ಜನಮನ ಗೆದ್ದ ಶಾಸಕ ಭೀಮಣ್ಣ ಜನಪರ ನಾಯಕ

ಎಲ್ಲೂ ಮಾಸದ ನಗು, ಆಯಾಸವಾದರೂ ಕಾಣಿಸಿಕೊಳ್ಳದ ಮುಖದಲ್ಲಿ ಸದಾ ಮುಗುಳ್ನಗು. ಒಂದು ಕಿರುನಗೆ ಬೀರಿದರೆ ಚೆನ್ನಾಗಿದ್ದೀರಾ? ಎಂದು ಉಭಯ ಕುಶಲೋಪರಿ ವಿಚಾರಿಸಿಕೊಂಡಂತೆ…… ಮಾತು ಬೆಳ್ಳಿಯಾದರೆ, ಮೌನ ಬಂಗಾರ ಎನ್ನುವ ಭಾವ. ಇವರು ಮಾಜಿ ಮುಖ್ಯಮಂತ್ರಿ ಒಂಟಿಗಲಸ ಬಂಗಾರಪ್ಪನವರ ಭಾಮೈದ.

ಮಾತು-ನಡೆ-ನುಡಿ ಕಲಿಸಿಕೊಟ್ಟ ಭಾವ ಬಂಗಾರಪ್ಪ ಸತ್ತರೂ ಬದುಕಿರಲಿ ಆತ್ಮವಿಶ್ವಾಸ ಎಂದು ಭೋದಿಸಿದ್ದರು. ಭಾವ ಬಂಗಾರಪ್ಪನವರನ್ನು ಅನುಸರಿಸಿದ ಭೀಮಣ್ಣ ಬಂಗಾರಪ್ಪನವರಂತೆ ದೈಹಿಕ ಶ್ರಮ ರೂಢಿಸಿಕೊಂಡರು. ಪಕ್ಕಾ ಕೃಷಿಕರಾಗಿದ್ದ ಇವರು ಕೃಷಿಯಲ್ಲಿ ಲಾಭ ಮಾಡುತ್ತಲೇ ಉದ್ಯಮದೆಡೆ ಸಾಗಿದರು. ಅಲ್ಲಿಯೂ ಮುಟ್ಟಿದ್ದೆಲ್ಲ ಚಿನ್ನ.

ಸಾಮಾಜಿಕ, ರಾಜಕೀಯ ನೇತೃತ್ವದ ಮಳಲಗಾಂವ ತಿರುಕಪ್ಪನವರ ಕುಟುಂಬದ ಕುಡಿ ಭೀಮಣ್ಣ ರಾಜಕೀಯ ಸಂಪರ್ಕದಲ್ಲಿದ್ದು ಹಲವು ಬಾರಿ ವಿಧಾನಸಭೆ, ಲೋಕಸಭೆ ಪ್ರವೇಶಿಸುವ ಪ್ರಯತ್ನ ಮಾಡಿ ಸೋತರು. ಆದರೆ ಎದೆಗುಂದಲಿಲ್ಲ. ಕೃಷಿ-ಉದ್ಯಮ ಇಷ್ಟು ಅನಾಯಾಸವಾಗಿ ಕೈ ಹಿಡಿದಿರುವಾಗ ರಾಜಕೀಯದಲ್ಲಿ ಗೆಲುವು ಮರೀಚಿಕೆಯಾಗುತ್ತಿದೆಯಲ್ಲ ಎಂದರಿತವರು ಮತ್ತೆ ಪ್ರಯತ್ನ ಮಾಡಿದರು. ಹಿಂದೆ ಬಂಗಾರಪ್ಪನಂಥ ಬಲಶಾಲಿ ನಾಯಕನ ಜೊತೆ ಹಿಂಬಾಲಿಸಿ ಕೆಲವು ಹುದ್ದೆಗಳನ್ನು ಅನಾಯಾಸವಾಗಿ ಪಡೆದಿದ್ದರು ಆದರೆ ಛಲದಿಂದ ಗೆಲ್ಲಬೇಕೆಂದು ನಿರ್ಧರಿಸಿದಾಗ ಪಕ್ಷ ಬದಲಾಯಿತು.

