

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಬಹುಜತನ, ಪರಿಶ್ರಮದಿಂದ ಕೆಲಸ ಮಾಡಿದ ಬಿ.ಎನ್. ವಾಸರೆ, ಪಿ. ಆರ್. ನಾಯ್ಕ ತಂಡ ಶಿರಸಿಯಲ್ಲಿ ಜಿಲ್ಲಾ ಸಮ್ಮೇಳನವನ್ನು ಯಶಸ್ವಿ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಉನ್ನತಿ, ಉತ್ಕೃಷ್ಟತೆಯ ಬಗ್ಗೆ ಬೆಳಕು ಚೆಲ್ಲುವ ಓದು- ಅಧ್ಯಯನ ಮಾಡಿರುವ ಆರ್. ಡಿ. ಹೆಗಡೆ ಆಲ್ಮನೆ ತಮ್ಮ ಮಾತು, ಕತೆ, ಸಂವಾದ ನಡವಳಿಕೆ,ವ್ಯಕ್ತಿತ್ವಗಳಿಂದ ಜಿಲ್ಲಾ ಸಾಹಿತ್ಯ ಪರಿಷತ್ ನ ಆಯ್ಕೆ ಸೂಕ್ತ ಎಂಬುದನ್ನು ಸಾಬೀತು ಮಾಡಿದ್ದಾರೆ.
ಸಾಹಿತ್ಯ ಸಮ್ಮೇಳನದ ನೊಗ ಹೊತ್ತ ಶಾಸಕ ಭೀಮಣ್ಣ ನಾಯ್ಕ ತನ್ನ ಸರಳತೆ, ಜನಪರತೆ, ಕ್ರೀಯಾಶೀಲತೆಗಳಿಂದ ಕನ್ನಡಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗೋಷ್ಥಿಗಳು ಒಂದಕ್ಕಿಂತ ಇನ್ನೊಂದು ಶ್ರೇಷ್ಠ ಎನ್ನುವಂತೆ ನಡೆದಿದ್ದು ಈ ಸಮ್ಮೇಳನದ ಯಶಸ್ಸಿನ ಹಿಂದಿನ ಗುಟ್ಟು. ಬಹುತೇಕ ಗೋಷ್ಠಿಗಳ ಆಶಯ ಭಾಷಣ, ಅಧ್ಯಕ್ಷತೆಯ ನುಡಿಗಳು ಉತ್ತರ ಕನ್ನಡದ ಅನನ್ಯತೆ, ಉತ್ಕೃಷ್ಟತೆ ಸಾರಿದ್ದು ಹೆಗ್ಗಳಿಕೆ. ಇಡೀ ಸಮ್ಮೇಳನದಲ್ಲಿ ತಪ್ಪುಗಳನ್ನು ಹುಡುಕುತ್ತಾ ಹೊರಟರೂ ಪ್ರಮಾದಗಳು ಕಾಣುವಂತಿರಲಿಲ್ಲ.
ಕವಿ ಕಾವ್ಯ ಸಮಯದ ಆಶಯ ನುಡಿ ಆಡಿದ ಸಂತೋಷಕುಮಾರ ಮೆಹಂದಳೆಯ ಪೂರ್ವಾಗ್ರಹ ಪೀಡಿತ ಪುರೋಹಿತಶಾಹಿ ಕರ್ಮಠತೆಯ ಪೇಲವ ಭಾಷಣ ಬಿಟ್ಟರೆ ಇಡೀ ಸಮ್ಮೇಳನದಲ್ಲಿ ಇಂಥ ಅಭಾಸಗಳು ಎಲ್ಲೂ ಗೋಚರಿಸದಿರುವುದು ವಿಶೇಶ.
ಬ್ರಾಮಣ್ಯ ಪ್ರತಿಪಾದಕ ಮೆಹಂದಳೆಯವರ ಸಮಾಜವಿಮುಖಿ ಚಿಂತನೆಗೆ ಅದೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಾಗರೇಖಾ ಗಾಂವಕರ ಕೊಟ್ಟ ಉತ್ತರ ಪುರೋಹಿತಶಾಹಿ ಮನಸ್ಥಿತಿಯವರಿಗೆ ಕೊಟ್ಟ ಔಷಧಿಯಂತಿದ್ದುದು ಸಮ್ಮೇಳನದ ಹೈಲೈಟ್.
