jds ನಿಂದ ನೆರವು ಪಡೆದಿಲ್ಲ ಜೆಡಿಎಸ್ ಕಾಂಗ್ರೆಸ್ ನೊಂದಿಗೆ ವಿಲೀನ ಎಂದೂ ಹೇಳಿಲ್ಲ…



ಸಿದ್ದಾಪುರ: ಕಳೆದ ಹತ್ತು ವರ್ಷಗಳಲ್ಲಿ ಜೆಡಿಎಸ್ ಪಕ್ಷದಲ್ಲಿ ಎಷ್ಟೇ ಕಷ್ಟ ಬಂದರೂ ಸಹ ಒಂದು ಪೈಸೆ ಪಡೆಯದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ‌. ಕುಮಟಾ ಜೆಡಿಎಸ್ ಘಟಕದ ಕೆಲವರು ಹತಾಶರಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಬಿ.ಆರ್.ನಾಯ್ಕ ಪ್ರತಿಕ್ರೀಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ವರ್ಷ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷನಾಗಿ ಹಾಗೂ ಎಂಟು ವರ್ಷಗಳಿಂದ ಜಿಲ್ಲಾಧ್ಯಕ್ಷನಾಗಿ ಎಷ್ಟೇ ಕಷ್ಟ ಬಂದರೂ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಹತ್ತು ವರ್ಷದಲ್ಲಿ ಜೆಡಿಎಸ್ ಪಕ್ಷದಿಂದ ನನಗೆ ಯಾರೂ ಹತ್ತು ರೂಪಾಯಿ ಕೂಡಾ. ಕೊಟ್ಟಿಲ್ಲ ಬೇಕಾದರೆ ಯಾವುದೇ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. ಚುನಾವಣೆ ಸೇರಿದಂತೆ ಉಳಿದ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಜಿಲ್ಲಾಧ್ಯಕ್ಷರಿಗೆ ಯಾವುದೇ ರೀತಿ ಹಣ ನೀಡಿಲ್ಲ. 2013 ನೇ ಸಾಲಿನಲ್ಲಿ ನಾನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದ ಓಸಿಮಠ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಆತ್ಮವಲೋಕನ ಸಭೆಯಲ್ಲಿ ನಮ್ಮ ಪಕ್ಷದ ಮುಖಂಡರಾದ ಜೈವಂತ, ವಿವೇಕಾನಂದ ವೈದ್ಯ, ಶಶಿಭೂಷಣ ಹೆಗಡೆ ಸಮ್ಮುಖದಲ್ಲಿ ಓಸಿಮಠ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನನ್ನನ್ನು ಜಿಲ್ಲಾಧ್ಯಕ್ಷನಾಗಿ ನೇಮಿಸಿದರು. ಆಗ ನಾನು ದೇವೇಗೌಡರಲ್ಲಿ ದಯಮಾಡಿ ಬೇರೆ ಯಾರನ್ನಾದರೂ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ನಾನು ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 300-400 ಕಿಲೋಮೀಟರ್ ಜಿಲ್ಲೆಯಲ್ಲಿ ತಿರುಗಾಡುವಷ್ಟು ಆರ್ಥಿಕವಾಗಿ ನಾನು ಶಕ್ತಿಶಾಲಿಯಲ್ಲ ಎಂದಿದ್ದಕ್ಕೆ ನಿಮ್ಮ ಜತೆ ನಾನಿದ್ದೇನೆ ಹೆದರಬೇಡ ಎಂದು ಹೇಳಿದ್ದರು.



