


ಸಿದ್ದಾಪುರ : ಕೇಂದ್ರ ಸರಕಾರ ದಿಂದ ನೀಡಲಾಗುವ ಭಾರತ್ ಬ್ರಾಂಡ್ ಅಕ್ಕಿಯನ್ನು ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಸರ್ಕಲ್ ನಲ್ಲಿ ವಿತರಿಸಲಾಯಿತು. ಅಕ್ಕಿ ಖರೀದಿಸಲು ಬಂದ ಸಾರ್ವಜನಿಕರು ನೂಕು ನುಗ್ಗಲಿನಲ್ಲಿ ಅಕ್ಕಿ ಖರೀದಿಸಿದರು. ಕೆ ಜಿ ಗೆ ರೂ 29 ರಂತೆ ಪ್ರತಿ ವ್ಯಕ್ತಿ ಗೆ 10 ಕೆಜಿ ಅಕ್ಕಿ ಬ್ಯಾಗನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಕೆ ಜಿ ನಾಯ್ಕ್, ಮಾರುತಿ ನಾಯ್ಕ್, ಮಂಜುನಾಥ್ ಭಟ್ ಗುರುರಾಜ್ ಶಾನ್ ಬಾಗ್, ನಾಗರಾಜ್ ನಾಯ್ಕ್, ಸುಧೀರ್ ನಾಯ್ಕ್, ಎಸ್ ಕೆ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.
