nk police_ ” ಪೊಸ್ಟರ್ ಅಭಿಯಾನ”
#ಸೈಬರ್ ಅಪರಾಧಗಳ ಜಾಗೃತಿಗಾಗಿ “ಪೊಸ್ಟರ್ ಅಭಿಯಾನ”#
ಶಿರಸಿ ನಗರದಲ್ಲಿ ಸೈಬರ್ ಅಪರಾಧಗಳ ಜಾಗೃತಿಗಾಗಿ ಶಿರಸಿ ನಗರ ಠಾಣೆಯ ಪೊಲೀಸರು ” ಪೊಸ್ಟರ ಅಭಿಯಾನ”ವನ್ನು ಹಮ್ಮಿಕೊಂಡಿದ್ದಾರೆ,
ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು “ಪೊಸ್ಟರ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು
ಇಂದು ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆಎಲ್ ರವರು ಪೊಸ್ಟರ್ ಬಿಡುಗಡೆ ಮಾಡಿ ಶಿರಸಿ ನಗರ ಠಾಣೆಯ ವತಿಯಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕ್,ಬಸ್ಟ್ಯಾಂಡ್,ಆಟೋ ಸ್ಟ್ಯಾಂಡ್,ಮಾಲ್ ಗಳು,ಮಾರುಕಟ್ಟೆಯಂತಹ ಜನಸಂದಣಿ ಪ್ರದೇಶಗಳಲ್ಲಿ ಪೊಸ್ಟರ್ ಅಭಿಯಾನ ಕೈಗೊಳ್ಳಲಿದ್ದು,ಸಾರ್ವಜನಿಕರು ಸಹ ಸೈಬರ್ ಸುರಕ್ಷತೆ,ಭದ್ರತೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ,ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಜಂಜೇಶ್ವರ ಭಾವಾ,ಸಹಾಯಕ ವ್ಯವಸ್ಥಾಪಕ ಯೋಗೇಶ ಪಾಟೀಲ್ ಹಾಗೂ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಾಂಜಾ ಕೇಸ್ ನಲ್ಲಿ ನಟ, ಗಾಯಕ ಬಂಧನ!
ಶನಿವಾರ ರಾತ್ರಿ ಜಿಲ್ಲೆಯ ಪುಲ್ಲಿಕ್ಕಾನಂನಲ್ಲಿ ವಾಹನ ತಪಾಸಣೆ ವೇಳೆಯಲ್ಲಿ ಪಾರೀಕುಟ್ಟಿ ಎಂದೇ ಹೆಸರಾಗಿರುವ ನಟ ಮತ್ತು ಆತನ ಸ್ನೇಹಿತರೊಬ್ಬರನ್ನು MDMA ಮಾದಕ ದ್ರವ್ಯ ಮತ್ತು ಗಾಂಜಾದೊಂದಿಗೆ ಬಂಧಿಸಲಾಯಿತು.
ಪಿ.ಎಸ್ .ಫರೀದುದ್ದೀನ್
ಇಡುಕ್ಕಿ: ನಿಷೇಧಿತ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಮಲಯಾಳಂ ನಟ, ಗಾಯಕ ಹಾಗೂ BigBoss ಮಾಜಿ ಸ್ಪರ್ಧಿ ಪಿ.ಎಸ್ .ಫರೀದುದ್ದೀನ್ ಅವರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಜಿಲ್ಲೆಯ ಪುಲ್ಲಿಕ್ಕಾನಂನಲ್ಲಿ ವಾಹನ ತಪಾಸಣೆ ವೇಳೆಯಲ್ಲಿ ಪಾರೀಕುಟ್ಟಿ ಎಂದೇ ಹೆಸರಾಗಿರುವ ನಟ ಮತ್ತು ಆತನ ಸ್ನೇಹಿತರೊಬ್ಬರನ್ನು MDMA ಮಾದಕ ದ್ರವ್ಯ ಮತ್ತು ಗಾಂಜಾದೊಂದಿಗೆ ಬಂಧಿಸಲಾಯಿತು.
ಬಂಧಿತ ನಟ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜನಪ್ರಿಯ ಟಿವಿ ಶೋ ಬಿಗ್ ಬಾಸ್‌ನ ಒಂದು ಸೀಸನ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಅವರಿಗೆ ಹಲವಾರು ಫಾಲೋವರ್ಸ್ ಇದ್ದಾರೆ. ಇದು ಸಾಮಾನ್ಯ ವಾಹನ ತಪಾಸಣೆಯಾಗಿದ್ದು, ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ 10. 50 ಗ್ರಾಂ MDMA ಮಾದಕ ದ್ರವ್ಯ ಮತ್ತು 9 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಅಬಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯ ಪ್ರಮಾಣ ಹೆಚ್ಚಾಗಿದ್ದು, ಅವರು 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ತನಿಖೆ ಮುಂದುವರಿದಿದ್ದು, ತನಿಖೆಯ ನಂತರ ಇತರ ವಿವರಗಳು ಲಭ್ಯವಾಗಬಹುದು ಎಂದು ಅವರು ಹೇಳಿದರು.
ನಟ ಮತ್ತು ಅವರ ಸ್ನೇಹಿತ ಇಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ. (kp.c)