

ಉತ್ತರ ಕನ್ನಡವೆಂದರೆ ಉತ್ತಮ ಕೆಲಸಗಾರರಿಗೆ ಶ್ರೇಷ್ಠ ಜಾಗ, ಒಮ್ಮೆ ಈ ಜಿಲ್ಲೆಯಲ್ಲಿ ಕೆಲಸಮಾಡಿದವರು ಮತ್ತೆ ಈ ಜಿಲ್ಲೆಗೆ ಬರಲು ತವಕಿಸುತ್ತಾರೆ. ಕೆಲವರಿಗೆ ಈ ಜಿಲ್ಲೆಯೆಂದರೆ ಶಿಕ್ಷೆ. ಈಗ ವರ್ಗಾವಣೆ ಅವಧಿ ಪ್ರಾರಂಭವಾಗಿದೆ. ಸಿದ್ಧಾಪುರದಲ್ಲಿ ಉತ್ತಮ ಕೆಲಸ ಮಾಡಿ ಪರ ತಾಲೂಕು,ಜಿಲ್ಲೆಗಳಿಗೆ ತೆರಳಿದ್ದ ಇಬ್ಬರು ಅಧಿಕಾರಿಗಳು ಈಗ ಶಿರಸಿಗೆ ಬಂದಿದ್ದಾರೆ.

ಪಟ್ಟರಾಜಗೌಡ- ಸೊರಬಾ ಮೂಲದ ಪಟ್ಟರಾಜ್ ಗೌಡ ಸಾಗರ ನಿವಾಸಿ. ಈ ಹಿಂದೆ ಸಿದ್ಧಾಪುರದಲ್ಲಿ ತಹಸಿಲ್ದಾರ್ ಆಗಿ ತನ್ನ ಪ್ರಮಾಣಿಕ ಸೇವೆ, ಸಾಹಿತ್ಯ-ಸಾಂಸ್ಕೃತಿಕ ಆಸಕ್ತಿಗಳಿಂದ ಜಿಲ್ಲೆಯಲ್ಲಿ ಹೆಸರು ಮಾಡಿದ್ದರು. ಈಗ ಶಿರಸಿ ತಹಸಿಲ್ಧಾರ್ ಆಗಿ ವರ್ಗಾವಣೆಯಾಗಿರುವ ಇವರು ಈ ಹಿಂದೆ ಹೊನ್ನಾಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಡಿ.ಆರ್.ನಾಯ್ಕ- ಕುಮಟಾ ಮೂಲದ ಡಿ ಆರ್.ನಾಯ್ಕ ಈ ಹಿಂದೆ ಸಿದ್ಧಾಪುರದ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಶಿರಸಿ ಡಿ.ಡಿ.ಪಿ.ಆಯ್. ಆಗಿ ವರ್ಗಾವಣೆಯಾಗಿರುವ ನಾಯ್ಕ ಈ ಹಿಂದೆ ಸಿದ್ಧಾಪುರ, ಕುಮಟಾ, ಬೆಳಗಾವಿ, ಮಂಗಳೂರು ಗಳಲ್ಲಿ ಸೇವೆ ಸಲ್ಲಿಸಿ ಈಗ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಿರಿಯ ಅಧಿಕಾರಿ ಆಗಿರುವುದು ಭರವಸೆಗೆ ಕಾರಣವಾಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________







1 Comment