ಉತ್ತರ ಕನ್ನಡಕ್ಕೆ ಶಾಪವಾದ ಆಳ್ವ ಪರಿವಾರ!

ವಿಶ್ವಶತ್ರು ಸಂಘ ಪರಿವಾರ ಎನ್ನುವ ಮಾತಿದೆ. ಭಾರತೀಯ ಬಹುಸಂಖ್ಯಾತ ಮೂಲನಿವಾಸಿಗಳ ವಿರುದ್ಧ ಕಾರ್ಯಾಚರಿಸಿ ಮತಾಂಧತೆ, ಅಸಮಾನತೆ, ಅಶಾಂತಿ ವಿಸ್ತರಿಸುತ್ತಾ ಮೇಲ್‌ ವರ್ಗ, ಮೇಲ್ಜಾತಿ ರಕ್ಷಿಸುತ್ತಿರುವ ರಾಷ್ಟ್ರೀಯ (ಸುಳ್ಳು) ಸ್ವಯಂ ಸೇವಕ ಸಂಘ ಭಾರತದ ಮಟ್ಟಿಗಂತೂ ಜನಸಾಮಾನ್ಯರು, ಬಡವರ ಶತ್ರು.

ಈ ಸ್ಟೋರಿಯ ವಿಷಯ ವಸ್ತು ಈ ಫೇಕು ದುಷ್ಟ ಪರಿವಾರವಲ್ಲ, ಬದಲಾಗಿ ಆಳ್ವ ಪರಿವಾರ. ಉತ್ತರ ಕನ್ನಡ ಜಿಲ್ಲೆಯ ಕೆನರಾ ಕ್ಷೇತ್ರದ ಸಂಸದರಾಗಿದ್ದ ಜೋಕಿಂ ಆಳ್ವ ಆಗಿನ ದಷ್ಕಿಣ ಕನ್ನಡ ಸೇರಿದ ಕೆನರಾ ಕ್ಷೇತ್ರದ ಸಂಸದರಾಗಿದ್ದರು. ನಂತರ ಬಿ.ಪಿ. ಕದಂ, ದಿನಕರ ದೇಸಾಯಿ, ಬಿ.ವಿ.ನಾಯಕ್‌, ದೇವರಾಯ್‌ ನಾಯ್ಕ ನಂತರ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್‌ ಆಳ್ವ ೨೫ ವರ್ಷಗಳ ಕೆಳಗೆ ಉತ್ತರ ಕನ್ನಡ ಸಂಸದರಾಗಿದ್ದರು. ಮಾರ್ಗರೇಟ್‌ ಆಳ್ವ ಒಮ್ಮೆ ಉತ್ತರ ಕನ್ನಡ ಸಂಸದರಾಗಿ ಉತ್ತಮ ಕೆಲಸಮಾಡಿದ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ. ಇವರ ಜೊತೆ ಅವರ ಸೆರಗು ಹಿಡಿದ ಬಂದ ಆಳ್ವ ಪುತ್ರ ನಿವೇದಿತ್‌ ಆಳ್ವ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿ ಉತ್ತರ ಕನ್ನಡಕ್ಕೆ ನ್ಯಾಯ ಒದಗಿಸಿದ್ದು ಹಳೆ ಕತೆ ಆದರೆ……

ಮಾರ್ಗರೇಟ್‌ ಆಳ್ವ ಉತ್ತರ ಕನ್ನಡ ಸಂಸದರಾಗುತ್ತಲೇ ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರ ಜೊತೆ ಜಿದ್ದಿಗೆ ಬಿದ್ದು ಕಾಂಗ್ರೆಸ್‌ ಹೈಕಮಾಂಡ್‌ ಬಳಸಿಕೊಂಡು ತನ್ನ ಪಟಾಲಂ ಗೆ ಟಿಕೇಟ್‌ ಕೊಡಿಸಲು ಪ್ರಾರಂಭಿಸಿದ್ದೇ ಮೊದಲು ಜನತಾದಳ, ಬಿ.ಜೆ.ಪಿ. ಪಕ್ಷಗಳ ರೊಟ್ಟಿ ಜಾರಿ ತುಪ್ಪಕ್ಕೆ ಬೀಳತೊಡಗಿತು. ಮಹಾಬ್ರಾಹ್ಮಣರಾದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಬಿ.ಜೆ.ಪಿ.ಯಿಂದ ಗೆಲ್ಲತೊಡಗುತ್ತಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಜನ ಕಾಂಗ್ರೆಸ್‌ ಶಾಸಕರಿರುತಿದ್ದ ಪರಿಸ್ಥಿತಿ ಒಂದಕ್ಕಿಳಿಯಿತು.

ಮೊದಮೊದಲು ಮಾರ್ಗರೇಟ್‌ ಆಳ್ವ ಹಿಂದುಳಿದವರ ಚಾಂಪಿಯನ್‌ ಬಂಗಾರಪ್ಪ ವಿರುದ್ಧ ಪಿತೂರಿ ಮಾಡತೊಡಗಿದರು. ನಂತರ ದೇಶಪಾಂಡೆ ಜೊತೆ ಕದನಕ್ಕಿಳಿದರು ಇವುಗಳ ಪರಿಣಾಮ ಕಾಂಗ್ರೆಸ್‌ ಸೊರಗಿದ್ದು ಬಿ.ಜೆ.ಪಿ. ಗೆದ್ದು ಬೀಗಿದ್ದು!

ಕಾಂಗ್ರೆಸ್‌ ಪರವಾಗಿರುವ ಮಾರ್ಗರೇಟ್‌ ಆಳ್ವ ರಾಜಕೀಯ ಆಟ ಆಡುವಲ್ಲಿ ಸೋತರು, ದೇಶಪಾಂಡೆ ಜೊತೆ ಕಾಂಗ್ರೆಸ್‌ ಅವನತಿಗೂ ಕಾರಣರಾದರು.

೨೦೨೪ ರ ಚುನಾವಣೆ ಮೊದಲು ೧೦ ವರ್ಷಗಳ ಹಿಂದೆ ಸ್ಥಳೀಯ ಬಹುಸಂಖ್ಯಾತ ದೀವರ ವಿರುದ್ಧ ದೀಪಕ್ ಹೊನ್ನಾವರ ಎನ್ನುವ ತನ್ನ ಪರಿಚಾರಕ ಗ್ಯಾಂಬ್ಲರ್‌ ನಿಗೆ ಕಾಂಗ್ರೆಸ್‌ ಟಿಕೇಟ್‌ ಕೊಟ್ಟು ನಾಮಧಾರಿಗಳು ಮತಾಂಧ ಬಿ.ಜೆ.ಪಿ ಕಡೆ ವಾಲುವಂತೆ ಮಾಡಿದ ಆಳ್ವ ಪರಿವಾರ ಯಲ್ಲಾಪುರ, ಕಾರವಾರ, ಶಿರಸಿ, ಕುಮಟಾಗಳಲ್ಲಿ ಸಂಘಿಗಳು ಜನಪ್ರತಿನಿಧಿಯಾಗಲು ಅವಕಾಶ ಮಾಡಿಕೊಟ್ಟರು.

ಆಳ್ವ ಪರಿವಾರ, ದೇಶಪಾಂಡೆ ಪಟಾಲಂ ಕಾಂಗ್ರೆಸ್‌ ಸೋಲಿಸುತ್ತಾ ಪರೋಕ್ಷವಾಗಿ ಬಿ.ಜೆ.ಪಿ. ಬೆಂಬಲಿಸಿ ಬಹುಸಂಖ್ಯಾತರನ್ನು ತುಳಿದ ಪರಿಣಾಮವೇ ಈಗ ಕಾಂಗ್ರೆಸ್‌ ಸೋಲುತ್ತಿರುವ ಹಿಂದಿನ ರಹಸ್ಯ, ವಾಸ್ತವ ಸತ್ಯ.