ಹಿರಿಯರಾದ ದೇವೇಗೌಡರ ಮಾತನ್ನು ಅಲ್ಲಗಳಲು ಸಾಧ್ಯವಾಗದೆ ಎಷ್ಟೇ ಕಷ್ಟವಾದರೂ ಕೂಡ 10 ವರ್ಷಗಳ ಕಾಲ ಜೆಡಿಎಸ್ ಮುಂದಾಳತ್ವ ವಹಿಸಿ ನಿಷ್ಠೆಯಿಂದ ದುಡಿದಿದ್ದೇನೆ. ಆರ್ಥಿಕವಾಗಿ ಅವರು ನನಗೆ ನೆರವು ನೀಡದೇ ಇರಬಹುದು. ವೈಯಕ್ತಿಕವಾಗಿ ಹಾಗೂ ವ್ಯಕ್ತಿಗತವಾಗಿ ದೇವೆಗೌಡರ ಮೇಲೆ ತುಂಬಾ ಗೌರವವಿದೆ ಎಂದರು.
ಕುಮಟಾದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ನಾನು ಹಾಗೂ ನನ್ನ ಜತೆ ಜೆಡಿಎಸ್ ಪಕ್ಷದಲ್ಲಿದ್ದ ವಿವಿಧ ಪದಾಧಿಕಾರಿಗಳು ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅಭಿಮಾನಿಗಳು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ಅದಕ್ಕೂ ಮುನ್ನ ಯಾವ ಮಾದ್ಯಮದ ಮುಂದು ಸಹ ನಾವು ಹೇಳಿಕೆ ನೀಡಿಲ್ಲ. ಬಿ.ಆರ್.ನಾಯ್ಕ ಹತ್ತು ವರ್ಷ ಕಾಲ ಜೆಡಿಎಸ್ ನಲ್ಲಿದ್ದು ಉಂಡು ತಿಂದು ಮಜಾ ಉಡಾಯಿಸಿ ಹೋಗಿದ್ದಾರೆ.‌ ಈಗ ಹತಾಶರಾಗಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ನಲ್ಲಿ ವಿಲೀನವಾಗಿದೆ ಎಂದು ಎಲ್ಲೂ ಹೇಳಿಲ್ಲ. ಕುಮಟಾ ತಾಲೂಕಾ ಜೆಡಿಎಸ್ ಘಟಕದ ಕೆಲವರು ತಾವೇ ಹತಾಶರಾಗಿ ಏನೇನೋ ಹೇಳಿಕೆ ನೀಡಿದ್ದಾರೆ. ಹತ್ತು ವರ್ಷದ ಅವಧಿಯಲ್ಲಿ ವೈಯಕ್ತಿಕವಾಗಿ ಪಕ್ಷದಿಂದ ಒಂದು ರೂಪಾಯಿ ಕೂಡ ಪಡೆದುಕೊಂಡಿಲ್ಲ. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ದನಿದ್ದೇನೆ ಎಂದರು.



ಬಂಗಾರಪ್ಪನವರ ಅಪ್ಪಟ ಅನುಯಾಯಿಯಾಗಿ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡ ನಾನು ಬಂಗಾರಪ್ಪ ಜತೆ ಜೆಡಿಎಸ್ ಸೇರಿ ಕಳೆದ ಹತ್ತು ವರ್ಷಗಳಿಂದ ಜಿಲ್ಲಾ ಅಧ್ಯಕ್ಷನಾಗಿ ಎಷ್ಟೇ ಕಷ್ಟ ಬಂದರೂ ಪಕ್ಷದಿಂದ ಒಂದು ಪೈಸೆ ತೆಗೆದುಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಇದೀಗ ನನ್ನ ಜತೆ ಜೆಡಿಎಸ್ ನಲ್ಲಿದ್ದ ಅನೇಕರು ಹಾಗೂ ಬಂಗಾರಪ್ಪ ಅನುಯಾಯಿಗಳು ಕುಮಟಾದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ. ಮಧು ಬಂಗಾರಪ್ಪಗೆ ಶಕ್ತಿ ತುಂಬಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ. ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿಹೀನವಾಗಿದೆ. ಪಂಚಾಯತ, ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಿಂಚಿತ್ತೂ ಸಹಾಯ ಮಾಡಿಲ್ಲ. ಹತ್ತು ವರ್ಷದಲ್ಲಿ ಜಿಲ್ಲೆಯಲ್ಲಿ ಪಕ್ಷಕ್ಕಾಗಿ ವರಿಷ್ಠರು ಒಂದು ಪೈಸೆ ನೀಡಿಲ್ಲ. ಯಾವ ಆಸೆ, ಆಕಾಂಕ್ಷೆಯಿಲ್ಲದೇ ಸಾರ್ವಜನಿಕ ಜೀವನದಲ್ಲಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹುದ್ದೆಯ ಆಸೆ ಇಟ್ಟುಕೊಂಡು ಸೇರ್ಪಡೆಯಾದವರಲ್ಲ. ಯಾವುದೇ ಅಧಿಕಾರ ನಿರೀಕ್ಷೆ ಇಟ್ಟುಕೊಂಡಿಲ್ಲ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ದಾಂತದಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ‌ ಎಂದರು.
ಈ ವೇಳೆ ಜೆಡಿಎಸ್ ಸಿದ್ದಾಪುರ ತಾಲೂಕಾ ಮಾಜಿ ಅಧ್ಯಕ್ಷ ಎಸ್.ಕೆ.ನಾಯ್ಕ, ಪ್ರಮುಖರಾದ ಎಂ.ಆರ್.ನಾಯ್ಕ, ಅಬ್ದುಲ್ ರಸೀದ್, ತಿಮ್ಮಪ್ಪ ನಾಯ್ಕ, ಎನ್.ಟಿ.ನಾಯ್ಕ, ನ್ಯಾಯವಾದಿ ಎಂ.ಡಿ.ನಾಯ್ಕ ಉಪಸ್ಥಿತರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *