


ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಿದ ಪಂಚಗ್ಯಾರಂಟಿ ಯೋಜನೆಗಳನ್ನು ಜರಿಯುವ ಚಾಳಿ ಮುಂದುವರಿಸಿರುವ ಬಿ.ಜೆ.ಪಿ. ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸೋಲಿಗೆ ಬಿಟ್ಟಿ ಭಾಗ್ಯಗಳೇ ಕಾರಣ ಎಂದು ಆರೋಪಿಸಿದೆ.
ತೈಲೋತ್ಫನ್ನಗಳ ಬೆಲೆ ಏರಿಕೆ ವಿರುದ್ಧ ಸಿದ್ಧಾಪುರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಬಿ.ಜೆ.ಪಿ. ಮುಖಂಡರು ತೈಲೋತ್ಫನ್ನಗಳ ಬೆಲೆ ಏರಿಸಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಬ್ರಷ್ಟರು ಎಂದು ಜರಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಜೆ.ಪಿ. ಮುಖಂಡ ಶಶಿಭೂಷಣ ಹೆಗಡೆ ಜನರಿಗೆ ಉಚಿತಗಳನ್ನು ನೀಡಿದ ತೆಲಂಗಾಣದಲ್ಲಿ ಪೆಟ್ರೋಲ್ ದರ ಹೆಚ್ಚಿದೆ. ಕರ್ನಾಟಕದಲ್ಲೂ ಬಿಟ್ಟಿ ಭಾಗ್ಯಗಳ ಕಾರಣಕ್ಕೆ ಬೆಲೆ ಏರಿಕೆ ಹೆಚ್ಚುತ್ತಿದೆ. ರಾಜ್ಯದ ಪಂಚಗ್ಯಾರಂಟಿ ಯೋಜನೆಗಳಿಗೆ ೬೦ ಸಾವಿರ ಕೋಟಿ ವ್ಯಯವಾಗುತ್ತಿದೆ. ತೈಲಬೆಲೆ ಏರಿಕೆಯಿಂದ ೨ಸಾವಿರ ಕೋಟಿ ಹಣ ಸಂಗ್ರಹಣೆಯಾಗಲಿದೆ. ಗ್ಯಾರಂಟಿಗಳ ಕರ್ಚಿನ ಲೆಕ್ಕದಲ್ಲಿ ಇದು ನಗಣ್ಯ ಎಂದರು.
ಬಿ.ಜೆ.ಪಿ. ಮುಖಂಡರಾದ ಮಾರುತಿ ನಾಯ್ಕ ಹೊಸೂರು, ಕೆ.ಜಿ.ನಾಯ್ಕ ಹಣಜಿಬೈಲ್ ಮಾತನಾಡಿ ಬೆಲೆ ಏರಿಕೆಗೆ ಬಿಟ್ಟಿ ಭಾಗ್ಯಗಳೇ ಕಾರಣ ಎಂದು ದೂರಿದರು.
