

ರಾಜ್ಯ ಬಿ.ಜೆ.ಪಿ.ಯಲ್ಲಿ ಬಣ ರಾಜಕಾರಣ ಉಲ್ಬಣಿಸಿದ್ದು ಬಿ.ಎಲ್. ಸಂತೋಷ ಬಣದ ಪ್ರತಾಪ್ ಸಿಂಹ, ತೇಜಸ್ವಿಸೂರ್ಯ ಸೇರಿದಂತೆ ಕನಿಷ್ಠ ೫ ಜನ ಸಂಸದರಿಗೆ ಬಿ.ಜೆ.ಪಿ. ಟಿಕೆಟ್ ನಿರಾಕರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಈಶ್ವರಪ್ಪನವರನ್ನು ಎಳೆದು ಕೂಡ್ರಿಸಿದ ಬಿ.ಜೆ.ಪಿ. ಈ ಬಾರಿ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡರನ್ನು ಸ್ಫರ್ಧಿಸುವುದು ಬೇಡ ಎಂದು ಮೂಲೆಗೆ ತಳ್ಳಿದೆ.
ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದ್ದು ಜಿಲ್ಲೆಯಾದ್ಯಂತ ಬಿ.ಜೆ.ಪಿ. ಕಾರ್ಯಕರ್ತರೆ ಈ ಬಾರಿ ಅನಂತ ಕುಮಾರ ಬೇಡ ಎನ್ನುವ ಅಭಿಯಾನ ಪ್ರಾರಂಭಿಸಿರುವ ಸುದ್ದಿ ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಮತ್ತೆ ಚುನಾವಣೆಗೆ ಕೇಸರಿ ಟವೆಲ್ ಕೊಡಗಿದ್ದ ಅನಂತಕುಮಾರ್ ಹೆಗಡೆವರಿಗೆ ಕಾಯ್ದುನೋಡಿ ತಯಾರಿ ಬೇಡ ಎನ್ನುವ ಸಂದೇಶ ರವಾನಿಸಿದೆಯಂತೆ.
ಬಿ.ಜೆ.ಪಿ.ಯಲ್ಲಿ ಬಿ.ಎಲ್. ಸಂತೋಷ ಬಣ, ಯಡಿಯೂರಪ್ಪ ಬಣ ಎನ್ನುವ ಎರಡು ಗುಂಪುಗಳಾಗಿವೆ. ಇದರ ಪರಿಣಾಮವಾಗಿ ಬಿ.ಎಲ್. ಸಂತೋಷರಿಂದ ಅನಾಯಾಸವಾಗಿ ಸಂಸದರಾಗಿದ್ದ ತೇಜಸ್ವಿ ಸೂರ್ಯ ಮತ್ತು ಪ್ರತಾಪ ಸಿಂಹರಿಗೆ ಟಿಕೇಟ್ ಸಿಗುವುದು ದರ್ಲಭವಾಗಿದೆ.
ಅನ್ಯರು ಬಹುಸಂಖ್ಯಾತರಾಗಿರುವ ಕೆಲವು ಕ್ಷೇತ್ರಗಳಲ್ಲಿ ಹಿಂದುತ್ವದ ಹೆಸರಲ್ಲಿ ಆಯ್ಕೆಯಾಗುತಿದ್ದ ಬ್ರಾಹ್ಮಣರಿಗೆ ಗೇಟ್ ಪಾಸ್ ನೀಡಲು ಸಿದ್ಧವಾಗಿರುವ ಬಿ.ಜೆ.ಪಿ. ಶೋಕಿಗಾಗಿ ಸಂಸದರಾಗಿದ್ದ ತೇಜಸ್ವಿ ಸೂರ್ಯ ಮತ್ತು ಅನಂತಕುಮಾರ ಹೆಗಡೆಯವರಿಗೆ ಕೋಕ್ ನೀಡಿ ಆ ಕ್ಷೇತ್ರಗಳಲ್ಲಿ ಮಹಿಳೆ ಅಥವಾ ಒಬಿ.ಸಿ. ಗೆಲ್ಲಿಸಿ ನಿಮ್ಮ ಹಿಂದುತ್ವ ಸಾಬೀತುಮಾಡಿ ಎಂದು ಬ್ರಾಹ್ಮಣರಿಗೆ ಟಾಸ್ಕ್ ನೀಡಿದೆ. ಇದರ ಭಾಗವಾಗಿ ಬಿ.ಜೆ.ಪಿ. ಬೆಂಗಳೂರು ದಕ್ಷಿಣದಲ್ಲಿ ಜೈಶಂಕರ್ ಅಥವಾ ತೇಜಸ್ವಿನಿ ಅನಂತ ಕುಮಾರ ರಿಗೆ ಅವಕಾಶ ಕಲ್ಫಿಸಲು ಯೋಚಿಸಿದೆ.
