ರಾಹುಲ್‌ ಇಂಡಿಯಾ ನಾಯಕ ನಡೆಮುಂದೆ……

ರಾಹುಲ್‌ ಗಾಂಧಿ ಈ ದಿನಗಳ ಪ್ರಸಿದ್ಧ ನಾಯಕ ಅವರು ಸ್ಫರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಬಹುಮತದಿಂದ ಗೆದ್ದವರು. ಚುನಾವಣೆಯ ಮತಗಳಿಕೆ ಪ್ರಮಾಣ, ಸಾಮಾಜಿಕ ಜಾಲತಾಣಗಳ ಪಾಪ್ಯುಲಾರಿಟಿ ಹಿನ್ನೆಲೆಗಳಲ್ಲಿ ಪರಿವಾರ ಘೋಶಿತ ವಿಶ್ವಗುರುವನ್ನು ಹಿಂದಿಕ್ಕಿದ ಯುವರಾಜಾ.

ಒಬ್ಬ ಅಶಿಕ್ಷಿತ,ಸುಳ್ಳುಕೋರ ಲೋಭಿಯನ್ನು ಜನನಾಯಕನನ್ನಾಗಿ ಮಾಡಲು ಹೊರಟಿರುವ ಪಟ್ಟಭದ್ರರು ಈ ದೇಶದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ರಾಹುಲ್‌ ಗಾಂಧಿಯವರನ್ನು ಗುರಿಯಾಗಿಸಿ ತಜೋವಧೆ ಮಾಡಿದರು. ಪರಿವಾರದ ಸಂಘಟಿತ ಸಮಯಸಾಧಕತನದ ಪರಿಣಾಮರಾಹುಲ್‌ ಗೇಲಿಗೊಳಗಾದರು. ಶಿಕ್ಷಿತ, ಸುಸಂಸ್ಕೃತ ರಾಹುಲ್‌ ಮತಾಂಧ ದುಷ್ಟಕೂಟದ ಅಧಿಕಾರದಾಹಿ, ಲಾಭಬಡುಕ ವಿಷಜಂತುಗಳ ಎದುರಾಳಿಯಾಗಿ ನಡೆಯುತಿದ್ದಾಗ ಅವರ ಪರಿವಾರ ಶಸ್ತ್ರ ಸಜ್ಜಿತರಾಗಿ ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಾಗ ಎದೆಯೊಡ್ಡಿದವರು ರಾಹುಲ್.‌

ಒಂದುವರೆ ನೂರು ಕೋಟಿ ಸಮೀಪದ ಜನಸಂಖ್ಯೆಯ ಬಹುತೇಕರನ್ನು ಸುಳ್ಳು-ಸೋಗಿನ ಮೂಲಕ ವಂಚಿಸಿದ ಜನದ್ರೋಹಿ ಪರಿವಾರ ಹೆದರಿದ್ದು ಕಾಂಗ್ರೆಸ್‌ ಗೆ ಮಾತ್ರ ಅದರಲ್ಲೂ ರಾಹುಲ್‌ ಎಂದರೆ ಹೆದರಿದ ದುಷ್ಟಕೂಟ ಕಂಡಲ್ಲಿ, ನಿಂತಲ್ಲಿ, ಕೂತಲ್ಲಿ ಗೇಲಿ ಮಾಡಲು ಪ್ರಾರಂಭಿಸಿತ್ತು. ಮಾರಿಕೊಂಡ ಮಾಧ್ಯಮಗಳು ಫೇಕು ಪರಿವಾರಿಯ ಭಟ್ಟಂಗಿತನ ಮಾಡುತ್ತಲೇ. ಗುಜರಾತಿ ಕಳ್ಳರ ವಿರುದ್ಧ ಗುಡುಗುತಿದ್ದ ರಾಹುಲ್‌ ವಿರುದ್ಧ ಸಮರ ಸಾರಿದ್ದವು.! ಈ ಸಮರ ಮತ್ತು ತಮ್ಮ ದುಷ್ಟಕೂಟದ ಪ್ರಧಾನಿಯನ್ನು ವೈಭವೀಕರಿಸಲು ಕಳ್ಳ ಪರಿವಾರ ಬಳಸಿದ್ದು ಲಕ್ಷಾಂತರ ಕೋಟಿ!

