ಸಿದ್ದಾಪುರ: ಜೆ.ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನದ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಉತ್ತರ ಕನ್ನಡ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಲಕ್ಷ್ಮೀನರಸಯ್ಯ ಮಾತನಾಡಿ, ಪ್ರತಿಷ್ಠಾನದ ವತಿಯಿಂದ ಅನೇಕ ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈಡಿಗ ಹಾಗೂ 26 ಉಪಪಂಗಡಗಳನ್ನು ಒಗ್ಗೂಡಿಸುವುದು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಸಮಾಜದ ಬಡವರಿಗೆ ಧನ ಸಹಾಯ ಮಾಡಲಾಗುತ್ತಿದೆ. ಜೆಪಿ ನಾರಾಯಣ ಸ್ವಾಮಿಯವರ ಸಮಕಾಲೀನರಾದ ಆರ್.ಎಲ್.ಜಾಲಪ್ಪ ಅಕಾಡೆಮಿ ಕೂಡ ಶಿಕ್ಷಣ ಸಂಸ್ಥೆಗಳ ಮೂಲಕ ಇಡೀ ರಾಜಾದ್ಯಂತ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. ನಿಮ್ಮಗಳ ಗುರಿ ಹಾಗೂ ಕನಸು ದೊಡ್ಡದಾಗಿರಬೇಕು ಎಂದರು.
ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾನದ ಜಿಲ್ಲಾ ಸಂಚಾಲಕ ಡಾ. ನಾಗೇಶ ನಾಯ್ಕ ಕಾಗಾಲ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜೆಪಿಎನ್ ಪ್ರತಿಷ್ಠಾನದ ಕಾರ್ಯದರ್ಶಿ ಪೂಣೇಶ ಎಂ.ಆರ್, ಕೋಶಾಧ್ಯಕ್ಷೆ ಕುಸುಮಾ ಅಜಯ್, ಟ್ರಸ್ಟಿ ಮಂಜಪ್ಪ ಜಿ, ಬೇಡ್ಕಣಿ ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ, ರೈತ ಸೇನೆ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ, ನಾಮಧಾರಿ ಈಡಿಗ ಬಿಲ್ಲವ ನೌಕರರ ಸಂಘದ ಸಿದ್ದಾಪುರ ತಾಲೂಕಾ ಅಧ್ಯಕ್ಷ ರವಿ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಬಿಜೆಪಿ ಮುಖಂಡ ದಿವಾಕರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಲಲಿತಾ ನಾಯ್ಕ, ಪ್ರತಿಷ್ಠಾನದ ಶಿರಸಿ ತಾಲೂಕಾ ಸಂಚಾಲಕ ಎಸ್.ಬಿ.ನಾಯ್ಕ, ಕಾರವಾರ ತಾಲೂಕಾ ಸಂಚಾಲಕ ಸುನೀಲ ನಾಯ್ಕ ಸೋನಿ ಉಪಸ್ಥಿತರಿದ್ದರು. ಶಿಕ್ಷಕ ಗೋಪಾಲ ಭಾಶಿ ನಿರೂಪಿಸಿದರು. ಜೆಪಿಎನ್ ಪ್ರತಿಷ್ಠಾನದ ಸಿದ್ದಾಪುರ ತಾಲೂಕಾ ಸಂಚಾಲಕ ಸುಭಾಷಚಂದ್ರ ನಾಯ್ಕ ಸ್ವಾಗತಿಸಿದರು.