ಸಾರ್ವತ್ರಿಕ ವಿರೋಧಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ ಬದಲು ನಿರ್ಮಲಾ ಸೀತಾರಾಮನ್, ರೂಪಾಲಿ ನಾಯ್ಕ ಅಥವಾ ಮಿಥುನ್ ಶೇಟ್ ರಿಗೆ ಲೋಕಸಭೆಯ ಟಿಕೇಟ್ ನೀಡಿ ಬ್ರಾಹ್ಮಣರ ಹಿಂದುತ್ವ, ರಾಷ್ಟ್ರೀಯತೆ ಅಜೆಂಡಾವನ್ನು ನಿಗಷಕ್ಕೆ ಒಡ್ಡುವ ತಯಾರಿ ನಡೆಸಿದ್ದು ಮಾತೆತ್ತಿದರೆ ಮೋದಿ, ಹಿಂದುತ್ವ, ರಾಷ್ಟ್ರೀಯತೆ, ದೇಶಪ್ರೇಮ ಎನ್ನುವ ಬ್ರಾಹ್ಮಣರು ಈ ಬಾರಿ ನಿಗದಿತ ಸಮೂದಾಯದವರನ್ನು ಬಿಟ್ಟು ಬೇರೆಯವರನ್ನು ಗೆಲ್ಲಿಸುತ್ತಾರೋ ಎನ್ನುವ ಪರೀಕ್ಷೆ ನಡೆಸಲಿದ್ದಾರಂತೆ!
ಬಿ.ಜೆ.ಪಿ.ಯ ಈ ವಿದ್ಯಮಾನದಿಂದ ಕಂಗೆಟ್ಟ ಬ್ರಾಹ್ಮಣ ನಾಯಕರು ಮೋದಿ ಟಾರ್ಗೆಟ್ ಮುಸ್ಲಿಂ ಎಂದುಕೊಂಡಿದ್ದರೆ ಮೋದಿ ಬಳಗ ಈಗ ತಮ್ಮ ಬುಡಕ್ಕೇ ಬಿಸಿನೀರು ಬಿಡಲು ಯೋಚಿಸಿರುವ ಬಗ್ಗೆ ಆಘಾತಕ್ಕೊಳಗಾಗಿದ್ದಾರೆ.
ಚಿಕ್ಕಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಹಿಂದುಳಿದವರಿಗೆ ಬಿ.ಜೆ.ಪಿ.ಯಿಂದ ಅನ್ಯಾಯವಾಗುತಿದ್ದು ಈ ಕಾರಣ ಬಳಸಿ ಚುನಾವಣೆ ಗೆಲ್ಲಲು ಯೋಚಿಸಿರುವ ಕಾಂಗ್ರೆಸ್ ಗೆ ಶಾಕ್ ನೀಡಲು ಯೋಜಿಸಿರುವ ಬಿ.ಜೆ.ಪಿ. ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ ಪಕ್ಷಕ್ಕಾಗಿ ದುಡಿಯಲಿ ಅವರನ್ನು ಗೆಲ್ಲಿಸಿದ ಕಾರ್ಯಕರ್ತರ ಪರವಾಗಿ ಈ ಇಬ್ಬರು ಸಂಸದರು ಪಕ್ಷದ ಅಭ್ಯರ್ಥಿ ಗೆಲ್ಲಿಸಲಿ ಎಂದು ಪ್ರತಿಪಾದಿಸಿದೆಯಂತೆ!