ಶಿರಸಿ ಕ್ಷೇತ್ರದಲ್ಲಿ ಬಹುಸಂಖ್ಯಾತ ನಾಮದಾರಿಗಳ ವಿರುದ್ಧ ಅಡ್ಡ ಕಸುಬಿಗಳನ್ನು ಎತ್ತಿ ಕಟ್ಟಿದ ಆಳ್ವ ಪರಿವಾರ ನಿವೇದಿತ್‌ ಆಳ್ವರನ್ನು ಶಿರಸಿ ಕ್ಷೇತ್ರದ ವಿಧಾನಸಭೆ ಅಭ್ಯರ್ಥಿ ಮಾಡಲು ಪ್ರಯತ್ನಿಸಿತು. ಈ ಪ್ರಯತ್ನಕ್ಕೆ ಅಡ್ಡ ಗಾಲು ಹಾಕಿದ ಭೀಮಣ್ಣ ನಾಯ್ಕ ಉಪಾಯದಿಂದ ಕುಮಟಾ ಕಡೆ ಎತ್ತಿಎಸೆದು ತಾವೇನೋ ಬಚಾವಾದರು ಆದರೆ, ಹೋದೆಯಾ….. ಅಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ನಿವೇದಿತ್‌ ಆಳ್ವ ಹೈಕಮಾಂಡ್‌ ಪ್ರಭಾವದಿಂದ ಕುಮಟಾ ಕ್ಷೇತ್ರದ ಕೈ ಟಿಕೆಟ್‌ ತಂದು ಬಿಟ್ಟರು ನಿರೀಕ್ಷೆಯಂತೆ ಠೇವಣಿ ಕಳೆದುಕೊಂಡರು!

ಹೀಗೆ ಕಾಂಗ್ರೆಸ್‌ ಹೈಕಮಾಂಡ್‌ ಬಳಸಿಕೊಂಡು ಆಳ್ವ ಪರಿವಾರ ಮಾಡಿದ ಕೆಲಸದಿಂದ ಉತ್ತರ ಕನ್ನಡ ಕಾಂಗ್ರೆಸ್‌ ವಿರೋಧಿಯಾಗುತ್ತಾ ನಡೆಯಿತು.

ಶಿರಸಿ, ಭಟ್ಕಳ, ಯಲ್ಲಾಪುರ, ಕಾರವಾರ, ಕುಮಟಾ ಕ್ಷೇತ್ರಗಳ ಇತಿಹಾಸದಲ್ಲಿ ಆಳ್ವ ಪರಿವಾರದ ಪರಿಚಾರಕರ್ಯಾರೂ ಗೆದ್ದ ದೃಷ್ಟಾಂತಗಳೇ ಇಲ್ಲ ಆದರೆ ಆಳ್ವ ಪರಿವಾರ ಈಗಲೂ ಕಾಂಗ್ರೆಸ್‌ ವ್ಯವಹಾರಗಳಲ್ಲಿ ಕೈ ಹಾಕಿ ಕಾಂಗ್ರೆಸ್‌ ಪಕ್ಷಕ್ಕೇ ಹಾನಿ ಮಾಡುತ್ತಿದೆ.

೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ವಿಲನ್‌ ಆಗಿ ಕಾಡಿದವರಲ್ಲಿ ಸತೀಶ್‌ ಶೈಲ್‌ ಮೊದಲಿಗನಾದರೆ ಶೈಲ್‌ ನಂತೆ ಕೋಮುವಾದಿ, ಮತಾಂಧನಾಗದೆ ನಿವೇದಿತ್‌ ಆಳ್ವ ಕೂಡಾ ವಿಲ್ಲನ್‌ ನ೦೫ ಗಳಲ್ಲಿ ಒಬ್ಬನಾಗಿದ್ದಾರೆ. ಈ ಬಾರಿ ಲೋಕಸಭೆಯ ಕಾಂಗ್ರೆಸ್‌ ಟಿಕೇಟ್‌ ಪಡೆದ ನಿಂಬಾಳ್ಕರ್‌ ಕಾಂಗ್ರೆಸ್‌ ಒಳಗಿನ ನಮಕ್‌ ಹರಾಮ್‌ ಗಳು, ಮೃಧು ಹಿಂದುತ್ವವಾದಿ ಹಿಜಡಾಗಳು, ಧನದಾಹಿ ಅನಕ್ಷರಸ್ಥರ ಅವತಾರಗಳ ಬಗ್ಗೆ ಸ್ವಲ್ಫ ತನಿಖೆ ನಡೆಸಿದ್ದರೂ ಈ ಅಪಾಯಗಳಿಂದ ಪಾರಾಗಬಹುದಿತ್ತು ಆದರೆ ನಿಂಬಾಳ್ಕರ್‌ ತಂಡ ಬೆಳಗಾವಿ, ಬೆಂಗಳೂರುಗಳಲ್ಲಿ ಕೂತು ರಿಮೋಟ್ ರಾಜಕೀಯ ಮಾಡಿರುವುದರಿಂದಾಗಿ ಗೆಲ್ಲುವುದು ಕೊನೆಯ ಮಾತು ಕನಿಷ್ಟ ಒಂದೆರಡು ಕ್ಷೇತ್ರಗಳಲ್ಲಿ ಲೀಡ್‌ ಪಡೆಯುವ ಅವಕಾಶವನ್ನೂ ಕಳೆದುಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯವರು, ಇಲ್ಲಿಯ ಕೆಳವರ್ಗದವರು ಮತಾಂಧ ರ ಜೊತೆಗಿದ್ದಾರೆ ಎನ್ನುವ ಬದಲು ಸ್ವಾರ್ಥಕ್ಕಾಗಿ ಪಕ್ಷ, ಸಿದ್ಧಾಂತ ಬಿಟ್ಟು ಮತೀಯ ಶಕ್ತಿಗಳ ಕುಟಿಲತನಕ್ಕೆ ಪರೋಕ್ಷ ನೆರವು ನೀಡುವ ಕಾಂಗ್ರೆಸ್‌ ನ ಮುಖಂಡರಿಂದಾಗೇ ಇಲ್ಲಿ ಕಾಂಗ್ರೆಸ್‌ ಸೋಲುತ್ತಿರುವುದು ಈ ಸತ್ಯವನ್ನು ಖರ್ಗೆ, ರಾಹುಲ್‌ ರಿಗೆ ಹೇಳುವವರು ಯಾರು?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮೀನು ಕಚ್ಚಿ ಸಾವು!

ದೇವಬಾಗ್: ಬಲೆಗೆ ಬಿದ್ದಿದ್ದ ‘jellyfish’ ಕುಟುಕಿ ಮೀನುಗಾರ ಸಾವು! ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು...

ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ: BJP ಮಾಜಿ MLC ಎಂ.ಬಿ ಭಾನುಪ್ರಕಾಶ್ ನಿಧನ

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ. ಭಾನುಪ್ರಕಾಶ್ ಶಿವಮೊಗ್ಗ: ಇಂಧನ ಮೇಲಿನ ವ್ಯಾಟ್ ಏರಿಕೆ ವಿರೋಧಿಸಿ...

ಪ.ಪಂ. ರಸ್ತೆ, ಚರಂಡಿ ನಿರ್ವಹಣೆಗೆ ಆದ್ಯತೆ ನೀಡಲು ಶಾಸಕರ ಸೂಚನೆ

ಸಿದ್ಧಾಪುರ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು....

fake modi menia…….. ಮೋದಿ ಭಜನೆಯಿಂದ ಕಾಂಗ್ರೆಸ್‌ ಸೋಲು! ಕಾಂಗ್ರೆಸ್‌ ಸೋಲಿಗೆ ಕಾರಣ ಭಾಗ-೦೫ : ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.

ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ...

ದುರಹಂಕಾರ ಪಟ್ಟವರನ್ನು ಶ್ರೀರಾಮನೇ 240 ಸೀಟುಗಳಿಗೆ ತಡೆದ: RSS ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ

ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ ಆಡಳಿತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ʼಅಹಂಕಾರʼಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *