ಹಿಂದುಳಿದ ವರ್ಗಗಳ ಚಾಂಪಿಯನ್ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹುಟ್ಟುಹಬ್ಬವನ್ನು ನಾಡಿನೆಲ್ಲೆ ಡೆ ಅಕ್ಟೋಬರ್ ೨೬ ರಂದು ಆಚರಿಸಲಾಗುತ್ತಿದೆ. ಎಸ್. ಬಂಗಾರಪ್ಪ ಒಂಟಿಸಲಗ, ಛಲದಂಕಮಲ್ಲ ಎಂದು ಹೆಸರಾಗಿದ್ದವರು. ಕಾಗೋಡು ಹೋರಾಟದ ಜೀವಂತಿಕೆ, ಭೂಸುಧಾರಣೆ ಕಾನೂನು ಜಾರಿ, ಬಡವರ ಪರ ಧ್ವನಿ, ವಿಶೇಶ ಯೋಜನೆ, ಕಾಳಜಿಗಳಿಂದ ವಿರೋಧಿಗಳ ಮೆಚ್ಚುಗೆಯನ್ನೂ ಗಳಿಸಿದ್ದ ಬಂಗಾರಪ್ಪ ರಾಜ್ಯದ ಜನಮಾನಸದಲ್ಲಿ ನೆಲೆ ನಿಂತ ನಾಯಕರಾಗಿದ್ದರು. ಅವರ ಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರು, ಸೊರಬಾ, ಸಿದ್ದಾಪುರ ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳಲ್ಲಿ ಅಕ್ಟೋಬರ್ ೨೬ ರಂದು ಬಂಗಾರಪ್ಪ ಜನ್ಮ ದಿನ ಆಚರಣೆ ನಡೆಯುತ್ತಿದೆ.
ಸೊರಬಾದ ಬಂಗಾರಧಾಮದಲ್ಲಿ ಅಕ್ಟೋಬರ್ ೨೬ ರ ಶನಿವಾರ ಇಡೀ ದಿನ ವಿಶೇಶ ಕಾರ್ಯಕ್ರಮ ನಡೆಯುತಿದ್ದು ಗೃಹ ಸಚಿವ ಜಿ.ಪರಮೇಶ್ವರ, ಮುಕುಂದರಾಜ್ ಸೇರಿದಂತೆ ನಾಡಿನ ಅನೇಕ ಗಣ್ಯರು ಬಂಗಾರಪ್ಪ ಸ್ಮರಣೆಗೆ ಸಾಕ್ಷಿಯಾಗಲಿದ್ದಾರೆ.
ಸಿದ್ಧಾಪುರ ಕಾರ್ಯಕ್ರಮ-
ಬಂಗಾರಪ್ಪ ಕಾರ್ಯಕ್ಷೇತ್ರಗಳಲ್ಲಿ ಸಿದ್ಧಾಪುರಕ್ಕೆ ಅಗ್ರಸ್ಥಾನ ಮೇಲ್ವರ್ಗದ ಯಜಮಾನಿಕೆಯಿಂದ ನರಳಿದ ಹಿಂದುಳಿದ ವರ್ಗಗಳಿಗೆ ಧ್ವನಿ ಕೊಟ್ಟವರು ಬಂಗಾರಪ್ಪ. ಸೊರಬಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಹೊರಡುತಿದ್ದ ಬಂಗಾರಪ್ಪ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಸೇರಿದ ರಾಜ್ಯದ ಬಹುಭಾಗ ಸುತ್ತಿ ಮರಳುವಾಗ ದಂಡಯಾತ್ರೆ ಮಾಡಿ ವಿಜಯಕ್ಕೆ ಕಾದವರಿಗೆ ಸೋಲಾದದ್ದೇ ಇಲ್ಲ. ಸೋಲಿಲ್ಲದ ಸರದಾರ ಖ್ಯಾತಿಗೆ ಪಾತ್ರರಾಗಿದ್ದ ಬಂಗಾರಪ್ಪ ಸಿದ್ಧಾಪುರದ ಮೂಲಕ ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವಿಜಯಯಾತ್ರೆ ಪ್ರಾರಂಭಿಸುತಿದ್ದುದರಿಂದ ಬಂಗಾರಪ್ಪನವರಿಗೆ ಸಿದ್ದಾಪುರ ಪ್ರೀತಿಯ ಊರು. ಸಿದ್ಧಾಪುರದಲ್ಲಿ ಕೂಡಾ ಬಂಗಾರಪ್ಪ ವಿಚಾರ ವೇದಿಕೆಯಿಂದ ಅ.೨೬ ರಂದು ಬಂಗಾರಪ್ಪ ಹುಟ್ಟುಹಬ್ಬದ ಪ್ರಯುಕ್ತ ಅಸಹಾಯಕರಿಗೆ ನೆರವು, ಬಂಗಾರಪ್ಪ ಒಡನಾಡಿಗಳು ಅವರ ಕುಟುಂಬಸ್ಥರಿಗೆ ಸನ್ಮಾನ, ಹಾಗೂ ನುಡಿನಮನ ನಡೆಯಲಿವೆ.