ಬಂಗಾರಪ್ಪನವರ ಕೊನೆಗಾಲದಲ್ಲಿ ವೈಯಕ್ತಿಕ, ಕೌಟುಂಬಿಕ ಸಂಬಂಧಗಳನ್ನು ಜತನದಿಂದ ಕಾಪಾಡಿಕೊಂಡವರೇ ಭಿನ್ನ ದಾರಿ ಹಿಡಿದರು. ನಿರಂತರ ೧೩ ವರ್ಷಗಳ ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷತೆಯ ಪಟ್ಟ ನಿರ್ವಹಿಸಿದ ಭೀಮಬಲ ಪ್ರದರ್ಶನದ ನಡುವೆ ಕೂಡಾ ಭೀಮಣ್ಣನವರಿಗೆ ಟಿಕೇಟ್‌ ನಿರಾಕರಣೆಯಾಗಿ ಪಕ್ಷ ಸೋಲು ಅನುಭವಿಸಿತು. ನಿರಂತರ ಮೂರು ದಶಕಗಳ ರಾಜಕೀಯ ಬದುಕಿನಲ್ಲಿ ಸಮಾಜವಾದಿ ಪಕ್ಷದಿಂದ ಒಮ್ಮೆ ಜಿ.ಪಂ. ಸದಸ್ಯರಾದ ಭೀಮಣ್ಣ ನಾಯ್ಕ ರಾಜಕೀಯ ಸಹವಾಸ ಬಿಟ್ಟು ಉದ್ಯಮ-ಕೃಷಿಯಲ್ಲೇ ಪೂರ್ಣಾವಧಿ ತೊಡಗಿಸಿಕೊಂಡರೆ ಹೆಚ್ಚು ಅನುಕೂಲ ಎಂದು ಯೋಚಿಸಿಯೂ ಆಗಿತ್ತು. ಆದರೆ ತನ್ನ ರಾಜಕೀಯ ಜೀವನದುದ್ದಕ್ಕೂ ದಾನ-ಧರ್ಮ ಮರೆಯದ ಭೀಮಣ್ಣ ಕಳೆದ ೨೦ ವರ್ಷಗಳ ಅವಧಿಯುದ್ದಕ್ಕೂ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ದಾನ ಮಾಡಿ ದಾನ ಶೂರ ಕರ್ಣ ಎನಿಸಿಕೊಂಡಿದ್ದಾರೆಂದರೆ… ಅತಿಶಯೋಕ್ತಿಯಲ್ಲ.

ನಿರೀಕ್ಷೆ ಹುಸಿಯಾಗಲಿಲ್ಲ ಗೆಲುವು-ಸೋಲಿನಲ್ಲಿ ಜನಪರವಾಗಿದ್ದ ಭೀಮಣ್ಣ ಒಲ್ಲದ ಮನಸ್ಸಿನಿಂದ ಮತ್ತೆ ವಿಧಾನಸಭೆ ಚುನಾವಣೆ ಎದುರಿಸಿದ್ದರು ಕೊನೆಗೂ ಗೆಲುವು ಅವರ ಪರವಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಪ್ರಬಲ ಪಕ್ಷ ಮತ್ತು ವ್ಯಕ್ತಿ ಬಿ.ಜೆ.ಪಿ. ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸೋಲಿನ ರುಚಿ ತೋರಿಸಿದ ಭೀಮಣ್ಣ ಅಂತೂ ವಿಧಾನಸಭೆ ಪ್ರವೇಶಿಸಿದರು. ಸಾಕಷ್ಟು ಅನುಭವ- ಕಷ್ಟ ನಷ್ಟಗಳ ನಂತರ ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕನಾಗಿ ವಿಧಾನಸೌಧ ಪ್ರವೇಶಿಸುತ್ತಲೇ ಉತ್ತರ ಕನ್ನಡ ಜಿಲ್ಲೆಯ ಜನ ಸಂಬ್ರಮಪಟ್ಟರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ ಜನಪ್ರತಿನಿಧಿಯಾಗದಿದ್ದರೂ ಜನರೊಂದಿಗಿದ್ದ ಭೀಮಣ್ಣ ಶಾಸಕರಾಗುತ್ತಲೇ ಸದನದಲ್ಲಿ ನಿರಂತರ ಹಾಜರಾತಿಯ ಸಮಯಪ್ರಜ್ಞೆಯ ಶಾಸಕ ಎನ್ನುವ ಗೌರವಕ್ಕೆ ಪಾತ್ರರಾದರು. ಕ್ಷೇತ್ರ ಪರ್ಯಟನೆ ಜನರಿಗೆ ಸಹಾಯ ಹಸ್ತ ನೀಡುವ ವಿಷಯದಲ್ಲಿ ವಿರೋಧಿಗಳ ಮೆಚ್ಚುಗೆಗೂ ಪಾತ್ರರಾದರು.

