

ಸಿದ್ದಾಪುರ : ಜಾತಿ ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ತೊಡಗಿಕೊಳ್ಳುವ ಕ್ಷೇತ್ರವೆಂದರೆ ಅದು ಕ್ರೀಡೆ, ಇಲ್ಲಿ ನಾವು ಸಾಧನೆಗೆ ಮಹತ್ವವನ್ನ ನೀಡುತ್ತೇವೆ ಹಾಗೂ ಒಗ್ಗಟ್ಟನ್ನು ಸಾಧಿಸಲು ಕ್ರೀಡೆ ದೊಡ್ಡ ಸಾಧನವಾಗಿದೆ ಎಂದು ಅರಣ್ಯ ಅತಿಕ್ರಮಣ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ಕಡಿಕೇರಿ ಕಾನಳ್ಳಿಯ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ತಾಲೂಕ ಪತ್ರಕರ್ತ ಸಂಘದವರು ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಮ್ ಆರ್ ಕುಲಕರಣಿ, ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಕೆ, ಪಿ ಎಸ್. ಐ ಅನಿಲ್, ಪತ್ರಕರ್ತ ಸಂಘದ ಅಧ್ಯಕ್ಷ ಗಂಗಾಧರ್ ಕೊಳಗಿ, ನಿವೃತ್ತ ಪಶುವೈದ್ಯಾಧಿಕಾರಿ ನಂದ್ ಕುಮಾರ್ ಪೈ ಮತ್ತಿತರರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಸಹಕಾರಿ ಇಲಾಖೆ ಪ್ರಥಮ, ಪತ್ರಕರ್ತ ಸಂಘ ದ್ವಿತೀಯ ಸ್ಥಾನ ಪಡೆದರು.
