


ಸಿದ್ದಾಪುರ : ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿತ ಮೀನುಗಾರರ ಸೊಸೈಟಿ ರಚನೆಯಲ್ಲಿ ಮೀನು ಮಾರಾಟ ಉದ್ಯೋಗವನ್ನು ಮಾಡುತ್ತಿರುವ ಎಲ್ಲಾ ಸಮುದಾಯದವರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮೀನು ಮಾರಾಟಗಾರರ ವಿಶ್ವಸ್ಥ ಮಂಡಳಿ ಆಗ್ರಹಿಸಿದೆ. ಈ ಕುರಿತು ತಹಸೀಲ್ದಾರ ಕಚೇರಿಗೆ ತೆರಳಿ ಮಂಡಳಿಯ ಪದಾಧಿಕಾರಿಗಳು ಮನವಿ ಸಲಿಸಿದ್ದಾರೆ.
ತಾಲೂಕಿನ ಪಟ್ಟಣ ಪಂಚಾಯತ ಮಳಿಗೆಯಲ್ಲಿ ಬಹಳ ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದು, ಮೀನುಗಾರಿಕೆಯನ್ನು ಅಲವಂಬಿಸಿ ಎಲ್ಲಾ ಸಮುದಾಯದ ಜನರು ಜೀವನ ನಡೆಸುತ್ತಿದ್ದೇವೆ.
ಆದರೆ ಈಗ ಸಿದ್ದಾಪುರ ತಾಲೂಕಿನಲ್ಲಿ ಮೀನುಗಾರಿಕೆ ಸೊಸೈಟಿಯನ್ನು ಪ್ರಾರಂಭ ಮಾಡಲು ಹೊರಟಿರುವುದು ಸಂತೋಷದ ವಿಷಯ. ಆದರೆ ಮೀನುಗಾರಿಯನ್ನು ನಂಬಿ ಉದ್ಯೋಗ ಮಾಡುವ ಎಲ್ಲಾ ಸಮುದಾಯದ ಜನರಿಗೆ ಸರಕಾರದಿಂದ ಬರುವ ಸವಲತ್ತುಗಳು ಹಾಗೂ ಅನುಕೂಲವಾಗುವಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಬೇಕು ಹಾಗೂ ಆಡಳಿತ ಮಂಡಳಿ ರಚನೆಯ ಸಂದರ್ಭದಲ್ಲಿ ನಮ್ಮ ಪರಿಗಣಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಹಸೀಲ್ದಾರ ಎಂ.ಆರ್. ಕುಲಕರ್ಣಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಿದ್ದಾಪುರ ಮೀನು ಮಾರುಕಟ್ಟೆಯ ಪದಾಧಿಕರಿಗಳಾದ ಸುನೀಲ್ ಎಂ. ಫರ್ನಾಂಢೀಸ್, ಬಾಪು ಬುಡನ್ ಸಾಬ್, ಮಹೇಶ ಮಹಾಲೆ, ಗಂಗಾಧರ ಚಲುವಾದಿ, ಹೇಮಗರಿ, ಶರೀಪ್, ಅಬ್ಜಲ್, ರಾಮ ನಾಯ್ಕ, ಮೀರಾ ಮೇಸ್ತ, ಅಂತೋನ್ ಫರ್ನಾಂಡಿಸ್, ವಿನಾಯಕ, ಬಾಷಾ ಮುಂತಾದವರು ಉಪಸ್ಥಿತರಿದ್ದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