ಈಗ ಜನ ರಾಷ್ಟ್ರೀಯತೆಯ ಸೋಗಿನ ಕಳ್ಳರ ಮುಖವಾಡವನ್ನು ಬಿಚ್ಚಿಟ್ಟಿದೆ. ನಿಧಾನಕ್ಕೆ ಮಾಧ್ಯಮಗಳು, ಧನದಾಹಿ ಕುಬೇರರು ಪರಿವಾರದ ಕಳ್ಳನಿಂದ ದೂರ ಸರಿಯುತಿದ್ದಾರೆ. ಈಗಲೂ ರಾಹುಲ್‌ ಹಗಲುದರೋಡೆಕೋರ ಫೇಕು ಪರಿವಾರದ ಹಿತೈಶಿಗಳ ಗೌರವದ ನಾಯಕನಲ್ಲ ಯಾಕೆಂದರೆ, ಶ್ರೀಮಂತ ಕುಟುಂಬದ ರಾಹುಲ್‌ ಚಿಕ್ಕಂದಿನಲ್ಲೇ ದೇಶಕ್ಕೆ ಪ್ರಾಣಕೊಟ್ಟ ತನ್ನ ಕುಟುಂಬ ದೇಶಕ್ಕಾಗಿ ಜೀವತೇಯ್ದ ಭಾರತೀಯರನ್ನು ನೋಡಿದ್ದಾರೆ.

ಈಗ ಬೇಜವಾಬ್ಧಾರಿ ವಿದುರ ಕಪಟಿಯನ್ನು ಹೊಗಳಿ ತನ್ನ ಮತಾಂಧತೆ ವಿಸ್ತರಿಸಿದ ದೇಶದ್ರೋಹಿ ಪರಿವಾರ ಹಿಂದೆ ಬ್ರಟೀಷ್‌ ಆಳ್ವಿಕೆಯಲ್ಲಿ ರಾವ್‌ ಬಹುದ್ದೂರ್‌, ಊರ್‌ ಪಟೇಲ, ಪೊಲೀಸ್‌ ಪಟೇಲರಾಗಿ ಈ ದೇಶದ ವಿರುದ್ಧ ಕೆಲಸಮಾಡಿದ ದುಷ್ಟಕೂಟ. ಈ ದುಷ್ಟಕೂಟ ಭಾರತದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಟೀಷರ ಸ್ನೇಹ ಮಾಡಿ ತಮ್ಮ ಸ್ವಾರ್ಥಕ್ಕೆ ದೇಶದ ಹಿತ ಬಲಿಕೊಟ್ಟಿತ್ತು.

ಇದೇ ಪರಿವಾರದ ನಯವಂಚಕ ದುಷ್ಟಕೂಟ ಭಾರತದ ಭೂಸುಧಾರಣೆಯ ವಿರೋಧಿಯಾಗಿತ್ತು. ದೇವರು-ಧರ್ಮದ ಹೆಸರಿನಲ್ಲಿ ಸ್ವಾರ್ಥದ ನಾಯಕತ್ವ, ರಾಜಕಾರಣ ಮಾಡುವ ಈ ಪರಿವಾರಕ್ಕೆ ಕಾಂಗ್ರೆಸ್‌,ರಾಹುಲ್‌ ವಿರೋಧಿಯಾಗಲು ಕಾರಣ ಅವರ ಜನಪರತೆ!.

ಜನಹಿತದ ಕಾಂಗ್ರೆಸ್‌ ಸೋಲದಿದ್ದರೆ ಬ್ರಿಟೀಷ್‌ ಮನಸ್ಥಿತಿಯ ರಾಷ್ಟ್ರೀಯ ಸುಳ್ಳುಕೋರ ಶನಿ ಪರಿವಾರಕ್ಕೆ ಅದರ ಉಳ್ಳವರ ಸಾಕುವ ಕ್ಷುದ್ರ ಮನಸ್ಥಿತಿಗೆ ಉಳಿಗಾಲವಿಲ್ಲ ಎಂದು ಅರಿತ ಪರಿವಾರ ಬಡವರು, ಜನಸಾಮಾನ್ಯರ ಪರವಾಗಿರುವ ಕಾಂಗ್ರೆಸ್‌ ಮುಸ್ಲಿಂರ ತುಷ್ಟೀಕರಣ ಮಾಡುತ್ತೆ ಎಂದು ಇಂಡಿಯಾದ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದರು. ಅಧಿಕಾರ, ಆಡಳಿತಾವಧಿಯ ಚಿಕ್ಕ-ಪುಟ್ಟ ತೊಂದರೆಗಳನ್ನು ಅತಿಬಿಂಬಿಸಿದರು. ಇಷ್ಟೆಲ್ಲಾ ಆದ ಮೇಲೂ ಕಾಂಗ್ರೆಸ್‌ ನಾಶವಾಗಲಿಲ್ಲ, ರಾಹುಲ್‌ ಪಲಾಯನ ಮಾಡಲಿಲ್ಲ ಯಾಕೆಂದರೆ ರಾಹುಲ್‌ ಧೃಢತೆ, ಗಟ್ಟಿತನ, ಕಾಂಗ್ರೆಸ್‌ ನ ಬದ್ಧತೆ, ಚಾರಿತ್ರ್ಯ ಅದಕ್ಕೆ ಕಾರಣ. ಹಾಗಾಗಿ ಈ ದಶಕದಲ್ಲಿ ವಲಸೆ ಪರಿವಾರ ತಮ್ಮ ಮೂಲದ ಮಧ್ಯ ಏಶಿಯಾ, ಜರ್ಮನಿ ಕಡೆ ಮುಖ ಮಾಡಬಹುದು ಯಾಕೆಂದರೆ ರಾಹುಲ್‌ ನಂಥ ಬಡವರ ನಾಯಕನಿಗಾಗಿ ಇಂಡಿಯಾ ಕಾಯುತ್ತಿದೆ. ರಾಹುಲ್‌ ನಿಮಗೆ ಶುಭವಾಗಲಿ, ದೇಶಪ್ರೇಮ, ರಾಷ್ಟ್ರೀಯತೆಯ ಸೋಗಿನ ಬೂಟಾಟಿಕೆ ಪರಿವಾರಕ್ಕೆ ಎದೆಗೆ ಒದ್ದು ಭಾರತದ ಬಹುತ್ವದ ಪರವಾಗಿರುವ ನಿಮಗೆ ಶುಭವಾಗಲಿದೆ. ನಿಮ್ಮ ಮೇಲೆ ನಂಬಿಕೆ ಇದೆ ನೀವು ಕಾಂಗ್ರೆಸ್‌ ನ ಅಂಜುಬುರುಕ ಮೃಧು ಹಿಂದುತ್ವವಾದಿಗಳು ಸಮಯಸಾಧಕ ಫೇಕು ಅಭಿಮಾನಿ ದುಷ್ಟಪರಿವಾರದ ಕಳ್ಳರನ್ನು ರಾತ್ರಿಯ ಕತ್ತಲಲ್ಲೂ ಹುಡುಕಬಲ್ಲ ಚಾಣಾಕ್ಷತೆ ನಿಮಗಿದೆ. ಜನಸಾಮಾನ್ಯರು, ಬಡವರ ಪರವಾಗಿ ದೇಶದ್ರೋಹಿ ಸಂಘಿಗಳನ್ನು ಅವರ ಬೂಟಾಟಿಕೆಯ ನಕಲಿ ದೇಶಪ್ರೇಮವನ್ನು ಬಹಿರಂಗ ಮಾಡಿ ಇಂಡಿಯಾ ಉಳಿಸಲು ನಿಮ್ಮ ನಾಯಕತ್ವದ ಅಗತ್ಯವಿದೆ. ನವಭಾರತದ ಭರವಸೆಯ ನಾಯಕರಾಗುವ ಅವಕಾಶ ನಿಮ್ಮ ಮುಂದಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *