

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು ಸೊರಬಾ ಅಂದವಳ್ಳಿಯ ಮೂಲದ ಈ ಮಹಿಳೆ ಕಳೆದ ಕೆಲವು ವರ್ಷಗಳಿಂದ ನಿಲಯದ ಕಾವಲುಗಾರ್ತಿಯಾಗಿ ಸೊರಬಾದಲ್ಲಿ ಸೇವೆ ಸಲ್ಲಿಸುತಿದ್ದರು.
ಕಳೆದ ಕೆಲವು ತಿಂಗಳುಗಳ ಹಿಂದೆ ಮುಖ್ಯ ಅಡುಗೆ ಸಿಬ್ಬಂದಿಯಾಗಿ ಪದೋನ್ನತಿ ಹೊಂದಿದ್ದ ಈ ಮಹಿಳೆ ಕಳೆದ ಕೆಲವು ದಿವಸಗಳಿಂದ ಖಿನ್ನತೆಗೊಳಗಾಗಿದ್ದರು. ಎಂದಿನಂತೆ ಇಂದು ಮುಂಜಾನೆ ಕರ್ತವ್ಯಕ್ಕೆ ಹಾಜರಾಗಿದ್ದ ಮಹಿಳೆ ಮಧ್ಯಾಹ್ನದ ಊಟದ ಸಮಯದಲ್ಲಿ ಅನ್ಯರು ಇರದಿರುವುದನ್ನು ಕಾಯ್ದು ಧ್ವಜಾರೋಹಣಕ್ಕೆ ಬಳಸುವ ಹಗ್ಗದಿಂದ ವಸತಿನಿಲಯದ ಜಂತಿಗೆ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ,ಪುತ್ರ ,ತಾಯಿ, ಸಹೋದರ ಸೇರಿದ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
