ನನ್ನ ಮೊಲೆ ಉಣ್ಣಲು….

,…………………….

ಬೇಕಾಗಿಲ್ಲ ನಮಗೆ ನಿಮ್ಮ ದೇವರು

ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು

ನಮ್ಮ ಗರ್ಭದೊಳಗೆ ಜೀವಂತ ಶಿಶು

ಹುಟ್ಟಿದರೆ ಹುಟ್ಟಬೇಕು ದೇವರು

ಮಗುವಾಗಿ ನಮ್ಮ

ಮೊಲೆ ಉಣ್ಣಲು.

#ಸಂದ್ಯಾದೇವಿ ಅವರ ಪದ್ಯ:

ಟಿಪ್ಪಣಿ:

ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ ಕಟ್ಟಬೇಕಾಗಿತ್ತು. ಇದನ್ನು ವಿರೋಧಿಸಿ ಈಳವ ಮಹಿಳೆ ನಂಗೆಲಿ ತನ್ನ ಮೊಲೆ ಕತ್ತರಿಸಿ ತೆರಿಗೆಯಾಗಿ ಕೊಟ್ಟಳು. ಮಹಿಳೆಯರ ಸ್ವಾಭಿಮಾನಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅವಳ ನೆನಪಿಗಾಗಿ ಆ ಊರಿಗೆ ಮೊಲೆಚಿಪರಂಬು ಎಂಬ ಹೆಸರಿಡಲಾಗಿದೆ. ಶಬರಿಮಲೆ ಸುದ್ದಿಯಲ್ಲಿ ಇರುವ ಹಿನ್ನೆಲೆಯಲ್ಲಿ ಸಂಧ್ಯಾ ದೇವಿ ಅವರ ಈ ಹೊಸ ಕವಿತೆ ನಿಮ್ಮ ಓದಿಗಾಗಿ.

#ಗರ್ಭದೊಳಗೆ

ಅಲ್ಲಿಂದ ಸ್ವಲ್ಪ ಮುಂದೆ

ಮೊಲೆಗಳ ಭೂಮಿ ಇದೆ.

ಎಲ್ಲೆಲ್ಲೂ ಸೊಕ್ಕಿ ನಿಂತ ಪರ್ವತಗಳು ಬೆಟ್ಟ ಗುಡ್ಡಗಳು ಮಲೆಗಳು

ಅವುಗಳೆಡೆಯಿಂದ ಹುಟ್ಟುವ ನದಿಗಳು

ಅಲ್ಲೆಲ್ಲ ಹರಿವ ನೀರು ನೀರಲ್ಲ .

ಬ್ರಾಹ್ಮಣ ರಲ್ಲದ ಹೆಂಗಸರು ಮೊಲೆ ತೋರಿಸಿ

ಗಾತ್ರಕ್ಕೆ ತಕ್ಕ ತೆರಿಗೆ

ಕಟ್ಟಬೇಕಾಗಿದ್ದ ಕಾಲ.

ಈಳವ ಮಹಿಳೆ ನಂಗೆಲಿ

ಮೊಲೆಗಳ ತೋರಿಸಿದಳು ಅವರಿಗೆ

ತೆರಿಗೆ ಕೊಟ್ಟಳು

ಕತ್ತ ರಿಸಿ ಮೊಲೆಗಳ

ಮೂಲೆಗಳಿಂದ ಚಿಮ್ಮಿದ್ದು ರಕ್ತವಲ್ಲ.

ನಂಗೆಲಿಯ ಮಕ್ಕಳ ಮಕ್ಕಳು

ಮೊಮ್ಮಕ್ಕಳು ಮರಿಮಕ್ಕಳಿಗೆ ನಮಗೆ

ನಾಚಿಕೆಯಾಗಬೇಕು.

ಅಲ್ಲಿ ಪವಿತ್ರ ದೇವರ ನಾಡಿನಲ್ಲಿ

ಒಳಗೆ ಹೋಗದಂತೆ ಹೊರಗೆ

ಸಾವಿರಾರು ಮೊಲೆಗಳು

ಅಡ್ಡಡ್ಡ ಮಲಗಿದ್ದಾವೆ.

ದೇವರು ಅವುಗಳನ್ನು ನೋಡಬಾರದಂತೆ !

ದೇವರೇ…ಮೊಲೆಗಳನ್ನೇನು ಎಲ್ಲವನ್ನೂ ಎಲ್ಲೆಲ್ಲಿಯೂ ನೋಡುವವನು ನೀನು !

ನಂಗೆಲಿಯ ಸ್ವಾಭಿಮಾನಕ್ಕೆ ತಲೆಬಾಗಿ

ಯಾರು ಯಾರೊಬ್ಬ ಹೆಂಗಸರೂ

ಹೋಗಬಾರದು ನಾವು

ಕಳಿಸಬಾರದು ನಮ್ಮ ಮಕ್ಕಳನು

ಮುಟ್ಟಬಾರದು ಹತ್ತಬಾರದು ಮೆಟ್ಟಬಾರದು ಗುಡಿಯ

ಹದಿನೆಂಟು ಮೆಟ್ಟಿಲನು.

ಬೇಕಾಗಿಲ್ಲ ನಮಗೆ ನಿಮ್ಮ ದೇವರು

ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು

ನಮ್ಮ ಗರ್ಭದೊಳಗೆ ಜೀವಂತ ಶಿಶು

ಹುಟ್ಟಿದರೆ ಹುಟ್ಟಬೇಕು ದೇವರು

ಮಗುವಾಗಿ ನಮ್ಮ

ಮೊಲೆ ಉಣ್ಣಲು. (ಹಾದಿಮನಿ ವಾಲ್‌ ನಿಂದ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *