

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಕ್ರಮಕ್ಕೆ ಮುಂದಾಗಿದ್ದಾರೆ.
ಹಿಂದೆ ಶಿರಸಿ-ಸಿದ್ದಾಪುರದ ಶಾಸಕರಾಗಿ ಈಗ ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅವರ ಪಕ್ಷ ಅಕ್ರಮ ಮದ್ಯದ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಜಯಿಸಿದ್ದರು. ದುರಂತವೆಂದರೆ… ಪ್ರತಿ ಬಾರಿ ಚುನಾವಣೆಯ ಮೊದಲು ಪ್ರಸ್ಥಾಪವಾಗುತಿದ್ದ ಅಕ್ರಮಮದ್ಯ ಮತ್ತೆ ಚುನಾವಣೆ ನಂತರ ಯಥಾವತ್ತು ಮುಂದುವರಿಯುತಿತ್ತು. ಇದರ ಮರ್ಮ ಅರಿತ ಶಿರಸಿ-ಸಿದ್ಧಾಪುರ ಜನತೆ ಬಿ.ಜೆ.ಪಿ. ಮತ್ತು ಕಾಗೇರಿ ವಿಶ್ವೇಶ್ವರ ಹೆಗಡೆಯವರಿಗೆ ಮನೆಯ ದಾರಿ ತೋರಿಸಿದ್ದರು.
ಅಷ್ಟರ ಮೇಲೆ ಶರಾವತಿ, ಗಂಗಾವಳಿ, ಕಾಳಿ ನದಿಗಳಲ್ಲಿ ಪ್ರವಾಹ ಬಂದು ಹೋಗಿವೆ. ಆದರೆ ಅಕ್ರಮ ಮದ್ಯ ಮಾರಾಟ ಮತ್ತು ಯುವಕರು ಮದ್ಯ ಸೇವಿಸಿ ವಾಹನ ಚಲಾಯಿಸಿ ಜೀವ ಬಿಡುವುದೂ ಮುಂದುವರಿದಿದೆ.
ಈ ವಿಚಾರಗಳ ಬಗ್ಗೆ ಕ್ರಮಜರುಗಿಸಲು ಮುಂದಾಗಿರುವ ಶಾಸಕ ಭೀಮಣ್ಣ ನಾಯ್ಕ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ. ಅಕ್ರಮ ಮದ್ಯ ಮಾರಾಟಗಾರರು, ಅವರಿಗೆ ಮದ್ಯ ಪೂರೈಸುವವರ ಮೇಲೂ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಯುವಕರ ವಾಹನ ಚಾಲನೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಾಲೇಜು ವಿದ್ಯಾರ್ಥಿಗಳು ವಿಪರೀತವಾಗಿ ವಾಹನ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲದೆ ಕೆಲವರು ಮದ್ಯ ಸೇವಿಸಿ ವಾಹನ ಚಲಾಯಿಸಿ ಸಾವು-ನೋವಿಗೆ ಕಾರಣವಾಗುತಿದ್ದಾರೆ. ಶಾಸಕರ ಈ ಶಿಸ್ತು ಕ್ರಮದ ಬಗ್ಗೆ ಕ್ಷೇತ್ರದ ಜನತೆ ಖುಷಿ ಪಟ್ಟಿದ್ದಾರೆ.
