ಸೋಲುವ ಹೆಗಡೆಗೆ ಬಿ.ಜೆ.ಪಿ. ಟಿಕೆಟ್ ಬೇಡ ಎನ್ನುವ ಅಭಿಯಾನ ಉತ್ತರ ಕನ್ನಡ ಬಿ.ಜೆ.ಪಿ.ಯಲ್ಲಿ ಪ್ರಾರಂಭವಾಗಿರುವ ಹೊಸ ಬೆಳವಣಿಗೆ. ಈ ಬೆಳವಣಿಗೆ ಒಟ್ಟಾರೆ ಅನಂತಕುಮಾರ ಹೆಗಡೆ,ಸುನಿಲ್ ಹೆಗಡೆ, ಸೇರಿದ ಕೆಲವು ಹೆಗಡೆಗಳಿಗೆ ಅನ್ವಯಿಸುತ್ತದಾದರೂ ಉತ್ತರ ಕನ್ನಡ ಬಿ.ಜೆ.ಪಿ. ನೇರವಾಗಿ ಬೊಟ್ಟುಮಾಡುತ್ತಿರುವುದು ರಾಜ್ಯದ ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು. ನಿರಂತರ ಆರು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆಕಾಗೇರಿ ಹಿಂದುತ್ವ ರಾಷ್ಟ್ರೀಯತೆಯ ಸೋಗಿನಲ್ಲಿ ವೈದಿಕ ಕೆಲಸ, ಬ್ರಾಹ್ಮಣ್ಯ ಪೋಷಣೆ ಮಾಡಿದ್ದು ಬಿಟ್ಟರೆ ಅವರ ಕೆಲಸ ಮಾತು ಎಲ್ಲವೂ ಬಹುಜನವಿರೋಧಿ ಹಿಂದೂ ವಿರೋಧಿ ನಡವಳಿಕೆಗಳೇ ಎಂದು ಪಕ್ಷಕ್ಕೆ ದೂರಿರುವ ಬಿ.ಜೆ.ಪಿ.ಯ ರಹಸ್ಯ ಪತ್ರವೊಂದು ಈಗ ಸಮಾಜಮುಖಿ ಡಾಟ್ ನೆಟ್ ಕಛೇರಿ ತಲುಪಿದೆ.
ಪ್ರಧಾನಿ ಮೋದಿ, ಬಿ.ಜೆ.ಪಿ.ಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ರಾಜ್ಯ ಬಿ.ಜೆ.ಪಿ.ಯ ನೂತನ ಅಧ್ಯಕ್ಷರಿಗೆ ಬರೆದು ಕೆಲವರಿಗೆ ಪ್ರತಿಗಳನ್ನು ರವಾನಿಸಿರುವ ಬಿ.ಜೆ.ಪಿ. ಕಾರ್ಯಕರ್ತರು ಮೂರು ಬಾರಿ ಅಂಕೋಲಾ ಕ್ಷೇತ್ರ, ಮೂರು ಬಾರಿ ಶಿರಸಿ ಕ್ಷೇತ್ರದಿಂದ ಆಯ್ಕೆಯಾಗಿ ಪ್ರಮುಖ, ಪ್ರಭಾವಿ ಹುದ್ದೆಗಳನ್ನು ಅಲಂಕರಿಸಿದ್ದರೂ ಅವರು ತಮ್ಮ ಜಾತಿ, ವೈದಿಕತೆ, ಬ್ರಾಹ್ಮಣ್ಯದ ಮೋಹದಿಂದ ಹೊರಬಂದಿಲ್ಲ. ಚುನಾವಣೆ ಗೆಲ್ಲಲು ಪಕ್ಷದ ಕಾರ್ಯಕರ್ತರು,ಹಿಂದುತ್ವ, ಸಂಘಟನೆ ಬಳಸಿಕೊಳ್ಳುವ ಕಾಗೇರಿ ತಾನೊಬ್ಬರೇ ಗೆಲ್ಲಬೇಕು. ಉಳಿದ ಕ್ಷೇತ್ರಗಳಲ್ಲಿ ಯಾವೊಬ್ಬ ಶಾಸಕರೂ ಆಯ್ಕೆಯಾಗದಿದ್ದರೆ ತನ್ನ ಮಹತ್ವ ಹೆಚ್ಚುತ್ತದೆ. ಜಿಲ್ಲೆ, ಜಾತಿ ಕೋಟಾಗಳಲ್ಲಿ ತನಗೆ ಪ್ರಮುಖ ಹುದ್ದೆ ಪಡೆಯಲು ಅನುಕೂಲ ಎನ್ನುವ ದೂರಾಲೋಚನೆಯಿಂದ ಹಿಂದಿನ ಚುನಾವಣೆಗಳಲ್ಲಿ ಇತರ ಶಾಸಕರ ವಿರುದ್ಧ ತನ್ನ ಪಟಾಲಂ ಚೂ ಬಿಟ್ಟು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಗೆಲ್ಲದಂತೆ ಮಾಡಿ ಈಗ ಅದರ ಫಲ ಅವರೂ ಉಂಡಿದ್ದಾರೆ. ಇವರ ಷಡ್ಯಂತ್ರಕ್ಕೆ ಬಲಿಯಾದವರಲ್ಲಿ ಎಂ.ಪಿ. ಕರ್ಕಿ,ಶಿವಾನಂದ ನಾಯ್ಕ, ಶಿವರಾಮ ಹೆಬ್ಬಾರ್, ಸುನಿಲ್ ನಾಯ್ಕ ಭಟ್ಕಳ ಸೇರಿದಂತೆ ಅನೇಕರಿದ್ದಾರೆ. ಇವರೆಲ್ಲರೊಂದಿಗೆ ಅನೇಕ ಪ್ರಾಮಾಣಿಕ ಕಾರ್ಯಕರ್ತರಿಗೆ ಕೂಡಾ ಇವರಿಂದ ಅನ್ಯಾಯವಾಗಿದೆ ಎಂದು ಬರೆದು ದೂರು ನೀಡಲಾಗಿದೆ.
