


ಕೆಂದ್ರ ರಕ್ಷಣಾ ಪಡೆ ಸಿ.ಆರ್.ಪಿ.ಎಫ್. ನಲ್ಲಿ ಸಹಾಯಕ ಸಬ್ ಇನ್ಫೆಕ್ಟರ್ ಆಗಿ ಸೇವೆಯಲ್ಲಿದ್ದ ಸುರೇಶ್ ಮೂಕಾ ನಾಯ್ಕ ಹಳದೋಟ ರವಿವಾರ ಬೆಂಗಳೂರಿನ ಆಸ್ಫತ್ರೆಯಲ್ಲಿ ನಿಧನರಾದರು. ಒಂದೂವರೆ ವರ್ಷಗಳಷ್ಟು ಹಿಂದೆ ಮಣಿಪುರದಲ್ಲಿ ಸೇವೆಯಲ್ಲಿದ್ದಾಗಲೇ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಫತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸುಧೀರ್ಘ ಅನಾರೋಗ್ಯ ಪೀಡಿತರಾಗಿದ್ದ ಅವರಿಗೆ ಸೇನೆಯಿಂದಲೇ ಚಿಕಿತ್ಸೆ ನೀಡಲಾಗುತಿತ್ತು. ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಜಮ್ಮು- ಕಾಶ್ಮೀರ, ಅರಣಾಚಲಪ್ರದೇಶ, ಮಣಿಪುರ ಸೇರಿದಂತೆ ದೇಶದಾದ್ಯಂತ ೩೯ ವರ್ಷಗಳ ಸೇನೆಯ ಸೇವೆ ಅವರದ್ದಾಗಿತ್ತು. ಮೃತ ಸುರೇಶ್ ಅಂತ್ಯಕ್ರೀಯೆ ಹುಟ್ಟೂರು ಸಿದ್ಧಾಪುರದ ಹಳದೋಟದಲ್ಲಿ ಮಂಗಳವಾರ ನಡೆಯಬಹುದು ಎನ್ನಲಾಗಿದೆ.

