

ಕರಾವಳಿ ಕರ್ನಾಟಕದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಬದ್ಧವಾಗಿಲ್ಲವೇ? ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಈ ಪ್ರಶ್ನೆ ಕಾಡತೊಡಗುತ್ತದೆ.

ಪದ್ಮರಾಜ್
ಮಂಗಳೂರು: ಕರಾವಳಿ ಕರ್ನಾಟಕದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಬದ್ಧವಾಗಿಲ್ಲವೇ? ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಈ ಪ್ರಶ್ನೆ ಕಾಡತೊಡಗುತ್ತದೆ.
ಇದಕ್ಕೆ ಪ್ರಸ್ತುತ ಬೆಳವಣಿಗೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಕಾಂಗ್ರೆಸ್ ಯಾವುದೇ ಪ್ರಯತ್ನ ಮಾಡದಿರುವುದು ಈ ಚುನಾವಣೆಯಲ್ಲಿ ಕಂಡು ಬಂದಿದೆ. ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರವಾಗಿ ಯಾವುದೇ ಸ್ಟಾರ್ ಪ್ರಚಾರಕರು ಪ್ರಚಾರ ಮಾಡಲಿಲ್ಲ ಎಂಬುದು ಗಮನಾರ್ಹ ವಿಚಾರವಾಗಿದೆ.
ಆರಂಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಡಿಕೆ ಶಿವಕುಮಾರ್ ಕರಾವಣಿ ಕರ್ನಾಟಕದಲ್ಲಿ ಪ್ರಚಾರ ಮಾಡಲು ನಿರ್ಧರಿಸಿದ್ದರು, ಆದರೆ, ಇತರೆ ಕೆಲಸಗಳಿಂದಾಗಿ ಈ ಭೇಟಿಯನ್ನು ರದ್ದು ಮಾಡಿದ್ದರು ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಸ್ಟಾರ್ ಪ್ರಚಾರಕರನ್ನು ಆಹ್ವಾನಿಸಿದ್ದೇ ಆಗಿದ್ದರೆ, ಎರಡು ದಿನಗಳು ಚುನಾವಣಾ ತಯಾರಿ ವ್ಯರ್ಥವಾಗುತ್ತಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಎಂಎಲ್ಸಿ ಕೆ ಹರೀಶ್ ಕುಮಾರ್ ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಆರ್. ಪೂಜಾರಿ ಅವರು, ಸ್ಟಾರ್ ಪ್ರಚಾರಕರು ಪ್ರಚಾರ ನಡೆಸಿದಿರುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಜನರು ಕಾಂಗ್ರೆಸ್ ಸಿದ್ಧಾಂತನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಗಳಿತ್ತು. ಇಲ್ಲಿನ ಜನರ ಮನಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕ್ಷೇತ್ರದ ಬಹುತೇಕ ಜನರು ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರು ಪದ್ಮರಾಜ್ ವಿರುದ್ಧ ಪ್ರಚಾರ ಮಾಡಿದ್ದರೆ, ಗೆಲುವು ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿ, ಜನರ ಮನಸ್ಥಿತಿ ಬದಲಾಗದ ಹೊರತು ಯಾವುದೇ ನಾಯಕರ ಪ್ರಭಾವ ಕ್ಷೇತ್ರದ ಮೇಲೆ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿಯ ಸಾಂಪ್ರದಾಯಿಕ ಮತದಾರರನ್ನು ಒಲಿಸಿಕೊಳ್ಳದ ಹೊರತು ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಎಂದು ಚೆನ್ನಾಗಿ ಅರಿತ ಪದ್ಮರಾಜ್ ಅವರು, ಹಿಂದುತ್ವದ ವಿರುದ್ಧ ಮಾತನಾಡದಿರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆರಂಭದಲ್ಲಿ, ಸಂದರ್ಶನವೊಂದರಲ್ಲಿ, ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆಯಲ್ಲ ಎಂದು ಹೇಳಿದ್ದರು, ಆದರೆ, ಇದನ್ನು ಬಾಯಿತಪ್ಪಿ ಹೇಳಿದ್ದರು. ಬಿಜೆಪಿಯ ಭದ್ರಕೋಟೆಯಲ್ಲ ಎಂದು ಹೇಳುವ ಬದಲು ಹಿಂದುತ್ವದ ಭದ್ರಕೋಟೆಯಲ್ಲ ಎಂದು ಬಿಟ್ಟಿದ್ದರು ಎಂದು ಹೇಳಿದ್ದಾರೆ. (ಕಪ್ರ.ಕಾಮ್)
