ವ್ಯಕ್ತಿ- ಈಶ್ವರಪ್ಪ, ಅಂತ್ಯದಲ್ಲಿ ಜ್ಞಾನೋದಯ!

ಈ ವರ್ಷ ಹೆಚ್ಚು ಚರ್ಚೆ-ವಿವಾದಕ್ಕೆ ಒಳಗಾದ ರಾಜ್ಯದ ನಾಯಕರೆಂದರೆ… ಅದು ಈಶ್ವರಪ್ಪ, ಕುಮಾರಸ್ವಾಮಿ, ಸಿ.ಟಿ.ರವಿ ಇತ್ಯಾದಿಗಳು.

ಕುಮಾರಸ್ವಾಮಿ ಪರಂಪರೆ ಇರುವ ನಾಯಕ, ಕುಮಾರಸ್ವಾಮಿ ಯಾರೊಂದಿಗೂ ಸೇರಬಲ್ಲರು, ಯಾರೊಂದಿಗೂ ಜಗಳಕ್ಕೆ ನಿಲ್ಲಬಲ್ಲರು! ಕರ್ನಾಟಕದ ಅತ್ತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿರುವ ಕುಮಾರಸ್ವಾಮಿ ರಾಜಕೀಯ ಅವಸಾನ ಹೊಂದಿದರು ಎಂದು ಅನೇಕರು ಭಾವಿಸಿದ್ದರು. ಆದರೆ ಆಗಿದ್ದು ಬೇರೆ.

ಬಿ.ಜೆ.ಪಿ.ಗೆ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಿರೀಟ ಕಳೆದುಕೊಂಡ ಚಕ್ರವರ್ತಿಯಂತಾಗಿರುವ ಮತಾಂಧ ಮೋದಿ ಕುಮಾರಸ್ವಾಮಿಯಂಥವರ ಕಾಲು ಹಿಡಿಯುವ ಮಟ್ಟಕ್ಕೆ ಇಳಿಯಬೇಕಾದ ಅನಿವಾರ್ಯತೆಯನ್ನು ಇಂಡಿಯಾದ ಜನತೆ ಕರುಣಿಸಿದ್ದಾರೆ. ಇದೊಂದೇ ಕಾರಣಕ್ಕೆ ಭಸ್ಮಾಸುರ ಸಂಘಿಗಳ ಸಂಘ ಮಾಡಿದ ಕುಮಾರಸ್ವಾಮಿಯಂಥವರು ಬಚಾವಾಗಿದ್ದಾರೆ. ಏನೇ ಇರಲಿ ಒಕ್ಕಲಿಗರೆಂದರೆ ಒಂದು ಜಾತಿಯಲ್ಲ ಅದು ಕೃಷಿಕರ ಗುಂಪು ಅಂಥ ಜನಸಾಮಾನ್ಯರ ಗುಂಪಿನ ನಾಯಕ ಕುಮಾರಸ್ವಾಮಿ ಬಂಗಾರಪ್ಪನವರಂತೆ ದುರಂತ ನಾಯಕರಾಗುವ ಅಪಾಯದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಅವರ ಅವಕಾಶ ಅವರನ್ನು ರಾಷ್ಟ್ರೀಯ ನಾಯಕರನ್ನಾಗಿಸಬಹುದು ಆದರೆ ಅನಿವಾರ್ಯತೆಗೆ ಜಾತ್ಯಾತೀತತೆ ಹಾಗೆಂದರೆಏನು? ಯಾರು ಜಾತ್ಯಾತೀತರು? ಎಂದೆಲ್ಲಾ ಕೇಳಿದ್ದ ಕುಮಾರಸ್ವಾಮಿ ಮುಂದೆ ಮೋದಿ ಯಾರು? ಅವರ ಸಂಘ ದೇಶಪ್ರೇಮಿಯೆ? ಮೋದಿ ಇಂಥ ನಾಟಕಕಾರ ಎಂದು ನನಗೆ ಗೊತ್ತಿರಲಿಲ್ಲ ಎನ್ನುವ ದಿನಗಳು ದೂರವಿಲ್ಲ.

