


ಬಡವರಿಗೆ ಸಾವ ಕೊಡ ಬ್ಯಾಡ ನನ ದೇವರೆ, ಎಂದು ಜಾನಪದ ಹೇಳುತ್ತೆ.

ಸಿದ್ಧಾಪುರದಲ್ಲಾದ ಮೂರು ದುರಂತಗಳು ಈ ಹೇಳಿಕೆಯನ್ನು ನೆನಪಿಸಿವೆ.
ಮೊದಲ ಆಕಸ್ಮಿಕ ಸಾವು ಶಿವಶಂಕರ್ ಕಟ್ರೆನ್ ಕೋಲಶಿರಸಿಯವರದ್ದು, ೨೦ ವರ್ಷಗಳಿಂದ ಮಾಧ್ಯಮಕ್ಷೇತ್ರದಲ್ಲಿದ್ದು ಪಟ್ಟಭದ್ರರು, ಜಾತಿವಾದಿ ಸೌಮ್ಯ ಮತಾಂಧರನ್ನು ಎದುರಿಸಿದ ಶಿವಶಂಕರ್ ಬಡವರು ಕೌಟುಂಬಿಕ,ಸಾಮಾಜಿಕ, ಸಂಸಾರಿಕ ರಗಳೆಗಳಿಂದ ಅಕಾಲಿಕ ಮರಣಕ್ಕೆ ತುತ್ತಾದ ಶಿವಶಂಕರ್ ತಂದೆ ಲಿಂಗಾ ನಾಯ್ಕರಿಗೆ ೮೦ ವರ್ಷಗಳು, ತಾಯಿ ಲಕ್ಷ್ಮಿಗೆ ೭೦ ವರ್ಷಗಳು ಈ ವೃದ್ಧ ದಂಪತಿಗಳ ನೆರವಿಗೆ ಸಮಾಜ ಕೈಜೋಡಿಸಬೇಕಿದೆ.
ಎರಡನೇ ದುರಂತ ಕೋಲಶಿರ್ಸಿಯದ್ದೇ ೬೬ ವರ್ಷಗಳ ರಾಮಕೃಷ್ಣ ಮೈಲಾ ನಾಯ್ಕ ಹಳದೋಟದಲ್ಲಿ ಅಡಕೆ ಮರದಿಂದ ಬಿದ್ದು ಆಕಸ್ಮಿಕ ಸಾವಿಗೆ ಶರಣಾಗಿದ್ದಾರೆ. ಇಬ್ಬರು ಮಕ್ಕಳ ತಂದೆ ರಾಮಕೃಷ್ಣ ನಾಯ್ಕ ಪತ್ನಿ ಕಳೆದ ಒಂದು ವಾರದಿಂದ ಮಂಗಳೂರು ಆಸ್ಫತ್ರೆಯಲ್ಲಿ ಗಂಭೀರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತಿದ್ದಾರೆ. ವಿವಾಹಿತ ಮಗಳು,ಮಗ ಪತ್ನಿಯೊಂದಿಗೆ ವಾಸವಾಗಿದ್ದ ರಾಮಕೃಷ್ಣ ಕೊಟ್ಟೆ ಕೊನೆ ವೃತ್ತಿ ಮಾಡುತಿದ್ದರೂ ಕಳೆದ ಎರಡು ವರ್ಷಗಳಿಂದ ಈ ವೃತ್ತಿಯನ್ನು ನಿರಂತರವಾಗಿ ಮಾಡುತ್ತಿರಲಿಲ್ಲ ಮದುವೆಯೊಂದರ ಚಪ್ಪರದ ಸಾಮಾನಿಗೆ ಮರ ಕಡಿಯಲು ಹೋದ ಈ ವೃದ್ಧ ಸಾವನ್ನಪ್ಪಿದ್ದು ಅವರ ಪತ್ನಿ ಆಸ್ಫತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದಾಗ. ಒಮ್ಮೆಯೇ ಎರಡ್ಮೂರು ಆಘಾತಕ್ಕೊಳಗಾಗಿರುವ ಈ ಕುಟುಂಬಕ್ಕೂ ಸಹಾಯ ಸಾಂತ್ವನದ ಅನಿವಾರ್ಯತೆ ಇದೆ.
ಮೂರನೇ ಪ್ರಕರಣ ಶ್ಯಾಮಸನ್ ಸಾವು. ನಗರದ ನಿವೃತ್ತ ನೌಕರನ ಸಂಪನ್ನ ಮಗ ಮಳಗಿಯಲ್ಲಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಇವರನ್ನು ಸಂತೈಸಲು ಸಮಾಜ ಸಹಕರಿಸಬೇಕೆಂಬುದು ಸಮಾಜಮುಖಿ ಡಾಟ್ ನೆಟ್ ಕಾಳಜಿ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