ಕಾರವಾರದ ರೂಪಾಲಿ ನಾಯ್ಕರಿಗೆ ಹಿಂದಿನಿಂದ ಇರಿದ ಕಾಗೇರಿ ಪಕ್ಷದ ಕೆಲವರಿಗೆ ಹಿಂದಿನ ಚುನಾವಣೆಯಲ್ಲಿ ಸತೀಶ್ ಶೈಲ್ ರಿಗೆ ಬೆಂಬಲಿಸಲು ಸೂಚಿಸಿದ್ದರು. ಅಂಕೋಲಾ ಕಾರವಾರ ಕ್ಷೇತ್ರದ ಮಾಜಿ ಶಾಸಕರಾಗಿ ಪಕ್ಷದ ಗಂಗಾಧರ್ ಭಟ್, ಅಸ್ನೋಟಿಕರ್, ರೂಪಾಲಿ ನಾಯ್ಕ ವಿರುದ್ಧ ಕೆಲಸ ಮಾಡಿದ ಬಿ.ಜೆ.ಪಿ. ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ತಾನು ತನ್ನ ಪಟಾಲಂ ಬಿಟ್ಟು ಬೇರೆಯವರು ಅಧಿಕಾರಕ್ಕೇ ಬರಬಾರದೆನ್ನುವ ಸ್ವಾರ್ಥದ ರಾಜಕಾರಣಿ ಇಂಥವರಿಗೆ ಶಾಸಕರಾಗಲು ಬಿಡದ ಶಿರಸಿ ಜನರು ಇವರೇನಾದರೂ ಲೋಕಸಭೆಗೆ ಚುನಾವಣೆಗೆ ಸ್ಫರ್ಧಿಸಿದರೆ ಅವರ ವಿರುದ್ಧ ಮತಚಲಾಯಿಸುವ ಸ್ಥಿತಿಗೆ ಅವರೇ ಕಾರಣರಾಗಿದ್ದಾರೆ. ಎಂದು ವಿವರಿಸಿದ್ದಾರೆ.
ಈ ಪತ್ರಗಳ ಸಾರಾಂಶದಲ್ಲಿ ಬರಲಿರುವ ಲೋಕಸಭೆ ಚುನಾವಣೆ ಇರಲಿ, ಹಿಂದಿನ ವಿಧಾನಸಭಾ ಚುನಾವಣೆಯೇ ಆಗಲಿ, ಮುಂದಿನ ಯಾವುದೇ ಚುನಾವಣೆಗಳಿರಲಿ ಅಲ್ಲಿ ಪಕ್ಷಕ್ಕೆ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಸಂಘಟನೆ ಬಳಸಿಕೊಂಡು ಪಕ್ಷವಿರೋಧಿ ಚಟುವಟಿಕೆ ಮಾಡುತ್ತಾ ಸ್ವಜಾತಿ ಪ್ರೇಮವನ್ನೇ ಹಿಂದುತ್ವ ಎನ್ನುತ್ತಾ ಜನರನ್ನು, ಸಂಘಟನೆಯನ್ನು ವಂಚಿಸುವ ವಿಶ್ವೇಶ್ವರ ಹೆಗಡೆ ಕಾಗೇರಿಯಂಥವರಿಗೆ ಯಾವ ಅವಕಾಶವನ್ನೂ ನೀಡಬಾರದು. ಹಿಂದುಳಿದವರೇ ೧೦ ಲಕ್ಷಕ್ಕೂ ಹೆಚ್ಚು ಮತದಾರರಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿಯಾದರೂ ಬಹುಸಂಖ್ಯಾತ ಹಿಂದುಳಿದವರಿಗೆ ಅವಕಾಶ ನೀಡಿದರೆ ಚುನಾವಣೆ ಗೆಲ್ಲಬಹುದು ಇಲ್ಲದಿದ್ದರೆ ಈ ಬಾರಿ ಉತ್ತರ ಕನ್ನಡ ಲೋಕಸಭೆಯ ಬಿ.ಜೆ.ಪಿ. ಸೀಟು (ಈ ಬಾರಿ) ಸೋಲುವ ಅಪಾಯವಿದೆ ಎಂದು ವಾಸ್ತವ ತಿಳಿಸಲಾಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತುಪಡಿಸಿ ಉಳಿದ ಯಾರೇ ಸ್ಫರ್ಧಿಸಿದರೂ ಪಕ್ಷದ ತೀರ್ಮಾನಕ್ಕೆ ತಮ್ಮ ಬೆಂಬಲ ಇರುವುದಾಗಿ ಕೂಡಾತಿಳಿಸಲಾಗಿದೆ.
(ಪಕ್ಷದ ಆಂತರಿಕ ಪತ್ರ ವ್ಯವಹಾರದ ಮೂರು ಪ್ರತ್ಯೇಕ ದೂರು ಅರ್ಜಿಗಳ ಸಾರಾಂಶದ ಹಿನ್ನೆಲೆಯಲ್ಲಿ ಈ ವರದಿ ಪ್ರಕಟಿಸಲಾಗಿದೆ) (ಸಶೇಷ)