ಅ.೨೬ ನಾಡಿನೆಲ್ಲೆಡೆ ಬಂಗಾರಪ್ಪ ಹುಟ್ಟುಹಬ್ಬ ಆಚರಣೆ

ಹಿಂದುಳಿದ ವರ್ಗಗಳ ಚಾಂಪಿಯನ್‌ ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪನವರ ಹುಟ್ಟುಹಬ್ಬವನ್ನು ನಾಡಿನೆಲ್ಲೆ ಡೆ ಅಕ್ಟೋಬರ್‌ ೨೬ ರಂದು ಆಚರಿಸಲಾಗುತ್ತಿದೆ. ಎಸ್.‌ ಬಂಗಾರಪ್ಪ ಒಂಟಿಸಲಗ, ಛಲದಂಕಮಲ್ಲ ಎಂದು ಹೆಸರಾಗಿದ್ದವರು. ಕಾಗೋಡು ಹೋರಾಟದ ಜೀವಂತಿಕೆ, ಭೂಸುಧಾರಣೆ ಕಾನೂನು ಜಾರಿ, ಬಡವರ ಪರ ಧ್ವನಿ, ವಿಶೇಶ ಯೋಜನೆ, ಕಾಳಜಿಗಳಿಂದ ವಿರೋಧಿಗಳ ಮೆಚ್ಚುಗೆಯನ್ನೂ ಗಳಿಸಿದ್ದ ಬಂಗಾರಪ್ಪ ರಾಜ್ಯದ ಜನಮಾನಸದಲ್ಲಿ ನೆಲೆ ನಿಂತ ನಾಯಕರಾಗಿದ್ದರು. ಅವರ ಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರು, ಸೊರಬಾ, ಸಿದ್ದಾಪುರ ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳಲ್ಲಿ ಅಕ್ಟೋಬರ್‌ ೨೬ ರಂದು ಬಂಗಾರಪ್ಪ ಜನ್ಮ ದಿನ ಆಚರಣೆ ನಡೆಯುತ್ತಿದೆ.

ಸೊರಬಾದ ಬಂಗಾರಧಾಮದಲ್ಲಿ ಅಕ್ಟೋಬರ್ ೨೬ ರ ಶನಿವಾರ ಇಡೀ ದಿನ ವಿಶೇಶ ಕಾರ್ಯಕ್ರಮ ನಡೆಯುತಿದ್ದು ಗೃಹ ಸಚಿವ ಜಿ.ಪರಮೇಶ್ವರ‌, ಮುಕುಂದರಾಜ್‌ ಸೇರಿದಂತೆ ನಾಡಿನ ಅನೇಕ ಗಣ್ಯರು ಬಂಗಾರಪ್ಪ ಸ್ಮರಣೆಗೆ ಸಾಕ್ಷಿಯಾಗಲಿದ್ದಾರೆ.

ಸಿದ್ಧಾಪುರ ಕಾರ್ಯಕ್ರಮ-

ಬಂಗಾರಪ್ಪ ಕಾರ್ಯಕ್ಷೇತ್ರಗಳಲ್ಲಿ ಸಿದ್ಧಾಪುರಕ್ಕೆ ಅಗ್ರಸ್ಥಾನ ಮೇಲ್ವರ್ಗದ ಯಜಮಾನಿಕೆಯಿಂದ ನರಳಿದ ಹಿಂದುಳಿದ ವರ್ಗಗಳಿಗೆ ಧ್ವನಿ ಕೊಟ್ಟವರು ಬಂಗಾರಪ್ಪ. ಸೊರಬಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಹೊರಡುತಿದ್ದ ಬಂಗಾರಪ್ಪ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ ಸೇರಿದ ರಾಜ್ಯದ ಬಹುಭಾಗ ಸುತ್ತಿ ಮರಳುವಾಗ ದಂಡಯಾತ್ರೆ ಮಾಡಿ ವಿಜಯಕ್ಕೆ ಕಾದವರಿಗೆ ಸೋಲಾದದ್ದೇ ಇಲ್ಲ. ಸೋಲಿಲ್ಲದ ಸರದಾರ ಖ್ಯಾತಿಗೆ ಪಾತ್ರರಾಗಿದ್ದ ಬಂಗಾರಪ್ಪ ಸಿದ್ಧಾಪುರದ ಮೂಲಕ ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವಿಜಯಯಾತ್ರೆ ಪ್ರಾರಂಭಿಸುತಿದ್ದುದರಿಂದ ಬಂಗಾರಪ್ಪನವರಿಗೆ ಸಿದ್ದಾಪುರ ಪ್ರೀತಿಯ ಊರು. ಸಿದ್ಧಾಪುರದಲ್ಲಿ ಕೂಡಾ ಬಂಗಾರಪ್ಪ ವಿಚಾರ ವೇದಿಕೆಯಿಂದ ಅ.೨೬ ರಂದು ಬಂಗಾರಪ್ಪ ಹುಟ್ಟುಹಬ್ಬದ ಪ್ರಯುಕ್ತ ಅಸಹಾಯಕರಿಗೆ ನೆರವು, ಬಂಗಾರಪ್ಪ ಒಡನಾಡಿಗಳು ಅವರ ಕುಟುಂಬಸ್ಥರಿಗೆ ಸನ್ಮಾನ, ಹಾಗೂ ನುಡಿನಮನ ನಡೆಯಲಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *