

ಸಿದ್ದಾಪುರ : ನಾಡದೇವಿ ಜನಪರ ವೇದಿಕೆ ಸಿದ್ದಾಪುರ ದಿಂದ ಶುಕ್ರವಾರ ಬೆಳಿಗ್ಗೆ 12 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಬೇಡ್ಕಣಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಕನ್ನಡ ಸ್ಪಷ್ಟ ಭಾಷಣ ಹಾಗೂ ವಿವಿಧ ವಿಷಯಗಳ ಕುರಿತ ಚರ್ಚೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಅನಿಲ್ ಕೊಠಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಕಾಲೇಜು ಪ್ರಚಾರ್ಯ ಸತೀಶ್ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ,
ಹಿರಿಯ ನ್ಯಾಯವಾದಿ ಜಿ ಟಿ ನಾಯ್ಕ್ ಬಹುಮಾನ ವಿತರಿಸಲಿದ್ದಾರೆ , ಅತಿಥಿಗಳಾಗಿ ವಸಂತ ನಾಯ್ಕ್, ವಿ ಎನ್ ನಾಯ್ಕ್, ವೀರಭದ್ರ ನಾಯ್ಕ್, ನಾಸಿರ್ ಖಾನ್, ರಾಜೇಶ ಕತ್ತಿ, ಮಂಜುನಾಥ್ ತ್ಯಾರ್ಸಿ , ಕೃಷ್ಣಮೂರ್ತಿ ಐಸೂರ್, ಅನಿಲ್ ಕೊಠಾರಿ, ಬಿ ಎಸ್ ಎನ್ ಡಿ ಪಿ ಯ ದೀಪಾ ನಾಯ್ಕ್, ವಿನಾಯಕ ದೊಡ್ಡಗದ್ದೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
