ನಿರಂತರ ನಾಲ್ಕು ಬಾರಿ ಒಟ್ಟೂ ಐದು ಬಾರಿ ಹಿಂದಿನ ಕೆನರಾ ಮತ್ತು ಇಂದಿನ ಉತ್ತರ ಕನ್ನಡ ಸಂಸದರಾಗಿ ನಿಷ್ಕ್ರೀಯತೆ ಮತ್ತು ಅನಾಚಾರಗಳಿಂದ ಕುಖ್ಯಾತನಾಗಿರುವ ಅನಂತ ಕುಮಾರ ಹೆಗಡೆ ವಿರುದ್ಧ ʼಹೆಗಡೆ ಓಡಿಸಿ ಕ್ಷೇತ್ರ ಉಳಿಸಿʼ ಎನ್ನುವ ಅಭಿಯಾನ ಪ್ರಾರಂಭವಾದಂತಿದೆ.
ಒಮ್ಮೆಯೂ ಮುನ್ನೋಟ, ಅಭಿವೃದ್ಧಿ ಅಧಾರದಲ್ಲಿ ಮತ ಕೇಳದ ಅನಂತಕುಮಾರ ಹೆಗಡೆ ಪ್ರತಿ ಚುನಾವಣೆ ಮೊದಲು ಪ್ರಚೋದನಾಕಾರಿ ಅವಿವೇಕದ ಮಾತುಗಳಿಂದ ಮುಗ್ಧರ ಮನಗೆಲ್ಲುತಿದ್ದ! ಅನಂತ ಕುಮಾರ ತಂತ್ರ ಈ ಬಾರಿ ಅವರಿಗೇ ಉಲ್ಟಾ ಹೊಡೆದಂತಿದೆ.
ಪ್ರತಿಚುನಾವಣೆಯಂತೆ ಈ ಬಾರಿ ಕೂಡಾ ನಾನು ಸ್ಫರ್ಧಿಯಲ್ಲ ಎನ್ನುವ ಅವರ ಸಂಘದ ಸುಳ್ಳಿಗೆ ಈ ಬಾರಿ ಪ್ರಾರಂಭದಲ್ಲೇ ಹಿನ್ನಡೆಯಾಗಿ ತನ್ನ ಅನುಯಾಯಿಗಳ ಮೂಲಕ ತಾನೇ ಒತ್ತಾಯದ ಅಭಿಯಾನ ಮಾಡಿಸಿಕೊಂಡ ಹೆಗಡೆ ಚುನಾವಣೆ ಮೊದಲೇ ಅಪಹಾಸ್ಯಕ್ಕೆ ತುತ್ತಾದರು.
ರಾಮಮಂಂದಿರದ ನೆಪದಲ್ಲಿ ತನ್ನ ಮತಾಂಧ ರಾಜಕೀಯದ ಬೇಳೆ ಬೇಯಿಸಲು ಪ್ರಯತ್ನಿಸುತ್ತಿರುವ ನಿಷ್ಪ್ರಯೋಜಕ ಸಂಸದ ಅನಂತ ಹೆಗಡೆ ವಿರುದ್ಧ ಪಕ್ಷದ ವಲಯ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಕೂಡಾ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅವಿವೇಕದ ಮಾತುಗಳಿಂದ ಚುನಾವಣೆ ಗೆಲ್ಲುವ ಕಾಲ ಮುಗಿಯಿತು ಎಂದು ಮನಗಂಡ ಬಿ.ಜೆ.ಪಿ. ಈ ಬಾರಿ ಅನಂತ ಬದಲು ಹೊಸ ಮುಖಕ್ಕೆ ಅವಕಾಶ ಕೊಡಲು ಸಿದ್ಧವಾಗಿದೆ. ಈ ಸುದ್ದಿ ಗ್ರಹಿಸಿದ ಅನಂತಕುಮಾರ ಮತ್ತೆ ಹಿಂದಿನಂತೆ ಬಾಷಣದ ಮೂಲಕ ಅಲೆ ಎಬ್ಬಿಸಿದರೆ ಮತ್ತೆ ಟಿಕೇಟ್ ಪಡೆದು ಇನ್ನೈದು ವರ್ಷ ಮೋದಿ ಭಜನೆಯಲ್ಲಿ ನಿದ್ರೆ ಮಾಡಬಹುದೆಂದುಕೊಂಡಿರುವ ಅನಂತ ಕುಮಾರ ತಂತ್ರ ಅರಿತ ಬಿ.ಜೆ.ಪಿ. ಕೂಡಾ ಈ ಬಾರಿ ನೀವು ಅಭ್ಯರ್ಥಿಯಲ್ಲ ಪಕ್ಷದ ಅನುಮತಿ ಇಲ್ಲದೆ ಸಭೆ ನಡೆಸಬೇಡಿ ಎಂದು ವಾರ್ನ್ ಮಾಡಿದೆಯಂತೆ.
