ಡಿ.ಎಸ್.ಎಸ್.ನಿಂದ ವಿವಿಧ ಬೇಡಿಕೆಗಳಿಗೆ ಆಗ್ರಹ-ಮನವಿ


ಸಿದ್ದಾಪುರ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯ ನೇತೃತ್ವದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹಪೂರ್ವಕವಾಗಿ ಮನವಿ ಸಲ್ಲಿಸಲಾಯಿತು.


ಪಟ್ಟಣದಲ್ಲಿನ ಸನಂ.೧೧೧ಅ\೨ನ ೨೦ಗುಂಟೆ ಸರ್ಕಾರಿ ಪಡಜಾಗವನ್ನು ಸ್ವೀಪರ್ ಕ್ವಾಟರ‍್ಸಗೆ ಮೀಸಲಿಟ್ಟಿದ್ದು ಈಗ ಅಲ್ಲಿದ್ದ ಎಲ್ಲ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.ಪಟ್ಟಣದಲ್ಲಿ ಡಾ|ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಿಸಲು ಈ ಜಾಗ ಸೂಕ್ತಸ್ಥಳವಾಗಿದ್ದು ಈಗಾಗಲೇ ಸಹಾಯಕ ಕಮೀಷನರ್ ಅವರ ಮಂಜೂರಿಗೆ ಕಳುಹಿಸಲಾಗಿದೆ.ಆ ಸ್ಥಳವನ್ನು ಡಾ|ಅಂಬೇಡ್ಕರ್ ಭವನ ನಿರ‍್ಮಾಣಕ್ಕೆ ಮಂಜೂರು ಮಾಡಬೇಕು.ಪಟ್ಟಣದ ಮಿನಿ ವಿಧಾನಸೌಧದ ಎದುರು ಇರುವ ಡಾ| ಅಂಬೇಡ್ಕರ್ ವೃತ್ತ ರಸ್ತೆ ಅಗಲೀಕರಣದ ಕಾರಣ ಒಡೆದುಹಾಕಿದ್ದು ಅದನ್ನು ಮರುಸ್ಥಾಪನೆ ಮಾಡಿ ಅಂಬೇಡ್ಕರ್ ಪುತ್ಥಳಿಯನ್ನು ನಿರ‍್ಮಾಣ ಮಾಡಬೇಕು.ತಾಲೂಕಿನ ಬಳ್ಳಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ಮತ್ತು ಮಟ್ಕಾ ಜೂಜು ಹೆಚ್ಚಾಗಿದ್ದು ಇದರಿಂದ ಪ.ಜಾ ಮತ್ತು ಪ.ಪಂಗಡದ ಮಕ್ಕಳು ಆ ವ್ಯಸನಕ್ಕೆ ಸಿಲುಕಿ ವಿದ್ಯಾಭ್ಯಾಸ ನಿಲ್ಲಿಸುತ್ತಿದ್ದು ಅದನ್ನು ನಿಯಂತ್ರಿಸಬೇಕು.ಅಲ್ಲದೇ ತಾಲೂಕಿನ ಹಲವೆಡೆ ಪರಿಶಿಷ್ಠ ಜಾತಿ,ಪಂಗಡದ ವಿದ್ಯಾರ್ಥಿಗಳು ಶಾಲೆಯನ್ನು ಅರ್ಧಕ್ಕೆ ಬಿಡುತ್ತಿದ್ದು ಅದಕ್ಕೆ ಸೂಕ್ತ ಪರಿಹಾರ ಕಂಡು ಆ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು.ತಾಲೂಕಿನ ಹಲವೆಡೆ ಪರಿಶಿಷ್ಠರು ಸಾಗುವಳಿ ಮಾಡುವ ಜಮೀನುಗಳು ಹಂಗಾಮಿ ಲಾಗಣಿಯಲ್ಲಿ ಇದ್ದು ತಮ್ಮ ಹೆಸರು ಲಗತ್ತಿದ್ದರೂ ಕೂಡ ಅರಣ್ಯ ಇಲಾಖೆಯವರು ದಬ್ಬಾಳಿಕೆ ಮಾಡುತ್ತಿದ್ದಾರೆ.(ಉದಾ: ಬೇಡ್ಕಣಿ ಗ್ರಾಮದ ಸ,ನಂ.೩೭).ಇಂಥ ಸಾಗುವಳಿ ಜಮೀನನ್ನು ಪರಿಶಿಷ್ಠರಿಗೆ ಮಂಜೂರು ಮಾಡಬೇಕು.ಹಲಗೇರಿ ಗ್ರಾಪಂನ ಕುಳಿಬೀಡು ಗ್ರಾಮದ ಸ.ನಂ.೮೭ರಲ್ಲಿ ಸರಕಾರಿ ಪಡ ಗೋಮಾಳವಿದ್ದು ಅದರಲ್ಲಿ ೧ ಎಕರೆ ಪರಿಶಿಷ್ಠರ ಸ್ಮಶಾನಕ್ಕೆ ಮೀಸಲಿಡಬೇಕು.

ಕಾನಗೋಡಿನ ಸ.ನಂ ೨೬೧ರಲ್ಲಿ ಚಮಗಾರ ಜಾತಿಯವರಿಗೆ ಇದ್ದ ಸ್ಮಶಾನ ಜಾಗ ಒತ್ತುವರಿಯಾಗಿದ್ದು ಅದನ್ನು ಖುಲ್ಲಾ ಪಡಿಸಬೇಕು. ಯಶಸ್ವಿನಿ ಯೋಜನೆಯಲ್ಲಿ ಜಮೀನು ಪಹಣಿಪತ್ರಿಕೆ ಹೊಂದಿದವರಿಗೆ ಮಾತ್ರ ಸೌಲಭ್ಯದ ಅವಕಾಶವಿದ್ದು ಪಹಣಿ ಇಲ್ಲದ ಪರಿಶಿಷ್ಠರಿಗೆ ಅದರಲ್ಲಿ ಅವಕಾಶ ಒದಗಿಸಬೇಕು.ಪಟ್ಟಣದಲ್ಲಿ ವಾಸವಿರುವ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಬೋವಿವಡ್ಡರ ಸಮಾಜದವರಿಗೆ ವಸತಿಯೋಜನೆಯಲ್ಲಿ ಸೌಲಭ್ಯ ಒದಗಿಸಬೇಕು.ಪಟ್ಟಣದ ಬೋವಿವಡ್ಡರ ಹಾಗೂ ಚಮಗಾರ ಸಮಾಜದವರು ತಮ್ಮ ಕುಲಕಸುಬನ್ನು ನಡೆಸಲು ಈಗಿರುವ ಸ್ಥಳದಲ್ಲೇ ಅವಕಾಶ ಕಲ್ಪಿಸಬೇಕು ಎಂದು ದ.ಸಂ.ಸ.ನ ಜಿಲ್ಲಾ ಸಂಘಟಕ ಸಂಚಾಲಕ ಎಚ್.ಕೆ.ಶಿವಾನಂದ,ಶಿವರಾಂ ಬಳ್ಳಟ್ಟೆ, ತಾಲೂಕ ಸಂಚಾಲಕ ಅಣ್ಣಪ್ಪ ಹಸ್ಲರ್, ಪದಾಧಿಕಾರಿಗಳಾದ ಲಕ್ಷö್ಮಣ ಬೋರ‍್ಕರ್,ಲೋಕೇಶ ಚನ್ನಯ್ಯ, ಪರಶುರಾಮ ಬೋವಿವಡ್ಡರ ಮುಂತಾದ ಅನೇಕರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಕೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *