


ಪ್ರತಿಷ್ಠಿತ ಕುಟುಂಬ, ಸಿದ್ಧಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹಾಗೂ ಅವರ ಪತ್ನಿ ಮತ್ತು ಸಹೋದರನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿರಂತರ ತೇಜೋವಧೆ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯ ಮೂಲಕ ಸೈಬರ್ ಕ್ರೈಮ್ ಪ್ರಕರಣ ದಾಖಲಾದ ಪ್ರಸಂಗ ನಡೆದಿದೆ.

ಸಿದ್ಧಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ದೂರು ದಾಖಲಿಸಿದ್ದು ತಮ್ಮ ಕುಟುಂಬ ಸಾಮಾಜಿಕ,ರಾಜಕೀಯ,ಸಾರ್ವಜನಿಕ ವಲಯಗಳಲ್ಲಿ ಗೌರವಾನ್ವಿತವಾಗಿದ್ದು ಮಲವಳ್ಳಿಯ ಪ್ರದೀಪ್ ಸುರೇಶ್ ಹೆಗಡೆ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ತನ್ನ ಮೇಲೆ, ಜಿ.ಪಂ. ಮಾಜಿ ಸದಸ್ಯೆಯಾಗಿರುವ ತನ್ನ ಪತ್ನಿ ಸುಮಂಗಲಾ ನಾಯ್ಕ ಹಾಗೂ ಸಹೋದರ ಗಣೇಶ್ ನಾಯ್ಕ ಸೇರಿದಂತೆ ಇಡೀ ಕುಟುಂಬದ ಮೇಲೆ ವಿನಾ ಕಾರಣ ತೇಜೋವಧೆ ಪ್ರಯತ್ನ ಮಾಡಿರುವ ಪ್ರದೀಪ್ ಹೆಗಡೆ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿಸಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಪ್ರದೀಪ ಹೆಗಡೆ ವಸಂತ ನಾಯ್ಕ ರ ಊರಿನಲ್ಲಿ ಜಮೀನು ಹೊಂದಿರುವ ವ್ಯಕ್ತಿ. ಈ ವ್ಯಕ್ತಿಯ ಜೊತೆ ವೈಯಕ್ತಿಕ, ಖಾಸಗಿ, ಕೌಟುಂಬಿಕ ವಿರಸಗಳಿರದಿದ್ದರೂ ಹಿಂದುತ್ವ, ಜೈಶ್ರೀರಾಮ ಎನ್ನುವ ಉಕ್ತಿಗಳ ಮೂಲಕ ವಸಂತ ನಾಯ್ಕ ಕುಟುಂಬಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಅನುಚಿತ ಕೆಲಸ ಮಾಡಿ ಅದರಿಂದ ರಾಜಕೀಯ ಕ್ಷೇತ್ರದಲ್ಲಿರುವ ವಸಂತನಾಯ್ಕ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವಾಗಿ ಈ ದುಷ್ಕೃತ್ಯ ಎಸಗಿದ್ದು ಈ ಅನಾಚಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಸಂತನಾಯ್ಕ ದೂರಿನಲ್ಲಿ ಕೋರಿದ್ದಾರೆ.
ಕುಲೀನ ಕುಟುಂಬದ ಪ್ರದೀಪ ಹೆಗಡೆ ಫೇಸ್ ಬುಕ್ ನಲ್ಲಿ ಮಧು ನಾಯ್ಕ ಎಸ್. ಆರ್. ಎನ್ನುವ ಖಾತೆ ತೆರೆದು ಅದರ ಮೂಲಕ ಇಂಥ ಕೀಳು ಕೆಲಸ ಮಾಡುತಿದ್ದ ಎನ್ನಲಾಗಿದೆ. ಬುದ್ಧಿವಂತರೆನ್ನುವ ಇಂಥ ಆಶಾಢಭೂತಿಗಳು ಈ ಭಾಗದಲ್ಲಿ ಪ್ರಭಾವಿಗಳಾಗಿರುವ ದೀವರನ್ನು ಕೇಂದ್ರೀಕರಿಸಿ ಹಿಂದುತ್ವದ ಸೋಗಿನಲ್ಲಿ ವೈದಿಕ ಅನಾಚಾರ ಮಾಡುತ್ತಿರುವ ಬಗ್ಗೆ ದೂರುಗಳಿದ್ದು ಇಂಥ ಮೂರನೇ ದರ್ಜೆಯ ಮತಾಂಧ ದುಷ್ಟ ಪರಿವಾರದ ಸೋಗಲಾಡಿಗಳನ್ನು ಒದ್ದು ಒಳಗೆ ಹಾhttps://www.youtube.com/watch?v=hzOu_a6p97Iಕುವ ಮೂಲಕ ಸಾಮಾಜಿಕ ಅಶಾಂತಿ ಬಯಸುವ ಇಂಥ ಕುತಂತ್ರಿಗಳನ್ನು ನಿಯಂತ್ರಿಸಬೇಕೆಂಬ ಬೇಡಿಕೆವ್ಯಕ್ತವಾಗಿದೆ.


1 Comment