… ಇಂದು ಸರ್ಕಾರಿ ಶಾಲೆ ಬಗ್ಗೆ ತಾತ್ಸಾರ ಮನೋಭಾವನೆ ತೋರುತ್ತಾ ಖಾಸಗಿ ಶಾಲೆ ಕಡೆ ಮುಖ ಮಾಡುವುದು ಸರ್ವೇ ಸಾಮಾನ್ಯ. ಆದರೆ ಖಾಸಗಿ ಶಾಲೆಗೂ ಮಿಗಿಲಾಗಿ ಇಂದು ಸರ್ಕಾರಿ ಶಾಲೆ ಹೆಚ್ಚು ಹೆಚ್ಚು ಆಕರ್ಷಣೆಯ ಕೇಂದ್ರ ಆಗುತ್ತಿದೆ.ಇದಕ್ಕೆ ಉದಾಹರಣೆ ಎಂಬಂತೆ ಸಿದ್ಧಾಪುರ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಳಲವಳ್ಳಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ.ಈ ಶಾಲೆ ಮೊದಲು ಅಷ್ಟು ಗಮನ ಸೆಳೆದಿರಲಿಲ್ಲ.ಕ್ರಮೇಣ ಪಾಲಕರು, ಶಿಕ್ಷಕರ ಆಸಕ್ತಿ ಹೊಸತನಕ್ಕೆ ದಾರಿ ಆಗುತ್ತ ಸಾಗಿತು.ಮುಖ್ಯ ಶಿಕ್ಷಕರಾಗಿ ಕಾರ್ಯಭಾರ ವಹಿಸಿಕೊಂಡ ಎಂ.ಡಿ.ನಾಯ್ಕ ರ ಕ್ರಿಯಾಶೀಲತೆ ಇಡೀ ಶಾಲಾ ವಾತಾವರಣ ಬದಲಿಸಿತು.
ಸುಮಾರು ದಾನಿಗಳನ್ನು ಹುಡುಕಿ ಚಿತ್ರಣ ಬದಲಾಯಿಸಿದ್ದು ಹೆಮ್ಮೆಯ ಸಂಗತಿ.ಇವರಿಗೆ ಶಿಕ್ಷಕಿ ಶ್ಯಾಮಲಾ.ಪಟಗಾರ, ಎಸ್.ಡಿ.ಎಂ.ಸಿ.,ಎಲ್ಲಾ ಪದಾಧಿಕಾರಿಗಳ ಸಂಪೂರ್ಣ ಸಹಕಾರ ಹಾಗೂ ಊರಿನ ಗಣ್ಯರ ಗ್ರಾಮಪಂಚಾಯತ ಸದಸ್ಯರ ತೊಡಗಿಸಿಕೊಳ್ಳುವಿಕೆ ಮಾದರಿ ಆಯಿತು.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೂತನ ರೀತಿಯಲ್ಲಿ ಐದನೇ ತರಗತಿಯ ಮಕ್ಕಳಿಗೆ ಬೀಳ್ಕೊಟ್ಟಿದ್ದು ವಿನೂತನ ಪ್ರಯೋಗ. ಬಹುಶಃ ಜಿಲ್ಲೆಯ ಸರ್ಕಾರಿ ಶಾಲೆಯಲ್ಲೇ ಎರಡನೆಯದು.ಈ ಮೊದಲು ಶಿರಸಿ ತಾಲೂಕಿನ ದಾನಂದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ಪ್ರಯೋಗ ಗೀತಾಂಜಲಿ ಉದಯ ಭಟ್ ಇವರಿಂದ ನಡೆದು ಮಾದರಿ ಆಗಿತ್ತು.ಮಕ್ಕಳಿಗೆ ವಿಶೇಷವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಮುಖ್ಯ ಶಿಕ್ಷಕ ಎಂ.ಡಿ.ನಾಯ್ಕ ಹೊಸ ರೀತಿಯಲ್ಲಿ ಉಡುಪು, ಟೋಪಿ ಹಾಗೂ ಪ್ರಶಸ್ತಿ ಸಿದ್ದಪಡಿಸಿ, ಪಾಲಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ.ಉಜ್ವಲ ಭವಿಷ್ಯವನ್ನು ರೂಪಿಸುವ ಜ್ಯೋತಿ ಸಾಂಕೇತಿಕವಾಗಿ ನೀಡಿ ಹರಸಿದರು.
ಇಂತಹ ಕಾರ್ಯಕ್ರಮ ಸರ್ಕಾರಿ ಶಾಲೆಯ ಬಗ್ಗೆ ಗೌರವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಉಳಿದವರಿಗೂ ಮಾದರಿ ಆಗಲಿ ಎಂದು ಆಶಿಸೋಣ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಪಧಾದಿಕಾರಿಗಳು ಹಾಜರಿದ್ದರು. ಉತ್ತಮ ಗುಣಮಟ್ಟದ ಭೋಜನ ನೀಡುವ ಮೂಲಕ ಮಕ್ಕಳಿಗೆ ಸಂತಸದ ಬೀಳ್ಕೊಡುಗೆ ದೊರೆಯಿತು.ಭೋಜನದ ವ್ಯವಸ್ಥೆ ಶಿಕ್ಷಕಿ ಶ್ಯಾಮಲಾ.ಪಟಗಾರ ವಹಿಸಿಕೊಂಡಿದ್ದರು.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಇಲಾಖೆಯ ಅಧಿಕಾರಿಗಳು,ಇತರೆ ಗಣ್ಯರನ್ನ ಆಹ್ವಾ ನಿಸಲು ಸಾಧ್ಯ ಆಗಿಲ್ಲ ಎನ್ನುತ್ತಾರೆ ಮುಖ್ಯ ಶಿಕ್ಷಕ ಮಕ್ಕಳು ತಮ್ಮ ತಂದೆ ತಾಯಿಗಳ ಪಾದ ಪೂಜೆ ಮಾಡುವ ಮೂಲಕ ಹೆಚ್ಚಿನ ಮೆರಗು ನೀಡುವ ಮೂಲಕ ಮಾದರಿ ಆಯಿತು. ಇಂತಹ ಶಿಕ್ಷಕರು ಉಳಿದವರಿಗೂ ಮಾದರಿ ಎನ್ನುತ್ತಾರೆ ಪಾಲಕ ವರ್ಗ.ಮಕ್ಕಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.