ಮತ್ತೆ ಬೊಗಳಿದ ಹುಚ್ಚು ಹೆಗಡೆ….. ಅಯೋಗ್ಯ ಸಂಸದನ ಅಸಹ್ಯ ನಡವಳಿಕೆ

ಅಪ್ಪ-ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ, ರಾಮ ಮಂದಿರ ಕಟ್ಟಿದ್ದು ಹಿಂದೂಗಳು: ಅನಂತ್ ಕುಮಾರ್ ಹೆಗಡೆ

ನಾವು ಮೊದಲು ಹಿಂದೂಗಳು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದರೆ ಅವರ ಜಾತಿ ಹೆಸರು ಹೇಳುತ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ ಎಂದು ಎಂದು ಮತ್ತೊಮ್ಮೆ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Google News

Ananth Kumar Hegade

ಬೆಳಗಾವಿ: ನಾವು ಮೊದಲು ಹಿಂದೂಗಳು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದರೆ ಅವರ ಜಾತಿ ಹೆಸರು ಹೇಳುತ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ರೇ ಹಿಂದೂ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯತೀತ ಅಂತಾ ಹೇಳ್ತಾರೆ ಎಂದು ಎಂದು ಮತ್ತೊಮ್ಮೆ ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಅವರು, ಈಗಾಗಲೇ ರಾಮ ಮಂದಿರ ಉದ್ಘಾಟನೆ ಅಕ್ಷತೆ ಮನೆ ಮನೆಗೆ ಹೋಗಿದೆ. ಐನೂರು ವರ್ಷದ ನಂತರ ನಮಗೆ ಜಯ ಸಿಕ್ಕಿದೆ. ರಾಮ ಮಂದಿರವನ್ನು ಯಾರೋ ಉದ್ಯಮಿ, ಕೈಗಾರಿಕೋದ್ಯಮಿಗಳು ಕಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಇಟ್ಟಿಗೆ ಕಳಿಸಿದ್ದೇವೆ, ಇಡೀ ದೇಶದ ಜನ ಜಾಗೃತರಾಗಿ ಕಟ್ಟಿದ್ದು. ಅಯೋಧ್ಯೆ ಹಿಂದೂಗಳ ಪ್ರತೀಕ, ಸೌರಾಷ್ಟ್ರದ ಸೋಮನಾಥ ದೇವಾಲಯ ಸರ್ಕಾರ ಕಟ್ಟಿದ್ದು. ರಾಮ ಮಂದಿರ ಸರ್ಕಾರ ಕಟ್ಟಿಲ್ಲ, ಹಿಂದೂಗಳು ಕಟ್ಟಿದ್ದಾರೆ. ಅಪಮಾನವನ್ನು ತೊಳೆದು ರಾಮ ಮಂದಿರ ಕಟ್ಟಲಾಗಿದೆ. ನಾವು ಹಿಂದೂಗಳು ಎಂದು ಮರೆತು ಹೋಗಿತ್ತು. ಈಗಲೂ ಸಾಕಷ್ಟು ಜನ ತಕ್ಷಣ ಕೇಳಿದ್ರೆ ಅವರ ಜಾತಿ ಹೆಸರು ಹೇಳ್ತಾರೆ. ಹಿಂದೂ ಅಂತಾ ನೆನಪು ಮಾಡಿಕೊಂಡು ಹೇಳ್ತಾರೆ. ಸಂಸ್ಕಾರ ಇದ್ದರೆ ಹಿಂದೂ ಅಂತಾ ಹೇಳ್ತಾರೆ. ಕೆಲವು ಮಂದಿ ಜಾತ್ಯತೀತ ಅಂತಾ ಹೇಳ್ತಾರೆ. ಅಪ್ಪ ಅಮ್ಮ ಗೊತ್ತಿಲ್ಲದವರು ಜಾತ್ಯಾತೀತ ಅಂತಾ ಹೇಳ್ತಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಮತ್ತೊಮ್ಮೆ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

ಜಾತಿ ಹೆಸರಲ್ಲಿ, ಭಾಷೆ ಹೆಸರಲ್ಲಿ ನಮ್ಮನ್ನು ಒಡೆಯಲಾಗಿದೆ. ಮರಾಠಿ, ಕನ್ನಡ ಒಂದಾಗುತ್ತಾರೆ ಅಂದರೆ ಕತ್ತಿ ತಗೊಂಡು ಬರ್ತಾರೆ. ಈ ರೀತಿ ಒಡೆದು ಇಟ್ಟರೆ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯದ ನಂತರ ಮರಾಠಿ-ಕನ್ನಡ ಜಗಳ ಶುರುವಾಯಿತು. ಸ್ವಾತಂತ್ರ್ಯ ನಂತರ ಎಲ್ಲದರಲ್ಲೂ ನಮ್ಮನ್ನು ಒಡೆದರು. ಇದರ ಹೊರತಾಗಿ ಒಟ್ಟಾಗಿ ಒಂದಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣ ಭೈರವ ರೀತಿಯಲ್ಲಿ ನಾವು ಈಗ ಏಳುತ್ತಿದ್ದೇವೆ. ನಾವು ಏಳ್ತಾಯಿದೀವಿ ಅಂದ ತಕ್ಷಣ ಇಡೀ ಜಗತ್ತು ಅಲ್ಲಾಡಿದೆ. ಐನೂರು ವರ್ಷದ ಪಾಪವನ್ನು ಇಂದು ತೊಳೆದುಕೊಂಡು ರಾಮ ಮಂದಿರ ಕಟ್ಟುತ್ತಿದ್ದೇವೆ‌. ಇನ್ನೂ ಕಾಶಿ ಇದೆ, ಮಥುರಾ ಇದೆ ಹಳ್ಳಿ ಹಳ್ಳಿಗಳಲ್ಲಿ ಅಪಮಾನ ಆದ ತುಂಬಾ ದೇವಸ್ಥಾನ ಇವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನ ಸೇಡು ತೀರಿಸಿಕೊಳ್ಳಬೇಕು ಎಂದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *