಡುವ ಕೆಲಸ, ಉದ್ದೇಶ ಸ್ಫಷ್ಟವಿದ್ದುದಲ್ಲದೆ ಆ ತಂಡವನ್ನು ಸಾರ್ವಜನಿಕರೇ ಮುಂದೆ ನಿಂತು ಪೊಲೀಸರಿಗೆ ಒಪ್ಪಿಸಿದ್ದರು. ಎರಡನೇ ಪ್ರಕರಣದಲ್ಲಿ ಮೂವರ ಉದ್ದೇಶ ಏನೆಂಬುದೇ ಸ್ಪಷ್ಟವಿಲ್ಲದೆ ಮಾಜಿ ಸೈನಿಕರು ಅನುಮಾನದಿಂದ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದರು.