ಈ ಭೀಮಣ್ಣ ನಾಯ್ಕ ಮಳಲಗಾಂವ ರಿಗೆ ೬೦ ದಾಟಿದ ಪ್ರಬುದ್ಧತೆಯ ವಯಸ್ಸು ಆದರೆ ೪೦ ರ ಯುವಕರೂ ನಾಚುವಂತೆ ಕ್ರೀಯಾಶೀಲ, ನಿರಂತರ ಪ್ರವಾಸ ಮಾಡುವ ಭೀಮಣ್ಣ ಮಿತಭಾಶಿ ಅನ್ನೋದೊಂದನ್ನು ಬಿಟ್ಟರೆ ಅವರಿಗೆ ಸಾಟಿಯಾಗುವ ನಾಯಕನೇ ಇಲ್ಲ. ಕ್ಷೇತ್ರದಲ್ಲಿ ಬಡವರ ಬಂಧುವಾಗಿ ಗುರುತಿಸಿಕೊಳ್ಳುತ್ತಿರುವ ಭೀಮಣ್ಣ ಜಿಲ್ಲೆ ರಾಜ್ಯದ ಕ್ರೀಯಾಶೀಲ, ಜನಸ್ಫಂದನೆಯ ಶಾಸಕರಲ್ಲೊಬ್ಬರು. ಅಳಿಯ ರಾಜ್ಯದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸಲಗೆ, ಮಾರ್ಗದರ್ಶನದ ಮೇರೆಗೆ ಜನಪರ ನಾಯಕನಾಗುತ್ತಿರುವ ಭೀಮಣ್ಣ ಶನಿವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದಾರೆ. ಬಂಗಾರಪ್ಪ, ಶಿವರಾಜ್‌ ಕುಮಾರ, ಮಧುಬಂಗಾರಪ್ಪ ತನಗೆ ಸ್ಫೂರ್ತಿ ಎನ್ನುವ ಎಲ್ಲಾ ಜಾತಿ-ಜನವರ್ಗಗಳ ಬೆಂಬಲದ ಭೀಮಣ್ಣ ಶಿರಸಿ ಕ್ಷೇತ್ರದ ಬಹುಸಂಖ್ಯಾತ ನಾಮಧಾರಿಗಳ ಮೊದಲ ಶಾಸಕ. ಕ್ರೀಯಾಶೀಲತೆ, ದಾನ-ಧರ್ಮಗಳಿಂದ ಜನಮೆಚ್ಚುಗೆ ಗಳಿಸುತ್ತಿರುವ ಭೀಮಣ್ಣ ಈ ನೆಲದ ನೈಜ ಪ್ರತಿನಿಧಿ ಎನ್ನುವುದು ಕ್ಷೇತ್ರದ ಹೆಗ್ಗಳಿಕೆ. -ಸಂ. (- ಕೋಲಶಿರ್ಸಿ ಕನ್ನೇಶ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *