


ತಾಳಗುಪ್ಪ-ಶಿರಸಿ- ಹುಬ್ಬಳ್ಳಿ ನಡುವಿನ ಸುಮಾರು 158 ಕಿಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೇಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು ಅಂತಿಮ ಲೋಕೇಶನ್ ಸರ್ವೇ ನಡೆಸಿ ಸಂಪೂರ್ಣ ಯೋಜನಾ ವರದಿ ನೀಡುವದರ ಕುರಿತು 3.95 ಕೋಟಿ ರೂ.ಮಂಜೂರಾತಿ ಮಾಡಿರುವದಕ್ಕೆ ಕೇಂದ್ರ ಸರಕಾರ ಹಾಗೂ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಅಭಿನಂದಿಸಿದ್ದಾರೆ.
ತಾಳಗುಪ್ಪ- ಸಿದ್ದಾಪುರ-ಶಿರಸಿ-ಮುಂಡಗೋಡ- ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕೆನ್ನುವದು ದಶಕಗಳ ಬೇಡಿಕೆಯಾಗಿತ್ತು. ಈ ಹಿಂದೆ ನೈಋತ್ಯ ರೇಲ್ವೆ ಈ ರೈಲು ಮಾರ್ಗದ ಕುರಿತು ವಿಸ್ತ್ರತ ಯೋಜನಾವರದಿ ಸಿದ್ಧಪಡಿಸಿದ್ದು ಸರ್ವೇ ಕಾರ್ಯಪೂರ್ಣಗೊಂಡಿತ್ತು. ಇದರ ಬೆನ್ನಲ್ಲೇ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಫೆ.27ರಂದು ಈ ಮಾರ್ಗದ ಅಂತಿಮ ಲೋಕೇಶನ್ ಸರ್ವೇ ನಡೆಸಲು ತುರ್ತಾಗಿ ಮಂಜೂರಾತಿ ನೀಡಲು ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು. ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪತ್ರಕ್ಕೆ ಸ್ಪಂದಿಸಿದ ಸಚಿವರು ಈ ಮಂಜೂರಾತಿ ನೀಡಿದ್ದಾರೆ. ಈ ರೈಲು ಮಾರ್ಗದ ಅತ್ಯಂತ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿರುವ ವಿಶ್ವೇಶ್ವರ ಹೆಗಡೆಯವರನ್ನು ಕೂಡ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಅಭಿನಂದಿಸುತ್ತೇನೆ ಎಂದು ತಿಮ್ಮಪ್ಪ ಎಂ.ಕೆ.ತಿಳಿಸಿದ್ದಾರೆ.
