


ಗ್ರಾಮೀಣ ರೈತರ ಹೆಮ್ಮೆಯ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆ ಸಿದ್ಧಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ತನ್ನ ಕಾನಸೂರು ಶಾಖೆಯ ನೂತನ ಕಟ್ಟಡಗಳ ಉದ್ಘಾಟನೆಯನ್ನು ಜ.೭ ರಂದು ಕಾನಸೂರಿನಲ್ಲಿ ನಡೆಸಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟಿ.ಎಂ.ಎಸ್. ಸದಸ್ಯರು ಕಾನಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ ನೀಡಿದರು.
ಟಿ.ಎಂ.ಎಸ್. ಸಂಸ್ಥೆ ಕಳೆದ ಐದು ವರ್ಷಗಳ ಅವಧಿಯಲ್ಲಿ ೨೪.೫ ಕೋಟಿ ಲಾಭ ಗಳಿಸಿದೆ. ಈ ಐದು ವರ್ಷಗಳಲ್ಲಿ ಸಂಸ್ಥೆಯ ಕಟ್ಟಡ ನಿರ್ಮಾಣ ನವೀಕರಣ ಗಳನ್ನು ಮಾಡಲಾಗಿದೆ ಜೊತೆಗೆ ಸಂಸ್ಥೆಗೆ ಎರಡು ನಿವೇಶನಗಳನ್ನೂ ಖರೀದಿಸಲಾಗಿದೆ.
ಸಂಸ್ಥೆಯ ಗ್ರಾಮೀಣ ಶಾಖೆ ಕಾನಸೂರಿನಲ್ಲಿ ೧.೮೬ ಕೋಟಿ ವೆಚ್ಚದಲ್ಲಿ ವ್ಯಾಪಾರಾಂಗಣ, ಅಡಿಕೆ ಮತ್ತು ಭತ್ತದ ಗೋದಾಮುಗಳ ನಿರ್ಮಾಣ, ೨೮.೫೦ ಲಕ್ಷಗಳಲ್ಲಿ ಶಾಖೆಯ ಕಛೇರಿ ನಿರ್ಮಾಣ ಮಾಡಲಾಗಿದೆ. ಇವುಗಳ ಉದ್ಘಾಟನೆ ಜನೇವರಿ ೬ ಮತ್ತು ೭ ರಂದು ನಡೆಯಲಿವೆ.- ಆರ್ೆಂ. ಹೆಗಡೆ ಬಾಳೇಸರ,-ಅಧ್ಯಕ್ಷ ಟಿ.ಎಂ.ಎಸ್. ಸಿದ್ಧಾಪುರ
