Cofffe ವಿತ್ ಜಿ. ಟಿ
ಕವಿತೆ ಮತ್ತು ಹಾಡು
ನಿನ್ನ ಹಾಯ್ದು ಹೋಗುವಾಗ,
“ದೈವ ವಿರೋಧಿ” ಎಂದು
ನನ್ನ ಛೇಡಿಸುವುದನ್ನ ದಯವಿಟ್ಟು ನಿಲ್ಲಿಸು.
ಇದು ಸಂಪೂರ್ಣ ತಪ್ಪು ಮಾಹಿತಿ.
ಭಗವಂತನೊಡನೆಯ ನನ್ನ ಪ್ರೇಮ ಸಾಚಾ,
ನನ್ನ ಬಗ್ಗೆ ಅವನ ಪ್ರೇಮ ಎಷ್ಚು ಅಪ್ಪಟವೋ ಅಷ್ಟು.
ಎಲ್ಲ ಪ್ರೇಮ ಸಂಬಂಧಗಳಂತೆ ಈ ಸಂಬಂಧವೂ
ಉತ್ಕಟ, ಉನ್ಮತ್ತ ಮತ್ತು ಗೊಂದಲಕರ.
ಭಾವನೆಗಳ ಏರಿಳಿತಗಳು ಇಲ್ಲೂ ಉಂಟು,
ಸಂಘರ್ಷದ ಹಗಲುಗಳು,
ಪಿಸುಮಾತು ಮತ್ತು ಮುದ್ದಾಟದ ರಾತ್ರಿಗಳು
ವಿಜೃಂಭಿಸುತ್ತವೆ ಇಲ್ಲೂ.
ನಾನು ಅವನ ಮೇಲೆ ಸಿಟ್ಟಾಗುತ್ತೆನಾ ?
ಖಂಡಿತ,
ನನ್ನ ಈ ಸಿಟ್ಚನ್ನು ಅವನಿಗೆ ಹೇಳುತ್ತೆನಾ?
ಹೇಳದಿದ್ದರೆ ಅದೆಂಥ ಪ್ರೇಮ ?
ನಿನ್ನ ಆಪ್ತ ರಹಸ್ಯಗಳನ್ನು ಅವನಿಗೆ ಹೇಳದೆ ಹೋದರೆ,
ನಿನ್ನ ಖಾಸಗಿ ಅನಿಸಿಕೆಗಳ ಬಗ್ಗೆ
ಅವನೆದುರು ಪ್ರಾಮಾಣಿಕವಾಗಿರಲು
ಭಯವಾಗುತ್ತಿದೆಯಾದರೆ,
ನಿನಗೆ ಅವನ ಬಗ್ಗೆ
ಖಂಡಿತವಾಗಿಯೂ ಏನೂ ಗೊತ್ತಿಲ್ಲ ಎನ್ನಲು
ದುಃಖವಾಗುತ್ತದೆ ನನಗೆ
ನಿಜವಾಗಿ.
ನಜತ್ ನ ಮಾತು ಕೇಳು
ಮನುಷ್ಯನ ಹೃದಯದಲ್ಲಿ ಪ್ರೇಮ ಮತ್ತು ಭಯ
ಎರಡಕ್ಕೂ ಸಾಕಾಗುವಷ್ಟು ಜಾಗವಿಲ್ಲ,
ಆರಿಸಿಕೋ ಒಂದನ್ನು ಮಾತ್ರ.
~ Nazat Ozkaya
(ಚಿದಂಬರ ನರೇಂದ್ರ)