


ಈ ದೇಶದಲ್ಲಿ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆ ಎಂದು ಬೇಸರಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮುಂದಿನ ದಿನಗಳಲ್ಲಾದರೂ ದೇವರಾಜ್ ಅರಸು ಮಾದರಿ ಜಾರಿಆಗಲಿದೆ ಎಂದು ಆಶಿಸಿದ್ದಾರೆ.
ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪ್ರತಿಕ್ರೀಯಿಸಿರುವ ಅವರು ಭಾರತ ಈಗ ಧಾರ್ಮಿಕ ಪ್ರಭುತ್ವದ ಕಡೆ ವಾಲುತ್ತಿರುವ ದುಸ್ಥಿತಿ ಇದೆ. ಯಾವುದೇ ಪಕ್ಷ ಸಾಮಾಜಿಕ ನ್ಯಾಯ ಜಾರಿ ಮಾಡುವುದು ಸದ್ಯಕ್ಕೆ ಸವಾಲಿನ ಕೆಲಸ.ಮುಂದಿನ ದಿನಗಳಲ್ಲಿ ಅದಕ್ಕೆ ಆದ್ಯತೆ ಸಿಗಲಿದೆ ಎಂದರು.
ಸಂವಿಧಾನ ವಿರೋಧಿ ಶಕ್ತಿಗಳಿಗೆ ಯಾರಿಗೂ ಗೌರವಿಸುವುದಿಲ್ಲ ಬಿ.ಜೆ.ಪಿ. ಕೂಡಾ ಸಂವಿಧಾನ ಬದಲಿಸುವ,ಕೋಮು ಸೌಹಾರ್ದ ಕದಡುವ ಶಕ್ತಿಗಳಿಗೆ ಸೂಕ್ತ ದಾರಿ ತೋರಿಸಿರುವುದು ಉತ್ತಮ ಬೆಳವಣಿಗೆ ಎಂದರು.
