ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಘದ ಅಧ್ಯಕ್ಷರಾಗಿ ಸಮಾಜಮುಖಿ ಡಾಟ್ ನೆಟ್ ನ ಸಂಪಾದಕ ಕನ್ನೇಶ ಕೋಲಶಿರ್ಸಿ, ಉಪಾಧ್ಯಕ್ಷರಾಗಿ ನುಡಿಜೇನು ಪತ್ರಿಕೆಯ ನಾಗರಾಜ ನಾಯ್ಕ ಮಾಳ್ಕೋಡ, ಕಾರ್ಯದರ್ಶಿಯಾಗಿ ಕರಾವಳಿ ಮುಂಜಾವು ಪತ್ರಿಕೆಯ ಯಶವಂತ ನಾಯ್ಕ ತ್ಯಾರ್ಸಿ, ಖಜಾಂಚಿಯಾಗಿ ಸುರಭಿವಾಣಿ ವಾರಪತ್ರಿಕೆಯ ಪ್ರಶಾಂತ ಡಿ ಶೇಟ್, ಸಹಕಾರ್ಯದರ್ಶಿಯಾಗಿ ವಿಸ್ತಾರ ನ್ಯೂಸ್ ನ ಸುರೇಶ ಮಡಿವಾಳ ಕಡಕೇರಿ, ಸದಸ್ಯರಾಗಿ ಸಾಗರ ಸಾಮ್ರಾಟ್ ಪತ್ರಿಕೆಯ ದಿವಾಕರ ನಾಯ್ಕ ಸಂಪಖಂಡ, ರಾಜ್ ನ್ಯೂಸ್ ನ ಶಿವಶಂಕರ ಕೋಲಶಿರ್ಸಿ, ಸಮಾಜವಾಣಿ ವಾರಪತ್ರಿಕೆಯ ಟಿಕೆಎಂ ಅಜಾದ್, ಕೊಂಕಣವಾಹಿನಿ ಪತ್ರಿಕೆಯ ಗಣೇಶ ಮೇಸ್ತ ಹೊಸೂರ, ಕನ್ನಡಾಧಿಪತಿ ವಾರಪತ್ರಿಕೆಯ ಗೋಪಾಲ ಕಾನಳ್ಳಿ ಆಯ್ಕೆಯಾಗಿದ್ದಾರೆ.