ನಮ್ಮ ಮಲೆನಾಡಿನ ಕಂಡುಬರುವ ಅಪರೂಪದ ಬರ್ಕಗಳು ಪ್ಯಾಮಿಲಿ Tragulidae (ಟ್ರಗುಲಿಡಿಯಾ) ಕುಟುಂಬಕ್ಕೆ ಸೇರಿದ ಈ ಪುಟ್ಡ ಸಸ್ಯಾಹಾರಿ ಗೊರಸುಳ್ಳ ಪ್ರಾಣಿಗಳು.
ಜಿಂಕೆಯಂತೆ ಕಂಡುಬಂದರೂ ಇವು ಜಿಂಕೆಯ ಕುಟುಂಬಕ್ಕೆ ಸೇರಿದವಲ್ಲ .ಭಾರತ ಮತ್ತು ಶ್ರೀಲಂಕಾ ಸೇರಿದಂತೆ ಆಗ್ನೇಯ ಏಶಿಯಾದ ದೇಶಗಳಾದ ಬರ್ಮಾ ಕಾಂಬೋಡಿಯಾ ಲಾವೋಸ್ ಮಲೇಶಿಯಾ ಥೈಲ್ಯಾಂಡ್ ಮತ್ತು ವಿಯೆಟ್ನಾಂ ನ ದಟ್ಟ ಅರಣ್ಯಗಳಲ್ಲಿ ಕಂಡುಬರುವ ಇವುಗಳಲ್ಲಿ ಹತ್ತು ಪ್ರಜಾತಿಗಳನ್ನ ಗುರುತಿಸಲಾಗಿದೆ .
ಇಲಿಗಾತ್ರದಿಂದ ಹಿಡಿದು ಪುಟ್ಟ ಆಡಿನ ಮರಿ ಗಾತ್ರದ ಈ ಸಸ್ಯಾಹಾರಿ ಪ್ರಾಣಿಗಳನ್ನ ಪ್ರತ್ಯೇಕವಾಗಿ Tragulidae ಕುಟುಂಬಕ್ಕೆ ವರ್ಗಿಕರಿಸಲಾಗಿದೆ.
ತೀವ್ರತರವಾದ ಅರಣ್ಯನಾಶದಿಂದ ಅಳಿವಿನ ಅಂಚಿನಲ್ಲಿರುವ ಈ ಪುಟ್ಟ ಬರ್ಕಗಳನ್ನ ಸಂರಕ್ಷಿಸುವ ಕೆಲಸವಾಗಬೇಕಿದೆ.
ಸ್ಥಳೀಯವಾಗಿ ನಾವು ಬರ್ಕ ಎಂದು ಕರೆಯುತ್ತೇವೆ .
ಬೇರೆ ದೇಶಗಳಲ್ಲಿ Mouse deer ಅಂತ ಕರೀತಾರೆ .
ಬರ್ಕಗಳ ಕುರಿತಾಗಿ ಪೂರ್ಣಚಂದ್ರ ತೇಜಸ್ವಿಯವರ ಅವರ ಪರಿಸರದ ಪುಸ್ತಗಳಲ್ಲಿ ಸಾಕಷ್ಟು ಮಾಹಿತಿ ಇದೆ.
PC: ಮೃತ್ಯುಂಜಯ ನಾರಾ