

ಸಿದ್ದಾಪುರ ತಾಲೂಕಿನ ಹೊಸೂರು ವಿನಾಯಕ ಗಣೇಶ್ ಹೆಗಡೆಯವರ ತೋಟದ ಬೆಟ್ಟದಲ್ಲಿ ಅನುಮಾನಾಸ್ಪದವಾಗಿ ಆತ್ಮ ಹತ್ಯೆಗೆ ಶರಣಾದ ಅವರದೇ ಸಿದ್ಧಿವಿನಾಯಕ ಶಾಲೆಯ ವಾಹನ ಚಾಲಕನ ದುರಂತ ಕತೆ ಈ ವಾರದ ಚರ್ಚೆಯ ವಿಷಯವಾಗಿದೆ.
ಸಿದ್ದಾಪುರ ಸಿದ್ಧಿ ವಿನಾಯಕ ಶಾಲೆ ಯ ವಾಹನ ಚಾಲಕ ಬಾಲಿಕೊಪ್ಪದ ಸೋಮಶೇಖರ್ ನಾಯ್ಕ ಗುರುವಾರ ಸಾಯಂಕಾಲ 6ಗಂಟೆಯ ಸಮಯಕ್ಕೆ ಹೊಸೂರಿನ ವಿನಾಯಕ ಹೆಗಡೆಯವರ ತೋಟದ ಬೆಟ್ಟದಲ್ಲಿ ಕಾಡುಜಾತಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಷಯ ಸಂಶಯ, ಅನುಮಾನ ಗಳಿಗೆ ಕಾರಣಆಗಿದೆ.
ಈ ಬಗ್ಗೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಮೃತಚಾಲಕ ಸೋಮಶೇಖರ್ ನಾಯ್ಕರ ಪತ್ನಿ ಜ್ಯೋತಿ ಸೋಮಶೇಖರ್ ನಾಯ್ಕ ಶಾಲಾವಾಹನ ಬಿಡಲು ಸಂಸ್ಥೆಯ ಅಧ್ಯಕ್ಷ ವಿನಾಯಕರಾವ್ ಹೆಗಡೆಯವರ ಮನೆಗೆ ಹೋಗಿದ್ದ ವ್ಯಕ್ತಿ ಅರ್ಧಗಂಟೆಯ ಸಮಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಅರ್ಧಚೈನು,ಅರ್ಧ ಹಗ್ಗ ಇದು ಗಡಿಬಿಡಿಯಲ್ಲಿ ನೇಣುಬಿಗಿದಿರುವ ಸಾಧ್ಯತೆ ಎತ್ತಿ ತೋರುತ್ತಿದೆ. ಅಷ್ಟಕ್ಕೂ ಸಮೀತಿಯ ಅಧ್ಯಕ್ಷರ ತೋಟದ ಬೆಟ್ಟದಲ್ಲಿ ಅತೀ ಕಡಿಮೆ ಅವಧಿಯಲ್ಲಿ ನೇಣುಬಿಗಿದು ಸ್ವತ: ಆತ್ಮಹತ್ಯೆಗೆ ಪ್ರಯತ್ನಿಸಿದ ಕುರುಗಳು ಕಾಣುವುದಿಲ್ಲ. ಇದರಲ್ಲಿ ನೇರ, ಪರೋಕ್ಷ ಕೊಲೆ ಹುನ್ನಾರ ಕಾಣುವಂತಿದೆ ಎಂದು ಸಂಶಯ ವ್ಯಕ್ತಪಡಿಸಿರುವ ಕೆಲವರು ಕೂಲಂಕುಶ ತನಿಖೆ ಮಾಡಿ ಬಾಧಿತರಿಗೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ.
