ಫೆ.17 ರ ಶನಿವಾರ ಸಿದ್ಧಾಪುರದಲ್ಲಿ ಸಿದ್ಧಾಪುರ ಉತ್ಸವ ನಡೆಯಲಿದ್ದು ಪೂರ್ವ ಸಿದ್ಧತೆಗಳು ಮುಕ್ತಾಯವಾಗಿವೆ. ನೆಹರೂ ಮೈದಾನದಲ್ಲಿ ದಿನವಿಡೀ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭರಾತ್ರಿ 8 ಗಂಟೆಗೆ ನಡೆಯಲಿದ್ದು ಈ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ವಹಿಸಲಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಕೆ.ಜಿ.ನಾಯ್ಕ ಹಣಜಿಬೈಲ್ ಈ ಉತ್ಸವದ ಅಧ್ಯಕ್ಷರೂ ಆಗಿದ್ದಾರೆ.
ಶಾಸಕ ಭೀಮಣ್ಣ ನಾಯ್ಕ ಮುಖ್ಯ ಅತಿಥಿಗಳೂ ಇತರ ಅತಿಥಿಗಳಾಗಿ ಡಾ. ಶ್ರೀಧರ ವೈದ್ಯ,ಡಾ. ಶಶಿಭೂಷಣ ಹೆಗಡೆ, ಹಾಗೂ ಶ್ರೀನಿವಾಸ್ ಹೆಬ್ಬಾರ ಪಾಲ್ಗೊಳ್ಳಲಿದ್ದಾರೆ.
ಈ ಸಭಾ ಕಾರ್ಯಕ್ರಮದ ಪೂರ್ವ ಮತ್ತು ನಂತರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.