ಈಶ್ವರಪ್ಪ…. ಕರಾವಳಿಯ ಎರಡು ಜನ ಬಿ.ಜೆ.ಪಿ. ಅಭ್ಯರ್ಥಿಗಳು ಆ ಪಕ್ಷದ ಬಿ.ಫಾರಂ ಗಾಗಿ ನೂರಾರು ಕೋಟಿ ಹಣ (ಲಂಚ) ನೀಡಿರುವ ಗುಟ್ಟು ಈಗ ಬಹಿರಂಗವಾಗಿದೆ. ರೈತ ನಾಯಕ ಯಡಿಯೂರಪ್ಪ ಬಿ.ಜೆ.ಪಿ. ಜೊತೆ ವಿರಸ ಕಟ್ಟಿಕೊಂಡು ಬಿ.ಜೆ.ಪಿ.ಯನ್ನು ಮುಳುಗಿಸಿ ಮತ್ತೆ ಬಿ.ಜೆ.ಪಿ ಯನ್ನು ದಡ ಮುಟ್ಟಿಸಿದ್ದಾರೆ. ಸುಳ್ಳು, ಕಪಟತನ, ಮುಖವಾಡ, ನಟನೆಗೆ ಹೆಸರಾಗಿರುವ ಮೋದಿ ಪರಿವಾರ ಮೊದಲು ಯಡಿಯೂರಪ್ಪನವರನ್ನು ನೀನ್ಯಾರು? ಎಂದು ಕೇಳಿ ಹೊಡೆತ ತಿಂದಿದೆ. ಇದೇ ಯಡಿಯೂರಪ್ಪನವರ ವಿರುದ್ಧ ಸಿ.ಟಿ.ರವಿ, ಈಶ್ವರಪ್ಪನಂತಹ ಮತಿವಿಕಲರನ್ನು ಎತ್ತಿಕಟ್ಟಿದ್ದ ಸಂಘದ ನಾಯಕರು ಯಡಿಯೂರಪ್ಪನ ಜಾತಿ ಪರಿವಾರದ ವಿರುದ್ಧ ಸಮರ ಸಾರಿ ಶರಣಾಗಿದ್ದಾರೆ. ಈಶ್ವರಪ್ಪ, ಸಿ.ಟಿ.ರವಿ, ಪ್ರತಾಪಸಿಂಹರಂಥ ಮೂರನೇ ದರ್ಜೆಯ ಬಾಯಿಬಡುಕರನ್ನು ಎತ್ತಿ ಕಟ್ಟಿದ್ದ ಮಹಾಬ್ರಾಹ್ಮಣ ನಯವಂಚಕ ಸಂಘಿ ಬಿ.ಎಲ್.‌ ಸಂತೋಷ್‌ ಈಗ ಬಿಲ ಸೇರುವಂತಾಗಲು ಮೋದಿ ಸಂಘ ಕಟ್ಟಿದ ಮತಾಂಧತೆಯ ಕುಟಿಲತೆ ಕಾರಣ. ಈ ಪರಿವಾರದ ಒಳಜಗಳದಲ್ಲಿ ಬಲಿಪಶುವಾದವನು ವಿವೇಕವಿಲ್ಲದ ಸಂಘಿ ಈಶ್ವರಪ್ಪ ಬಿ.ಜೆ.ಪಿ. ಮತ್ತು ಆರೆಸ್ಸೆಸ್‌ ಪರಿವಾರ ಈಶ್ವರಪ್ಪನಂಥ ಕಳಪೆ ಹಿಂದುಳಿದವರನ್ನು ಕುಣಿಸಿ ಕೋಡಂಗಿಗಳನ್ನಾಗಿಸಿ ಮೂಲೆಗುಂಪು ಮಾಡುತ್ತಿರುವುದು ಇದೇ ಮೊದಲೇನಲ್ಲ. ಈಶ್ವರಪ್ಪ ಜೀವನವಿಡೀ ಸಂಘ, ರಾಷ್ಟ್ರೀಯತೆ, ಹಿಂದುತ್ವ ಎಂದು (ಬೊಗಳಿ) ಸಂಘದ ಪರಿಚಾರಿಕೆ ಮಾಡಿ ಈಗ ಕುರುಬರು, ಹಿಂದುಳಿದವರು

ಎನ್ನುತ್ತಿರುವುದು ಬಿ.ಜೆ.ಪಿ.ಯ ಇಂತಹ ಅವಿವೇಕಿ ಒ.ಬಿ.ಸಿ . ಗಳಿಗೆ ಪಾಠವಾಗಬೇಕು.

ಯಾಕೆಂದರೆ ಬ್ರಾಹ್ಮಣ ಮೋದಿಯಂತಹ ನಯವಂಚಕ ಆಶಾಢಭೂತಿಗಳು ಸಂಘ, ಬಿ.ಜೆ.ಪಿ.ಯಲ್ಲಿ ಹಿಂದುಳಿದವರ ಮುಖವಾಡ ಹಾಕಿ ಹಿಂದುಳಿದವರನ್ನು ಹಾಳು ಮಾಡುತ್ತವೆ. ಬಿ.ಬಿ. ಶಿವಪ್ಪ, ಈಶ್ವರಪ್ಪ ನಂತರ ಶ್ರೀನಿವಾಸ ಪೂಜಾರಿ ಹೀಗೆ ಮೂರ್ಖ ಅನಕ್ಷರಸ್ಥ ಫೇಕು ಅನುಯಾಯಿಗಳು ತಮ್ಮ ಸ್ವಾರ್ಥಕ್ಕೆ ಹಿಂದುಳಿದವರ ಹಿತ ಬಲಿಕೊಡುತ್ತಿರುತ್ತಾರೆ. ಈಶ್ವರಪ್ಪ ಪ್ರಹಸನ ಸಂಘಿ, ಬಿ.ಜೆ.ಪಿ. ನಯವಂಚನೆಯ ಬೃಹತ್‌ ಕಾದಂಬರಿಯ ಒಂದು ಪುಟವಷ್ಟೇ. ಮುಂದಿನ ಸರದಿಯಲ್ಲಿ ಅಣ್ಣಾಮಲೈ, ಕುಮಾರಸ್ವಾಮಿ, ಪ್ರತಾಪ ಸಿಂಹ, ಸಿ.ಟಿ. ರವಿ, ಹಾಲಪ್ಪ, ಕಾರಜೋಳ, ಅವನ್ಯಾವನೋ ಚಲವಾದಿ ನಾರಾಯಣ ಸ್ವಾಮಿ ಇಂಥವರೆಲ್ಲಾ ಸೇರಲಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *