


******
ನಾನವಳನ್ನು
ಕೂಡುತ್ತಿದ್ದೆ- ಯಾಂತ್ರಿಕವೆಂಬಷ್ಟು ಜಡವಾಗಿ!
ಅಷ್ಟೇ ಯಾಂತ್ರಿಕವಾಗಿ ಗಾಳಿ ಹರಿಸುತ್ತಿತ್ತು ಒಳಗೆ.
ಒಂದು ದಿನ
ಆ ಗಿಡದಲೊಂದು
ಹೂವರಳಿತು.
ಅದರ ಕಮ್ಮನೆ ಗಂಧ
ಗಾಳಿ ಸೇರಿ-
ನಮ್ಮುಸಿರ ಹೊಕ್ಕು
ಅಷ್ಟೇ ಧಾವಂತದಲಿ ತಿರುಗಿ
ಈ ಮೈಮನಗಳ ಕೊಳೆಯ ಹೊತ್ತು
ಮರಳಿ ಗಿಡವ ಸೇರಿತು.
ಆ ರಾತ್ರಿ ಹೂ ಮುತ್ತನಿಟ್ಟು
ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ!
ಮಬ್ಬುಗೂಡಿದ ಅವುಗಳನು
ಎದುರಿಸಲಾಗದೆ-
ಅವಳ ಬಿಗಿದು ತಬ್ಬಿದೆ
ಮರುಮುಂಜಾನೆ
ಜಗದ ಅಕ್ಕರೆಯನೆಲ್ಲ ನೀರಿಗದ್ದಿ
ಅವಳು
ಗಿಡಕೆ ಸುರುವುತಿದ್ದಳು.
– ದಿನೇಶ್ ಕುಕ್ಕುಜಡ್ಕ