ಹೀಗೆ ತನ್ನ ವೈದಿಕ ಕುತಂತ್ರದ ಮತಾಂಧ ರಾಜಕಾರಣಕ್ಕೆ ವಿರೋಧ ವ್ಯಕ್ತವಾಗುತಿದ್ದರೂ ಹುಂಬತನದಿಂದ ಕ್ಷೇತ್ರ ಪರ್ಯಟನೆ ಪ್ರಾರಂಭಿಸಿರುವ ಹೆಗಡೆಗೆ ಅವರ ಹಿರಿತನ ಲೆಕ್ಕಿಸದೆ ʼಮಗನೆ ಇಷ್ಟು ವರ್ಷ ಎಲ್ಲೊಗಿದ್ದಿ? ಚುನಾವಣೆ ಮೊದಲು ರಾಮ, ಹಿಂದುತ್ವ ನೆನಪಾಯಿತೆ? ಎಂದೆಲ್ಲಾ ನೇರವಾಗಿ ಪ್ರಶ್ನಿಸತೊಡಗಿದ್ದಾರೆ.
ಇದರಿಂದ ಶುಗರ್ ಹೆಚ್ಚಿಸಿಕೊಂಡಿರುವ ಹೆಗಡೆ ಚುನಾವಣೆ ಮೊದಲು ಮತ್ತೆ ಹಾಸಿಗೆ ಹಿಡಿದರೂಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯ ಕ್ಷೇತ್ರದಾದ್ಯಂತ ಚರ್ಚೆಯಾಗುತ್ತಿದೆ.
ಸಕ್ರಾಂತಿ ಮಾರನೇ ದಿನ ಕಿತ್ತೂರಿನಲ್ಲಿ ಅನಂತಕುಮಾರ ಹೆಗಡೆಗೆ ತರಾಟೆಗೆ ಶುರುಹಚ್ಚಿಕೊಂಡ ಬಿ.ಜೆ.ಪಿ.ಯ ಹಿರಿಯ ಮುಖಂಡರು, ಮಾಜಿ, ಹಾಲಿ ಶಾಸಕರು ಅನಂತಕುಮಾರ ಕಾಲರ್ ಹಿಡಿದು ಹೆಗಡೆ ನಿನ್ನ ಲಾಗಾಯ್ತಿನ ಸನಾತನವಾದಿ ವೈದಿಕ ನಾಟಕ ನಮ್ಮೆದುರು ನಡೆಯಲ್ಲ. ಮಾನಮರ್ಯಾದೆ ಇದ್ದರೆ ಚುನಾವಣಾ ರಾಜಕಾರಣದಿಂದ ಹಿಂದೆ ಸರಿ ಇಲ್ಲದಿದ್ದರೆ ಈ ಚುನಾವಣೆಯಲ್ಲಿ ನಿನ್ನ ಚಟ್ಟ ಕಟ್ಟುತ್ತೇವೆ ಎಂದು ನೇರವಾಗಿ ಗದುಮಿದ್ದಾರೆ. ಇದರಿಂದ ಸಹನೆ ಕಳೆದುಕೊಂಡ ಪೇಪರ್ ಹುಲಿ ಹೆಗಡೆ ಅಂಡುಸುಟ್ಟ ಬೆಕ್ಕಿನಂತೆ ಮುಖಕೆಳಗೆ ಮಾಡಿ ಶಂಡನಂತೆ ಎದ್ದುಬಂದಿದ್ದಾನೆ ಎಂದು ಅವರ ಪಕ್ಷದವರೇ ಲೇವಡಿಮಾಡುವಂತಾಗಿದೆ.
ವಿಶೇಶವೆಂದರೆ ಈ ಬಾರಿ ಮತಾಂಧತೆಯ ಅವಿವೇಕದ ಚುನಾವಣೆ ತಂತ್ರದ ಮೂರನೇ ದರ್ಜೆಯ ಹೇಳಿಕೆ ಕೊಟ್ಟ ಅನಂತ ಹೆಗಡೆ ಪರವಾಗಿ ಶತಮೂರ್ಖ ಈಶ್ವರಪ್ಪ ಬಿಟ್ಟರೆ ಬಿ.ಜೆ.ಪಿ.ಯ ಮತ್ತ್ಯಾರೂ ಬೆಂಬಲಿಸಿಲ್ಲ. ಬದಲಾಗಿ ಬಹುತೇಕ ಬಿ.ಜೆ.ಪಿ. ಮುಖಂಡರು ಹೆಗಡೆ ಮಾತಿಗೆ ನಾವು ಪ್ರತಿಕ್ರೀಯಿಸಿದರೆ ಅವನಿಗೂ ತಮಗೂ ವ್ಯತ್ಯಾಸ ಉಳಿಯಲ್ಲ ಎಂದು ಈ ಗುಳ್ಳೆನರಿಯನ್ನು ಏಕಾಂಗಿ ಮಾಡಿದ್ದಾರೆ. ಕೆಲವು ಮತಿವಿಕಲ ಸಂಘಿ ಶನಿಗಳು ಮಾತ್ರ ಈ ಅವಿವೇಕಿಯ ಪರವಾಗಿ ವಕಾಲತ್ತು ವಹಿಸುತ್ತಿವೆ ಅಷ್ಟೆ.