


ಕೃಷಿ ಮತ್ತು ಜನ ಸೇವೆಯೇ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿರುವ ಶಾಸಕ ಭೀಮಣ್ಣ ಟಿ ನಾಯ್ಕ ಹುಟ್ಟುಹಬ್ಬವನ್ನು ತಮ್ಮ ತವರೂರಾದ ಶಿರಸಿ ತಾಲೂಕಿನ ಮಳಲಗಾವ್ ನಲ್ಲಿ ಆ ಗ್ರಾಮದ ಗ್ರಾಮಸ್ಥರು ಮತ್ತು ಚಿಕ್ಕ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಮೊದಲಿಗೆ ತವರೂರಿನ ದೇವಿ ಶ್ರೀ ಮಾರಿಕಾಂಭಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಳಲಗಾಂವ ಗ್ರಾಮಸ್ಥರು ಆಯೋಜಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿಕ್ಕಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಣೆಮಾಡಿದರು. ಈ ವೇಳೆ ಸುನೀಲ್ ಬಿ ನಾಯ್ಕ, ನಾಗೇಂದ್ರ ಬಿ ನಾಯ್ಕ, ಶೇಖರ್ ಮಡಿವಾಳ, ಉಮೇಶ್ ಮಡಿವಾಳ, ಮನೋಜ ಏನ್ ನಾಯ್ಕ, ನಾಗೇಂದ್ರ ಮಡಿವಾಳ, ಪ್ರಶಾಂತ್ ಎಸ್ ನಾಯ್ಕ, ಪ್ರಭಾಕರ್ ಎಮ್ ನಾಯ್ಕ,ಹೂವಣ್ಣ ಮಡಿವಾಳ, ಏನ್ ಜಿ ನಾಯ್ಕ, ಶಿವಣ್ಣ ಹಳ್ಳಿಕೊಪ್ಪ, ಆನಂದ ಹಳ್ಳಿಕೊಪ್ಪ,ಗುರುರಾಜ್ ಮಹಲೆ, ನಿಂಗಪ್ಪ ಬಿ ನಾಯ್ಕ, ಸೇರಿದಂತೆ ಊರಿನ ಗ್ರಾಮಸ್ಥರು ಹಾಗೂ ಭೀಮಣ್ಣ ಟಿ ನಾಯ್ಕ ಅಭಿಮಾನಿಗಳು ಪಾಲ್ಗೊಂಡಿದ್ದರು.


