


ಸಿದ್ದಾಪುರ.
ತಾಲೂಕಿನ ಬಾಳೇಸರದ ಕೃಷಿ ವಿಚಾರ ವಿನಿಮಯ ಕೇಂದ್ರ ಟ್ರಸ್ಟನ ರಜತ ಮಹೋತ್ಸವ, ನೂತನ ಕಾರ್ಯಾಲಯ,ಸಭಾಭವನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ರಜತಮಹೋತ್ಸವ ಉದ್ಘಾಟಿಸಿದ ನಬಾರ್ಡ ಬೆಂಗಳುರಿನ ಸಿ.ಜಿ.ಎಂ.ಟಿರಮೇಶ ಮಾತನಾಡಿ ಗ್ರಾಮೀಣ ಭಾಗದಲ್ಲಿ ಉತ್ತಮ ರೀತಿಯ ಸಂಘಟನೆಯನ್ನು ಮಾಡಿ ೨೫ ವರ್ಷಗಳ ಕಾಲ ಕ್ರಿಯಾಶೀಲವಾಗಿ,ಸಕ್ರೀಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಈ ಸಂಸ್ಥೆಯ ಬಗ್ಗೆ ಸಂತೋಷವೆನ್ನಿಸುತ್ತದೆ.ಕಳೆದ ೨೦ ವರ್ಷಗಳಿಂದ ಈ ಸಂಸ್ಥೆಯ ಪರಿಚಯವಿದ್ದು ತನ್ನ ಕಾರ್ಯಸಾಧನೆಗಾಗಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಪ್ರಶಸ್ತಿಯನ್ನು ಈ ಸಂಸ್ಥೆ ಪಡೆದಿರುವದು ಶಾಘ್ಲನೀಯ ಎಂದರು.

ಸಭಾಭವನ ಉದ್ಘಾಟಿಸಿದ ಬೆಂಗಳೂರಿನ ನಾಬ್‌ಫೀನ್ಸ ಸಂಸ್ಥೆ ಎಂ.ಡಿ. ಡಾ|ದಿವಾಕರ ಹೆಗಡೆ ನಬಾರ್ಡ ಗುರುತಿಸಿದ ನಮ್ಮ ಸಂಸ್ಥೆಗೆ ಈ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಭೇಟಿ ನೀಡಿ ಅಂದಿನಿಂದ ನಿರಂತರವಾಗಿ ನಮ್ಮ ಕಚೇರಿಯೊಡನೆ ಸಂಪರ್ಕ ಇರಿಸಿಕೊಂಡು ವ್ಯವಹರಿಸುತ್ತ ಬಂದಿರುವದು ಪ್ರಶಂಸನೀಯ ಎಂದರು.ಕೆನರಾ ಬ್ಯಾಕ್ ಎ.ಜಿ.ಎಮ್.ನಂದಕಿಶೋರ ಹಾಗೂ ನಿವೃತ್ತ ಡಿ.ಜಿ.ಎಮ್.ಎಂ.ಎಸ್.ಅರುಣಕುಮಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಮಾಜಿ ಮಂಡಲ ಪ್ರಧಾನ ಶಂಕರಭಟ್ಟ ಮಸ್ಗುತ್ತಿ ವಹಿಸಿದ್ದರು.
ಈ ಸಂದರ್ಭದಲ್ಲಿ ಉತ್ತಮ ಕೃಷಿಕ ವೆಂಕಟರಮಣ ಐ.ಜೋಶಿ ಕಂಚ್ಗುಳಿ, ಸಂರ್ಸತೆಯ ಹಿಂದಿನ ಪದಾಧಿಕಾರಿಳನ್ನು,ಸಾಧಕ ಸದಸ್ಯರನ್ನು ಅಭಿನಂದಿಸಲಾಯಿತು. ರಶ್ಮಿ ಹೆಗಡೆ ಗಣಪತಿ ಸ್ತುತಿಯನ್ನು,ರೈತಗೀತೆಯನ್ನುಎಂ.ಆರ್.ಹೆಗಡೆ ಹೊಸ್ಮನೆ, ರಜತಗೀತೆಯನ್ನು ರಾಮಚಂದ್ರ ಹೆಗಡೆ ತಂಗರ‍್ಮನೆ ಹಾಡಿದರು.
ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಬಾಳೇಸರ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ಅಶೋಕ ಹೆಗಡೆ ಶಮೇಮನೆ ವರದಿವಾಚಿಸಿದರು. ಟ್ರಸ್ಟಿ ಜಿ.ಪಿ.ಹೆಗಡೆ ಕಲ್ಮನೆ ವಂದಿಸಿದರು.
ರಜತಮಹೋತ್ಸವ ಸಮಾರೋಪ
ಸಿದ್ದಾಪುರ
ಬಾಳೇಸರದ ಕೃಷಿ ವಿಚಾರ ವಿನಿಮಯ ಕೇಂದ್ರದ ರಜತ ಮಹೋತ್ಸವ,ಸೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಸಮಾರೋಪ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಂ.ಹೆಗಡೆ ಚಿಟಮಾಂವ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸೀತಾರಾಮ ಹೆಗಡೆ ನಿರ್ನಳ್ಳಿ,ಸುಬ್ರಾಯ ಮತ್ತಿಹಳ್ಳಿ,ಸಿ.ಎನ್.ಹೆಗಡೆ ತಂಗರ‍್ಮನೆ ಪಾಲ್ಗೊಂಡಿದ್ದರು.
ಸಂಜೆ ಶಿರಸಿಯ ಯಕ್ಷಕಲಾ ಸಂಗಮ ತಂಡದವರಿಂದ ವೀರವರ್ಮ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ಹಲೋ ನಮ್ಮೂರ್ ಮೊಬೈಲ್ ಕ್ಯಾಲೆಂಡರ್ ನ್ನು ಬಿ.ಎಸ್.ಎನ್.ಎಲ್.ಜಿ.ಟಿ.ಓ.ಶಿವಪ್ರಸಾದ ಭಟ್ಟ ಬಿಡುಗಡೆಗೊಳಿಸಿದರು.ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಜಿ.ಎಮ್.ಹೆಗಡೆ ಬಾಳೇಸರ ಅವರನ್ನು ಸನ್ಮಾನಿಸಲಾಯಿತು.
ಮಧ್ಯಾಹ್ನ ನಡೆದ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ|ಬಿ.ಪಿಸತೀಶ,ಸೀತಾರಾಮ ಹೆಗಡೆ ನಿರ್ನಳ್ಳಿ,ಮಹಾಬಲೇಶ್ವರ ಬಿ.ಎಸ್.ಪಾಲ್ಗೊಂಡಿದ್ದರು. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ಎಂ.ಡಿ.ಆರ್.ಜಿ.ಭಾಗ್ವತ್,ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ,ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿç,ಎ.ಡಿ.ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ,ಅಘನಾಶಿನಿ ಸ್ಫೈಸಿಸ್ ಪ್ರೊಡ್ಯೂಸ್ ಕಂಪನಿ ಇಓ ಎಸ್.ಆರ್.ಹೆಗಡೆ ಕುಂಬಾರಕುಳಿ,ಬಿ.ಎಸ್.ಎನ್.ಎಲ್.ಜಿ.ಟಿ.ಒ.ಶಿವಪ್ರಸಾದ ಭಟ್ಟ,ಊರಿನ ಹಿರಿಯ ಎನ್.ಎಂ.ಹೆಗಡೆ ಬಾಳೇಸರ ಪಾಲ್ಗೊಂಡಿದ್ದರು.