ಶಿರಸಿ ತಾಲೂಕಿನ ಅಭಿವೃದ್ಧಿ ಕನಸು ಮತ್ತು ವಾಸ್ತವ ಗೋಷ್ಠಿಯಲ್ಲಿ ಡಾ. ನಾಗೇಶ್ ನಾಯ್ಕ, ಡಾ. ಕೇಶವ ಕೂರ್ಸೆ, ಉಮಾಕಾಂತ್ ಭಟ್ ಶಿರಸಿ ಜೊತೆ ಉತ್ತರ ಕನ್ನಡದ ವಾಸ್ತವ ಬಿಚ್ಚಿಟ್ಟಿದ್ದು ವಿಶೇಶವಾಗಿತ್ತು ( ಇವೆಲ್ಲಾ ವಿಡಿಯೋ ತುಣುಕುಗಳು samaajamukhi.net ಸಾಮಾಜಮುಖಿ ಡಾಟ್ ನೆಟ್ ಪೇಜ್ & ಸಮಾಜಮುಖಿ & samaajamukhi & samajamukhinews ಸಮಾಜಮುಖಿನ್ಯೂಸ್ ಯುಟ್ಯೂಬ್ ಚಾನೆಲ್ ಗಳಲ್ಲಿ ಲಭ್ಯವಿವೆ.)
ಕವಿ-ಕಾವ್ಯ ಕುಂಚ ಜನಮನ ಸೆಳೆದ ವಿಶಿಷ್ಟ ಕಾರ್ಯಕ್ರಮ ಈ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಜೊತೆ ಹಲವು ರಾಜಕೀಯ ಧುರೀಣರು ಸಂಪೂರ್ಣ ವೀಕ್ಷಿಸಿದ್ದೇ ಇದರ ಯಶಸ್ಸಿಗೆ ಸಾಕ್ಷಿ.
ಜಿಲ್ಲೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳು ಗೋಷ್ಠಿ ಜಿಲ್ಲೆಯ ವಾಸ್ತವ, ಮುನ್ನೋಟ ಹೇಳುವಂತಿತ್ತು ಇದೇ ಗೋಷ್ಠಿಯಲ್ಲಿ ಡಾ. ವೆಂಕಟೇಶ್ ನಾಯ್ಕ ಪ್ರತಿಪಾದಿಸಿದ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ, ಉತ್ತರ ಕನ್ನಡಕ್ಕೆ ಗುಡ್ಡಗಾಡು ಜಿಲ್ಲೆಯ ಸ್ಥಾನಮಾನ ಬೇಡಿಕೆ ಉತ್ತರ ಕನ್ನಡ ಜಿಲ್ಲೆಯ ಧ್ವನಿ ಪ್ರತಿಧ್ವನಿಸಿದಂತೆನಿಸಿತು.
ಉಳಿದಂತೆ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದ ರಘುಪತಿ ಆಲ್ಮನೆಯವರನ್ನು ಸರಿಯಾಗಿ ಪರಿಚಯಿಸಲು ನೆರವಾಯಿತು.
ಇಷ್ಟೆಲ್ಲಾ ಸಂಬ್ರಮದ ನಡುವೆ ಸಿದ್ಧಾಪುರಕೊರ್ಲಕೈ ಭಾಗದಲ್ಲಿ ಮಂಗಗಳು ಸಾವನ್ನಪ್ಪಿದ್ದು ಶಿರಸಿ-ಕುಮಟಾ ಮಾರ್ಗ ಬಂದ್ ಆಗಿ ಶಿರಸಿ, ಜೋಗಾ, ಕುಮಟಾ ರಸ್ತೆಗಳಲ್ಲಿ ವಾಹನ ದಟ್ಟನೆ ಹೆಚ್ಚಿ ಅಪಾಯ ಕಣ್ಣೆದುರೇ ಕುಣಿಯುತ್ತಿರುವ ವಿದ್ಯಮಾನ ಇರುವುದರಿಂದ ಸಾಹಿತ್ಯ ಸಮ್ಮೇಳನದ ಆದೇಶ, ಆಶಯಗಳೊಂದಿಗೆ ನಮ್ಮ ಜನರ ಪ್ರಾಣದ ಬಗ್ಗೆಯೂ ಜಿಲ್ಲಾಡಳಿತ ಕಾಳಜಿ ವಹಿಸಿ, ಕಾರ್ಯಪ್ರವೃತ್ತರಾಗಲು ಈ ಮನದ ಮಾತು.
